ಸ್ವಂತ ವಿದ್ಯುತ್ ಸ್ಥಾವರ ಹೊಂದಲು ಗೇಟೆಡ್ ಕಮ್ಯುನಿಟಿಗೆ ಅವಕಾಶ: ಅನುಮತಿ ನೀಡಲು ಸರ್ಕಾರ ಚಿಂತನೆ!

ತಮ್ಮ ಸ್ವಂತ ಪ್ರದೇಶದಲ್ಲಿ ಅಥವಾ ದೂರದ ಸ್ಥಳದಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಮತ್ತು ವಿದ್ಯುತ್ ಪೂರೈಸಲು ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಲು ಅವಕಾಶವಿರುತ್ತದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದೊಡ್ಡ ದೊಡ್ಡ ವಸತಿ ಸಂಕೀರ್ಣಗಳು, ಗೇಟೆಡ್ ಸಮುದಾಯಗಳು ಮತ್ತು ವಾಣಿಜ್ಯ ಸಂಸ್ಥೆಗಳು ತಮ್ಮದೇ ಆದ ವಿದ್ಯುತ್ ಸ್ಥಾವರಗಳನ್ನು ಸಾಮೂಹಿಕವಾಗಿ ಸ್ಥಾಪಿಸಲು ಅಧಿಕಾರ ನೀಡಲು ಯೋಜಿಸುತ್ತಿದೆ.

ಗ್ರಾಹಕರು ಸೌರ, ಪವನ ವಿದ್ಯುತ್‌ನ ಮತ್ತು ಹಸಿರು ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗುತ್ತದೆ. ಅವರು ತಮ್ಮ ಸ್ವಂತ ಪ್ರದೇಶದಲ್ಲಿ ಅಥವಾ ದೂರದ ಸ್ಥಳದಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಮತ್ತು ವಿದ್ಯುತ್ ಪೂರೈಸಲು ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಲು ಅವಕಾಶವಿರುತ್ತದೆ.

KERC ನಿಗದಿಪಡಿಸಿದ ಪ್ರಸರಣ ಶುಲ್ಕಗಳು ಮತ್ತು ಸಂಬಂಧಪಟ್ಟ ಎಸ್ಕಾಮ್ ವಿಧಿಸುವ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು KERC ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತಿಮ ಆದೇಶಗಳನ್ನು ರೂಪಿಸುವ ಮೊದಲು KERC ಎಲ್ಲಾ ಪಾಲುದಾರರೊಂದಿಗೆ ಸಭೆಗಳನ್ನು ನಡೆಸಿ, ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತಿದೆ. ಗುಜರಾತ್, ಮಧ್ಯಪ್ರದೇಶ, ದೆಹಲಿ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

Representational image
ಕೈಗಾ ಪರಮಾಣು ವಿದ್ಯುತ್ ಸ್ಥಾವರ: 5, 6ನೇ ಘಟಕಗಳ ನಿರ್ಮಾಣ ಕಾರ್ಯಕ್ಕೆ ವಿರೋಧ; ಅರಣ್ಯ ಅನುಮತಿ ಇಲ್ಲದೇ ಯೋಜನೆ ಮುಂದುವರಿಸಿದ ಆರೋಪ..?

ಕರ್ನಾಟಕವು ಈ ಕ್ಷೇತ್ರವನ್ನು ತಡವಾಗಿ ಪ್ರವೇಶಿಸುತ್ತಿದೆ. ಪ್ರಸ್ತುತ, ವ್ಯಕ್ತಿಯೊಬ್ಬರಿಗೆ ಸೌರ ಫಲಕಗಳನ್ನು ಸ್ಥಾಪಿಸಲು ಅನುಮತಿಸಲಾಗಿದೆ. ಅಪಾರ್ಟ್ಮೆಂಟ್ ಸಂಕೀರ್ಣಗಳ ಮೇಲ್ಛಾವಣಿಗಳಲ್ಲಿ ಮಧ್ಯಮ ಗಾತ್ರದ ಫಲಕಗಳನ್ನು ಅಳವಡಿಸಿಕೊಳ್ಳಲು ಅನುಮತಿಸಲಾಗಿದೆ. ಆದರೆ ಖಾಸಗಿ ವಸತಿ ಘಟಕಗಳು ಇಲ್ಲಿಯವರೆಗೆ ಯಾವುದೇ ದೊಡ್ಡ ಪ್ರಮಾಣದ ಯೋಜನೆ ಕೈ ಗೊಂಡಿಲ್ಲ.

ಒಂದು ವೇಳೆ ದೊಡ್ಡ ದೊಡ್ಡವಸತಿ ಸಮುಚ್ಚಯಗಳು ಗೇಟೆಡ್ ಕಮ್ಯುನಿಟಿಗಳಿಗೆ ಸ್ವಂತ ವಿದ್ಯುತ್ ಸ್ಥಾವರ ಹೊಂದಲು ಅನುಮತಿ ನೀಡಿದರೆ ಗ್ರಿಡ್ ಲೋಡ್ ಅನ್ನು ಕಡಿಮೆ ಮಾಡುವುದರ ಜೊತೆಗೆ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ವಿಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕುಸುಮ್-ಬಿ ಮತ್ತು ಕುಸುಮ್-ಸಿ ಯೋಜನೆಗಳ ಅಡಿಯಲ್ಲಿ ಸರ್ಕಾರಿ ಸಂಸ್ಥೆಗಳು ಈ ಕುರಿತು ಕೆಲಸ ಮಾಡುತ್ತಿವೆ ಎಂದು ಕೆಇಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನೇಕ ಕೈಗಾರಿಕಾ ಘಟಕಗಳು, ಮಾಲ್‌ಗಳು, ಟೆಕ್ ಪಾರ್ಕ್‌ಗಳು, ರಸಗೊಬ್ಬರ ಮತ್ತು ಸಿಮೆಂಟ್ ಕಾರ್ಖಾನೆಗಳು ಮತ್ತು ಸಾರ್ವಜನಿಕ ವಲಯದ ಕಂಪನಿಗಳು ವಿದ್ಯುತ್‌ಗಾಗಿ ಎಸ್ಕಾಮ್‌ಗಳನ್ನು ಸಂಪೂರ್ಣವಾಗಿ ಅವಲಂಬಿಸಿಲ್ಲ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ ರವಿ ಕುಮಾರ್ ಹೇಳಿದರು.

ಕೆಎಂಎಫ್ ತನ್ನದೇ ಆದ ಸ್ಥಾವರವನ್ನು ಸಹ ಹೊಂದಿದೆ. ಈ ವಲಯವನ್ನು ಪ್ರವೇಶಿಸುವ ಕೈಗಾರಿಕಾ ಘಟಕಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com