ನಿಮಗಾಗಿ ಒಬ್ಬ DJ ಬುಕ್ ಮಾಡಿದ್ದೀನಿ- ರೈತ: ಬರಗಾಲ ಬಂದಿದೆ ಎಂದು ನೀವು ಊಟ ಮಾಡೋದು ನಿಲ್ಲಿಸಿಬಿಟ್ಟಿದ್ದೀರಾ?: ಸಿಟ್ಟಿಗೆದ್ದ ಗದಗ ಜಿಲ್ಲಾಧಿಕಾರಿ!
ಜಿಲ್ಲಾಧಿಕಾರಿಗಳು ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಪಾರ್ಟಿಯೊಂದರಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಗದಗ: ಬರಗಾಲ ಇದೆ ಎಂದು ನೀವು ಊಟ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೀರಾ? ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ರೈತರೊಬ್ಬರ ಮೇಲೆ ಗದರಿದ ಪ್ರಸಂಗ ನಡೆದಿದೆ.
ಜಿಲ್ಲಾಧಿಕಾರಿಗಳು ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಪಾರ್ಟಿಯೊಂದರಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋವನ್ನು ನೋಡಿದ ರಾಜೀವ್ ಬೊಮ್ಮನಕಟ್ಟಿ ಎಂಬ ರೈತರು, ಜಿಲ್ಲಾಧಿಕಾರಿ ಶ್ರೀಧರ್ ಅವರಿಗೆ ಮೊಬೈಲ್ ಕರೆ ಮಾಡಿ, ತೀವ್ರ ಬರಗಾಲದಿಂದ ರೈತರು ಸಂಕಷ್ಟದಲ್ಲಿರುವಾಗ, ನೀವು ನಿಮ್ಮ ಅಧಿಕೃತ ನಿವಾಸದಲ್ಲಿ ಪಾರ್ಟಿ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಸಿಟ್ಟಿಗೆದ್ದ ಜಿಲ್ಲಾಧಿಕಾರಿಗಳು, "ಬರಗಾಲ ಇದೆ ಎಂದು ನೀವು ಊಟ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೀರಾ?" ಎಂದು ಮರುಪ್ರಶ್ನಿಸಿದರು.
ಭಾನುವಾರ ಬೆಳಿಗ್ಗೆ ವೈರಲ್ ಆದ ಈ ನೃತ್ಯದ ವಿಡಿಯೋ, ಸೋಮವಾರ ಬೆಳಿಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ಆಡಿಯೋ ಕ್ಲಿಪ್‌ನಲ್ಲಿ, ರೈತರು ಜಿಲ್ಲಾಧಿಕಾರಿಗಳಿಗೆ, "ಸರ್, ನಿಮಗಾಗಿ ನಾನು ಡಿಜೆ (DJ) ಒಬ್ಬರನ್ನು ಬುಕ್ ಮಾಡಿದ್ದೇನೆ. ಅವರು ನಾಳೆ ಬರುತ್ತಾರೆ" ಎಂದು ಹೇಳುವುದು ಕೇಳಿಸುತ್ತದೆ. ಗದಗ ಜಿಲ್ಲೆಯಲ್ಲಿ ರೈತರು ಬೆಳೆಗಳಿಗೆ ಹಾಗೂ ಕುಡಿಯಲು ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ ಎಂದು ರೈತರು ವಿವರಿಸಿದರು. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಅಧಿಕಾರಿಗಳೊಂದಿಗೆ ಸೇರಿ ಅಧಿಕೃತ ಕಟ್ಟಡದಲ್ಲಿ ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದೀರಿ. ಹಾಗಾಗಿ, ನಾನೇ ಡಿಜೆ ಒಬ್ಬರನ್ನು ವ್ಯವಸ್ಥೆ ಮಾಡಿದ್ದೇನೆ, ಶೀಘ್ರದಲ್ಲೇ ಅವರನ್ನು ನಿಮ್ಮ ಕಚೇರಿಗೆ ಕರೆತರುತ್ತೇನೆ.
ಗದಗದಲ್ಲಿ ರೈತರು ಬೆಳೆಗಳಿಗೆ ಹಾಗೂ ಕುಡಿಯಲು ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ ಎಂದು ರೈತರು ಹೇಳಿದರು. "ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಅಧಿಕಾರಿಗಳೊಂದಿಗೆ ಸೇರಿ ಅಧಿಕೃತ ಕಟ್ಟಡದಲ್ಲಿ ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದೀರಿ.
ನಾನೇ ಡಿಜೆ ಒಬ್ಬರನ್ನು ವ್ಯವಸ್ಥೆ ಮಾಡಿದ್ದೇನೆ, ಶೀಘ್ರದಲ್ಲೇ ಅವರನ್ನು ನಿಮ್ಮ ಕಚೇರಿಗೆ ಕರೆತರುತ್ತೇನೆ ಎಂದಿದ್ದಾರೆ." ಇದಕ್ಕೆ ಸಿಟ್ಟಿಗೆದ್ದ ಜಿಲ್ಲಾಧಿಕಾರಿಗಳು, "ನವೆಂಬರ್ 30ರಂದು (ನಿವೃತ್ತಿಯ ದಿನ) ಡಿಜೆಯನ್ನು ಕರೆದುಕೊಂಡು ಕಚೇರಿಗೆ ಬನ್ನಿ, ಆಗ ಮಾತನಾಡೋಣ" ಎಂದು ರೈತರಿಗೆ ಹೇಳಿದರು.
ಮೊದಲು ಶ್ರೀಧರ್ ಅವರು, ತಾನು ಯಾವುದೇ ತಪ್ಪು ಮಾಡಿಲ್ಲ ಎಂಬಂತೆ ಜಾರಿಕೊಳ್ಳುವ ಉತ್ತರ ನೀಡಿದರು. ನಂತರ, 'ನನಗೆ ಕರೆ ಮಾಡಲು ನಿಮಗೆ ಯಾರು ಹೇಳಿದರು? ಡಿಜೆ ಇದ್ದರೆ ನಿಮಗೇನು ತೊಂದರೆ? ನಿಮ್ಮ ಸಮಸ್ಯೆ ಏನೇ ಇದ್ದರೂ, ಸೋಮವಾರ ಬೆಳಿಗ್ಗೆ 9.30ಕ್ಕೆ ನನ್ನ ಕಚೇರಿಗೆ ಬನ್ನಿ. ನಮಗೆ ಸಾಧ್ಯವಾದ ಸಹಾಯವನ್ನು ಮಾಡುತ್ತೇವೆ' ಎಂದು ಹೇಳಿದ್ದಾಗಿ ರೈತರು ತಿಳಿಸಿದ್ದಾರೆ,
ಜಿಲ್ಲಾಧಿಕಾರಿಗಳು ನವೆಂಬರ್ 30ರಂದು ನಿವೃತ್ತರಾಗುತ್ತಿದ್ದಾರೆ. ಇದು ಅವರ ಅಧಿಕಾರಾವಧಿಯ ಕೊನೆಯ ವಾರವಾಗಿರುವುದರಿಂದ, ಅವರಿಗೆ ಯಾವುದೇ ಜವಾಬ್ದಾರಿ ಅಥವಾ ಕಾಳಜಿ ಇಲ್ಲದಂತಿದೆ" ಎಂದು ಹೇಳಿದರು. ಮಾಜಿ ಸಚಿವ ಸಿ.ಸಿ. ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡುವಾಗ, "ಡಿಸಿ (ಜಿಲ್ಲಾಧಿಕಾರಿ) ನಿವೃತ್ತರಾಗುತ್ತಿದ್ದಾರೆ, ಅವರು ಎಲ್ಲರಿಗೂ ಒಂದು ರೀತಿಯ ಪೀಡೆಯಾಗಿದ್ದಾರೆ" ಎಂದು ಹೇಳಿದರು.
ಶ್ರೀಧರ್ ಅವರ ಅಧಿಕೃತ ದೂರವಾಣಿಯು ಸಂಜೆ 5 ಗಂಟೆಗೆ ಸ್ವಿಚ್ ಆಫ್ ಆಗುತ್ತದೆ ಮತ್ತು ಮರುದಿನ ಬೆಳಿಗ್ಗೆ 11 ಗಂಟೆಯ ನಂತರವಷ್ಟೇ ಸ್ವಿಚ್ ಆನ್ ಆಗುತ್ತದೆ ಎಂದು ಅವರು ಆರೋಪಿಸಿದರು. "ಅವರು ಚುನಾಯಿತ ಪ್ರತಿನಿಧಿಗಳೊಂದಿಗೆ ಅಥವಾ ಬೇರೆ ಯಾವುದೇ ನಾಯಕರೊಂದಿಗೆ ಮಾತನಾಡುವುದಿಲ್ಲ" ಎಂದು ಪಾಟೀಲ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



