ಬಳ್ಳಾರಿ: ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿ; ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆ

ವರದಕ್ಷಿಣೆಗಾಗಿ ಗಂಡ ಪೀಡಿಸುತ್ತಿದ್ದರಿಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತುಂಗಭದ್ರಾ ಕಾಲುವೆಗೆ ಎಸೆದು ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಳ್ಳಾರಿ ನಗರದ ಅಲ್ಲಿಪುರ ಬಳಿ ನಡೆದಿದೆ.
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
Updated on: 

ಬಳ್ಳಾರಿ: ವರದಕ್ಷಿಣೆಗಾಗಿ ಗಂಡ ಪೀಡಿಸುತ್ತಿದ್ದರಿಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತುಂಗಭದ್ರಾ ಕಾಲುವೆಗೆ ಎಸೆದು ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಳ್ಳಾರಿ ನಗರದ ಅಲ್ಲಿಪುರ ಬಳಿ ನಡೆದಿದೆ.

ಮೃತರನ್ನು ಬಳ್ಳಾರಿ ನಗರದ ಮಿಲ್ಲರ್ ಪೇಟೆ ನಿವಾಸಿ 29 ವರ್ಷದ ಲತೀಪಾ ಸಿಮ್ರಾನ್, 3 ವರ್ಷದ ಮಹಮ್ಮದ್ ಅಯಾನ್ ಮತ್ತು 2 ವರ್ಷದ ಆಯಿಷಾ ಫಾತಿಮಾ (2) ಎಂದು ಗುರುತಿಸಲಾಗಿದೆ. ಒಂದೇ ವೇಲ್‌ಗೆ ಮಕ್ಕಳನ್ನು ಕಟ್ಟಿ ಲತೀಪಾ ಸಿಮ್ರಾನ್ ಕಾಲುವೆಗೆ ಎಸೆದಿದ್ದರು. ಇಂದು ಬೆಳಗ್ಗೆ ಲತೀಪಾ ಸಿಮ್ರಾನ್ ಮೃತದೇಹ ಪತ್ತೆಯಾಗಿತ್ತು. ಬಳಿಕ ಕರ್ನಾಟಕದ ಗಡಿಭಾಗದ ನಾಗಲಾಪುರ ಬಳಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಪ್ರಕರಣ ಸಂಬಂಧ ಪತಿ ಸದ್ದಾಂ ಹುಸೇನ್ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವರದಕ್ಷಿಣೆ ತರುವಂತೆ ಒತ್ತಾಯಿಸಿ, ನಿತ್ಯ ಹಲ್ಲೆ ನಡೆಸುವುದರ ಜೊತೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಸಿಮ್ರಾನ್ ಕುಟುಂಬಸ್ಥರು ಆರೋಪಿಸಿದ್ದು ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com