ಹೋರ್ಡಿಂಗ್‌ಗಳನ್ನು ನಿಯಂತ್ರಿಸುವ, ಜಾಹೀರಾತು ಶುಲ್ಕ ವಿಧಿಸುವ ಮಸೂದೆಗೆ ವಿಧಾನಸಭೆ ಅಂಗೀಕಾರ

ಕಳೆದ ಶುಕ್ರವಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಧಾನಸಭೆಯಲ್ಲಿ ಮುನ್ಸಿಪಾಲಿಟಿಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ-2026 ಅನ್ನು ಮಂಡಿಸಿದ್ದರು.
Karnataka legislators
ಕರ್ನಾಟಕ ವಿಧಾನಸಭೆ
Updated on

ಬೆಂಗಳೂರು: ಹೊರಾಂಗಣ ಜಾಹೀರಾತುಗಳನ್ನು ನಿಯಂತ್ರಿಸುವ ಮತ್ತು ಪುರಸಭೆಗಳು ರಾಜ್ಯಾದ್ಯಂತ ಹೋರ್ಡಿಂಗ್‌ಗಳು, ಜಾಹೀರಾತು ಫಲಕಗಳ ಶುಲ್ಕದ ಮೇಲೆ ತೆರಿಗೆ ವಿಧಿಸಲು ಅನುವು ಮಾಡಿಕೊಡುವ ತಿದ್ದುಪಡಿ ಮಸೂದೆಯನ್ನು ಸೋಮವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಕಳೆದ ಶುಕ್ರವಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಧಾನಸಭೆಯಲ್ಲಿ ಮುನ್ಸಿಪಾಲಿಟಿಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ-2026 ಅನ್ನು ಮಂಡಿಸಿದ್ದರು.

ಚರ್ಚೆಯ ಸಮಯದಲ್ಲಿ ಸದಸ್ಯರಿಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್ ಅವರು, ಅನಧಿಕೃತ ಹೋರ್ಡಿಂಗ್‌ಗಳನ್ನು ನಿಯಂತ್ರಿಸುವುದು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆದಾಯದ ಹರಿವನ್ನು ಖಚಿತಪಡಿಸುವುದು ಮಸೂದೆಯ ಉದ್ದೇಶವಾಗಿದೆ ಎಂದು ಹೇಳಿದರು.

"ಅನಧಿಕೃತವಾಗಿ ಬೋರ್ಡ್‌ಗಳನ್ನು ಹಾಕಿರುವವರು ಒಂದು ರೂಪಾಯಿ ತೆರಿಗೆ ಪಾವತಿಸುತ್ತಿಲ್ಲ. ನಾವು ಅಂತಹ ಬೋರ್ಡ್‌ಗಳನ್ನು ತೆಗೆದುಹಾಕಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರಕ್ಕೆ ಆದಾಯ ಸಿಗುವಂತೆ ನಾವು ಅವುಗಳನ್ನು ಟೆಂಡರ್ ಪ್ರಕ್ರಿಯೆಯ ಅಡಿಯಲ್ಲಿ ತರುತ್ತೇವೆ" ಎಂದು ಸಚಿವರು ತಿಳಿಸಿದರು.

Karnataka legislators
ವಿಧಾನಸಭೆ ಕಲಾಪ: ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಮೂವರು ಅಧಿಕಾರಗಳ ತಲೆದಂಡ!

"ಇದರ ಹೊರತಾಗಿ, ಇತರ ವರ್ಗಗಳಿವೆ. ಕೆಲವು ಬೋರ್ಡ್‌ಗಳು ಸರ್ಕಾರಿ ಭೂಮಿಯಲ್ಲಿವೆ, ಕೆಲವು ಖಾಸಗಿ ಭೂಮಿಯಲ್ಲಿವೆ ಮತ್ತು ಕೆಲವು ಜನರ ಸ್ವಂತ ಆಸ್ತಿಯಲ್ಲಿವೆ. ಇವೆಲ್ಲಕ್ಕೂ ತೆರಿಗೆ ಇದೆ" ಎಂದು ಅವರು ಹೇಳಿದರು. ಚರ್ಚೆಯ ನಂತರ ವಿಧೇಯಕವನ್ನು ಅಂಗೀಕರಿಸಲಾಯಿತು.

ಈ ಮೂಸದೆ ಪ್ರಕಾರ ಯಾವುದೇ ಭೂಮಿಯ ಕಟ್ಟಡದ, ಗೋಡೆಯ ಮೇಲೆ ಅಥವಾ ಮೇಲ್ಭಾಗದಲ್ಲಿ ಯಾವುದೇ ಜಾಹೀರಾತನ್ನು ಪ್ರದರ್ಶಿಸುವ, ಅಳವಡಿಸುವ ಅಥವಾ ಉಳಿಸಿಕೊಂಡಿರುವ ಅಥವಾ ಯಾವುದೇ ರೀತಿಯಲ್ಲಾಗಲಿ ಯಾವುದೇ ಸಾರ್ವಜನಿಕ ಇಲ್ಲವೇ ಖಾಸಗಿ ಸ್ಥಳದಲ್ಲಾಗಲಿ ಸಾರ್ವಜನಿಕರ ದೃಷ್ಟಿಗೆ ಬೀಳುವಂತೆ ಯಾವುದೇ ಜಾಹೀರಾತನ್ನು ಪ್ರದರ್ಶಿಸುವ ಪ್ರತಿಯೊಬ್ಬ ವ್ಯಕ್ತಿಯು, ಹಾಗೆ ಪ್ರದರ್ಶಿಸಿರುವ ಪ್ರತಿಯೊಂದು ಜಾಹಿರಾತಿನ ಮೇಲೆ, ಪೌರ ಪಾಲಿಕೆ(municipal council) ನಿರ್ಣಯದ ಮೂಲಕ ನಿರ್ಧರಿಸಿದ ದರಗಳಲ್ಲಿ ಮತ್ತು ಅಂಥ ವಿಧಾನದಲ್ಲಿ ಹಾಗೂ ಅಂಥ ವಿನಾಯಿತಿಗಳಿಗೊಳಪಟ್ಟು ತೆರಿಗೆಯನ್ನು ಪಾವತಿ ಮಾಡಬೇಕು.

Karnataka legislators
ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಕುರ್ಚಿಗೂ ರಾಜ್ಯಕ್ಕೂ ವಿಶೇಷ ನಂಟು!

ಜಾಹೀರಾತು ಶುಲ್ಕ ವಿಧಿಸುವುದನ್ನು ಪೌರ ಪಾಲಿಕೆ ನಿರ್ಧರಿಸಿದ ತರುವಾಯ ಪೌರ ಪಾಲಿಕೆಯ ಲಿಖಿತ ಅನುಮತಿ ಇಲ್ಲದೆ ಪೌರ ಪ್ರದೇಶದೊಳಗಿನ ಯಾವುದೇ ಭೂಮಿಯ ಕಟ್ಟಡದ, ಗೋಡೆಯ, ಜಾಹೀರಾತು ಫಲಕಗಳ ಅಥವಾ ರಚನೆಯ ಮೇಲೆ ಅಥವಾ ಅದರ ಮೇಲ್ಬಾಗದಲ್ಲಿ ಯಾವುದೇ ಜಾಹೀರಾತನ್ನು ಪ್ರದರ್ಶಿಸುವಂತಿಲ್ಲ, ಅಳವಡಿಸುವಂತಿಲ್ಲ ಅಥವಾ ಉಳಿಸಿಕೊಳ್ಳುವಂತಿಲ್ಲ. ಯಾವುದೇ ಸ್ಥಳದಲ್ಲಿ ಯಾವುದೇ ರೀತಿಯಲ್ಲೇ ಆಗಲಿ ಪ್ರದರ್ಶಿಸುವಂತಿಲ್ಲ.

ಪೌರ ಪಾಲಿಕೆಯು ರಚಿಸಿದ ಯಾವುದೇ ಉಪವಿಧಿಯನ್ನು ಜಾಹೀರಾತು ಉಲ್ಲಂಘಿಸಿದರೆ ಅಥವಾ ಜಾಹೀರಾತಿಗೆ ಸಂಬಂಧಿಸಿದಂತೆ ಶುಲ್ಕ ಯಾವುದಾದರೂ ಬಾಕಿ ಇದ್ದು, ಅದನ್ನು ಪಾವತಿ ಮಾಡಿಲ್ಲದಿದ್ದರೆ ಜಾಹೀರಾತು ಅನುಮತಿಯನ್ನು ನೀಡುವಂತಿಲ್ಲ ಎಂದು ಮಸೂದೆಯಲ್ಲಿ ನಿಯಮ ರೂಪಿಸಲಾಗಿದೆ.‌

ಅಧಿಕೃತ ಅಥವಾ ಅನಧಿಕೃತ ಜಾಹೀರಾತು ಶುಲ್ಕ ಮತ್ತು ದಂಡವನ್ನು ಪಾವತಿಸಲು ವಿಳಂಬವಾದರೆ, ದಂಡವು ಬಾಕಿಯಾದ ದಿನಾಂಕದಿಂದ ಅದನ್ನು ಪಾವತಿಸುವ ದಿನಾಂಕದವರೆಗೆ ವಾರ್ಷಿಕವಾಗಿ ಶೇ.18 ಬಡ್ಡಿ ದರದಲ್ಲಿ ಪಾವತಿಸಲು ಹೊಣೆಗಾರನಾಗಿರುತ್ತಾನೆ. ಯಾವುದೇ ಅನಧಿಕೃತ ಜಾಹೀರಾತು, ದಂಡ ಮತ್ತು ಜುಲ್ಮಾನೆಯನ್ನು ಸಹ ಪಾವತಿಸಲು ಹೊಣೆಗಾರನಾಗಿರುತ್ತಾನೆ‌. ಸ್ಥಳದಲ್ಲೇ ದಂಡವನ್ನು ವಸೂಲಿ ಮಾಡಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com