₹8.3 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ; ಕರೆಂಟ್ ಹೋಗಿ ಮೊಬೈಲ್ ಟಾರ್ಚ್ ಲೈಟ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ; Video

ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿ ಸುಮಾರು 8.30 ಕೋಟಿ ರೂ ವೆಚ್ಚದ ಸುಸಜ್ಜಿತ 30 ಹಾಸಿಗೆಯ ಉತ್ತಮ ಕಟ್ಟಡ ನಿರ್ಮಾಣವಾಗಿದೆ.
Treatment in mobile torch
ಮೊಬೈಲ್ ಟಾರ್ಚ್ ನಲ್ಲಿ ಚಿಕಿತ್ಸೆ
Updated on: 

ವಿಜಯಪುರ: ಅಪಘಾತದಲ್ಲಿ ಗಾಯಗೊಂಡವರಿಗೆ ಮೊಬೈಲ್‌ ಟಾರ್ಚ್‌ ಹಾಕಿ ಚಿಕಿತ್ಸೆ ನೀಡಿದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೊ ಹರಿದಾಡುತ್ತಿದೆ.

ಕರೆಂಟ್ ಇಲ್ಲದೇ ಕತ್ತಲು

ಮಂಗಳವಾರ ದೇವರಹಿಪ್ಪರಗಿ ಪಟ್ಟಣದ ಇಂಡಿ ರಸ್ತೆಯಲ್ಲಿ ಬೊಲೆರೋ, ಟಂಟಂ ಹಾಗೂ ಮೋಟಾರ್ ಸೈಕಲ್ ಅಪಘಾತದಲ್ಲಿ ಸುಮಾರು 10 ಜನರಿಗೆ ಗಾಯಗಳಾಗಿದ್ದವು. ಅದರಲ್ಲಿ 5 ಜನರಿಗೆ ಗಂಭೀರ ಗಾಯಗಳಾಗಿತ್ತು. ಹೀಗಾಗಿ ತುರ್ತು ಚಿಕಿತ್ಸೆಗೆ ರೋಗಿಗಳನ್ನು ದೇವರಹಿಪ್ಪರಗಿಯ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೇ ಕತ್ತಲು ಆವರಿಸಿತ್ತು. ಇದರಿಂದಾಗಿ ಗ್ರಾಮಸ್ಥರು, ಗಾಯಾಳುಗಳು ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು.

Treatment in mobile torch
ಸರ್ಕಾರಿ ಆಸ್ಪತ್ರೆ ಬೇಡ, ಆದ್ರೆ ದುಡ್ಡು ಬೇಕು! ರಾಜ್ಯದ 69 ಶಾಸಕರ ವೈದ್ಯಕೀಯ ವೆಚ್ಚ ₹7.40 ಕೋಟಿ ಮರುಪಾವತಿ ಮಾಡಿದ ಸರ್ಕಾರ

ಈ ವೇಳೆ ಗೊಂದಲದ ವಾತಾವರಣ ಉಂಟಾಗಿ ಮೊಬೈಲ್‌ ಟಾರ್ಚ್‌ ಮೂಲಕ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಎದುರಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿ ಸುಮಾರು 8.30 ಕೋಟಿ ರೂ ವೆಚ್ಚದ ಸುಸಜ್ಜಿತ 30 ಹಾಸಿಗೆಯ ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಇದನ್ನು ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹಾಗೂ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಲೋಕಾರ್ಪಣೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com