‘ಈಜಿಪುರ ಫ್ಲೈಓವರ್ Roadstersಗಳಿಗಾಗಿಯೇ ನಿರ್ಮಿಸಿದ್ದು’: ಅಪೂರ್ಣ ಫ್ಲೈಓವರ್‌ ಕುರಿತು ಸರ್ಕಾರದ ವಿರುದ್ಧ ಟ್ರೋಲ್! Video

ದಶಕದ ಹಿಂದೆಯೇ ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೇ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ರಾಜ್ಯ ಸರ್ಕಾರವನ್ನು..
Man mocks Govt over delayed Bengaluru Flyover
ಈಜಿಪುರ ಮೇಲ್ಸೇತುವೆ
Updated on: 

ಬೆಂಗಳೂರು: ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಇತ್ತೀಚೆಗೆ ಅನಾವರಣಗೊಳಿಸಿದ್ದ Roadsters ಜಗತ್ತಿನಾದ್ಯಂತ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಬೆಂಗಳೂರಿನ ಈಜಿಪುರ ಮೇಲ್ಸೇತುವೆ ಕೂಡ ಇದೇ ವಿಚಾರವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ.

ಅರೆ ಇದೇನಿದು.. ಎಲ್ಲಿಯ ರೋಡ್`ಸ್ಟರ್ ಕಾರು..? ಎಲ್ಲಿಯ ಈಜಿಪುರ ಮೇಲ್ಸೇತುವೆ? ಎಂದು ಗೊಂದಲಗೊಳ್ಳಬೇಡಿ.. ನಗರದ ಈಜಿಪುರ ಫ್ಲೈಓವರ್ ಕಾಮಗಾರಿ ವರ್ಷಗಳಿಂದ ಪೂರ್ಣಗೊಳ್ಳದೆ ಉಳಿದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.

ದಶಕದ ಹಿಂದೆಯೇ ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೇ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ರಾಜ್ಯ ಸರ್ಕಾರವನ್ನು ಭೀಕರವಾಗಿ ಟ್ರೋಲ್ ಮಾಡಲಾಗುತ್ತಿದೆ.

ವ್ಯಕ್ತಿಯೊಬ್ಬರು ಫ್ಲೈಓವರ್‌ ಕುರಿತು ಮಾಡಿರುವ ವ್ಯಂಗ್ಯಾತ್ಮಕ ಟ್ರೋಲ್ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Man mocks Govt over delayed Bengaluru Flyover
ಹೆಚ್ಚುವರಿ ಕಾರ್ಮಿಕರ ಕರೆತಂದು, ಈಜಿಪುರ ಮೇಲ್ಸೇತುವೆ ಕಾಮಗಾರಿ ಕಾರ್ಯ ಪೂರ್ಣಗೊಳಿಸಿ: GBA ಖಡಕ್ ಸೂಚನೆ..!

ರೋಡ್ ಸ್ಟರ್ ಗಾಗಿಯೇ ಮಾಡಿದ ಈಜಿಪುರ ಮೇಲ್ಸೇತುವೆ

@madhurchadha ಎಂಬ ಎಕ್ಸ್ ಖಾತೆದಾರ ಪೋಸ್ಟ್ ಮಾಡಿರುವ ಈ ಎಐ ರಚಿತ ವಿಡಿಯೋದಲ್ಲಿ ಎಲಾನ್ ಮಸ್ಕ್ ಅವರ ರೋಡ್ ಸ್ಟರ್ ಕಾರು ಈಜಿಪುರ ಮೇಲ್ಸೇತುವೆಯ ಪಿಲ್ಲರ್ ಮೇಲೇರಿ ಬಳಿಕ ಕೆಳಗಿಳಿಯುತ್ತದೆ. ಇದಕ್ಕೆ ವ್ಯಕ್ತಿ ಅಡಿ ಬರಹ ಕೂಡ ನೀಡಿದ್ದು, ‘ಈಜಿಪುರ ಫ್ಲೈಓವರ್ ಅಪೂರ್ಣವಾಗಿಲ್ಲ; ರೋಡ್‌ಸ್ಟರ್‌ಗಳಿಗಾಗಿ ಮೊದಲೇ ನಿರ್ಮಿಸಲಾಗಿದೆ’ ಎಂಬ ಅರ್ಥದಲ್ಲಿ ಬರೆದು ವ್ಯಂಗ್ಯವಾಡಿದ್ದಾರೆ.

ಎಕ್ಸ್ ಖಾತೆದಾರ ಈ ಹೇಳಿಕೆಯ ಮೂಲಕ ಸರ್ಕಾರದ ಕಾಮಗಾರಿ ವಿಳಂಬವನ್ನು ಲೇವಡಿ ಮಾಡಿದ್ದಾರೆ. ಈಜಿಪುರ ಫ್ಲೈಓವರ್‌ನ ಕಾಮಗಾರಿ ಪೂರ್ಣಗೊಳ್ಳದಿರುವುದನ್ನೇ ಗುರಿಯಾಗಿಸಿಕೊಂಡು ಮಾಡಲಾಗಿರುವ ಇಂತಹ ವ್ಯಂಗ್ಯಗಳು, ಬೆಂಗಳೂರಿನ ಮೂಲಸೌಕರ್ಯ ಯೋಜನೆಗಳ ವಿಳಂಬದ ಬಗ್ಗೆ ಸಾರ್ವಜನಿಕರಲ್ಲಿರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತಿವೆ.

ಅಮೆರಿಕ ರಸ್ತೆ ಮೇಲೆ ಮಾತ್ರವಲ್ಲ ಆಕಾಶದಲ್ಲಿ ಹಾರಾಡುವ ಕಾರುಗಳನ್ನೂ ತಯಾರಿಸಿಯಾಗಿದೆ. ಈಗಲಾದರೂ ಈಜಿಪುರ ಮೇಲ್ಸೇತುವೆ ಪೂರ್ಣಗೊಳಿಸಿ ಎಂಬರ್ಥದಲ್ಲಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.

ಏನಿದು ಈಜಿಪುರ ಮೇಲ್ಸೇತುವೆ ವಿವಾದ?

ಈಜಿಪುರ–ಕೇಂದ್ರಿಯ ಸದನ್ ಫ್ಲೈಓವರ್ ಯೋಜನೆ 2017ರಲ್ಲಿ ಆರಂಭವಾಗಿದ್ದು, 2019ರ ನವೆಂಬರ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಭೂಸ್ವಾಧೀನ ಸಮಸ್ಯೆಗಳು, ಗುತ್ತಿಗೆದಾರರ ಬದಲಾವಣೆ ಮತ್ತು ಕಾಮಗಾರಿಯ ವಿಳಂಬದಿಂದ ಯೋಜನೆ ಹಲವು ವರ್ಷಗಳಿಂದ ಸುದ್ದಿಯಲ್ಲಿದೆ. ಬೆಂಗಳೂರಿನ ಈ ಫ್ಲೈಓವರ್ ಅನ್ನು ನೆಟ್ಟಿಗರು ಈ ಹಿಂದೆ ‘ಬೆಂಗಳೂರು ಸ್ಟೋನ್‌ಹೆಂಜ್‌’ ಮತ್ತು ‘ಐತಿಹಾಸಿಕ ಸ್ಮಾರಕ’ ಎಂದೂ ವ್ಯಂಗ್ಯವಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com