ಹುಬ್ಬಳ್ಳಿ: ಮದುವೆಯಾಗಿ ನಾಲ್ಕೇ ತಿಂಗಳಿಗೆ ಪತ್ನಿಯನ್ನು ಹೆಲ್ಮೆಟ್‌ನಿಂದ ಹೊಡೆದು ಕೊಂದ ಪತಿ; Video

ಮೃತಳನ್ನು ನಾಗರತ್ನ (19ವ) ಎಂದು ಗುರುತಿಸಲಾಗಿದ್ದು, ಮದುವೆಯಾದ ಬಳಿಕ ಪತಿ ಶಿವರಾಜ್ ಜೊತೆ ಹಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದವು.
Husband kills wife in Hubballi
ಹುಬ್ಬಳ್ಳಿಯಲ್ಲಿ ಪತ್ನಿ ಕೊಂದ ಪತಿ
Updated on

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದ್ದ ಪತ್ನಿಯನ್ನು ಪತಿಯೊಬ್ಬ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ.

ಮೃತಳನ್ನು ನಾಗರತ್ನ (19ವ) ಎಂದು ಗುರುತಿಸಲಾಗಿದ್ದು, ಮದುವೆಯಾದ ಬಳಿಕ ಪತಿ ಶಿವರಾಜ್ ಜೊತೆ ಹಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಈ ಕಾರಣದಿಂದ ನಾಗರತ್ನ ತವರು ಮನೆಗೆ ಬಂದು ಮತ್ತೆ ಪತಿಯ ಮನೆಗೆ ತೆರಳದಿರಲು ನಿರ್ಧರಿಸಿದ್ದಳು ಎನ್ನಲಾಗಿದೆ.

ನನ್ನ ಮಗಳು ಅತ್ತೆಮನೆಗೆ ಹೋಗಲು ನಿರಾಕರಿಸಿದ್ದಳು. ಆದರೆ ಅವಳ ಪತಿ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಮಗೆ ಭರವಸೆ ನೀಡಿದ್ದ. ನಂತರ ಅತ್ತೆಮನೆಯವರು ಮತ್ತು ಪತಿ ಸೇರಿ ಸಂಚು ರೂಪಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ನಾಗರತ್ನ ಅವರ ತಾಯಿ ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಶಿವರಾಜ್‌ನನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Husband kills wife in Hubballi
ಬಳ್ಳಾರಿಯಲ್ಲಿ ಡಬಲ್ ಮರ್ಡರ್: ಹೆಂಡತಿ ಮೇಲೆ ಅನುಮಾನ; ಮಾತುಕತೆಗೆ ಕರೆಸಿ ಪತ್ನಿ, ಮಾವನ ಬರ್ಬರ ಕೊಲೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com