ಬೆಂಗಳೂರು: ಕ್ಲಿನಿಕ್‌ನಿಂದ ಹೊರಬರುತ್ತಲೇ ಪತ್ನಿ ಮೇಲೆ ಆ್ಯಸಿಡ್ ದಾಳಿ, ಮಾರಕಾಸ್ತ್ರದಿಂದ ಹಲ್ಲೆ!

ಜೆಪಿ ನಗರದ ಮೂರನೇ ಹಂತದಲ್ಲಿರುವ ಕ್ಲಿನಿಕ್‌ನಿಂದ ಮಹಿಳೆ ಉಪಾಹಾರಕ್ಕಾಗಿ ಹೊರಬಂದಾಗ ಈ ಘಟನೆ ಬೆಳಿಗ್ಗೆ ಸುಮಾರು 9.15ರ ಸುಮಾರಿಗೆ ನಡೆದಿದೆ.
Representative Image
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ಜೆಪಿ ನಗರದ ಬಳಿ ವ್ಯಕ್ತಿಯೊಬ್ಬ ತನ್ನ 26 ವರ್ಷದ ಪತ್ನಿಯ ಮೇಲೆ ನೆಲ ಸ್ವಚ್ಛಗೊಳಿಸುವ ಆ್ಯಸಿಡ್ (floor cleaner acid) ಎರಚಿ, ನಂತರ ಆಕೆಯ ಮೇಲೆ ಮಾರಕಾಸ್ತ್ರದಿಂದ ಹಲವು ಬಾರಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದವರಾದ ಮತ್ತು ಇಲ್ಲಿನ ಖಾಸಗಿ ಕ್ಲಿನಿಕ್ ಒಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೆಪಿ ನಗರದ ಮೂರನೇ ಹಂತದಲ್ಲಿರುವ ಕ್ಲಿನಿಕ್‌ನಿಂದ ಮಹಿಳೆ ಉಪಾಹಾರಕ್ಕಾಗಿ ಹೊರಬಂದಾಗ ಈ ಘಟನೆ ಬೆಳಿಗ್ಗೆ ಸುಮಾರು 9.15ರ ಸುಮಾರಿಗೆ ನಡೆದಿದೆ. ಆ ವ್ಯಕ್ತಿ ಆಕೆಯ ಮೇಲೆ ನೆಲ ಸ್ವಚ್ಛಗೊಳಿಸುವ ಆ್ಯಸಿಡ್ ಎರಚಿ, ಆಕೆಯನ್ನು ಬೆನ್ನಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

ಆತ ನೆಲಮಹಡಿಯ ಪ್ರವೇಶದ್ವಾರದ ಬಳಿ ಆಕೆಯನ್ನು ತಡೆದು, ಮಚ್ಚಿನಿಂದ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಘಟನೆ ಬಗ್ಗೆ ತಿಳಿದ ಕೂಡಲೇ ಸಮೀಪದಲ್ಲಿದ್ದ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ, ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯ ವಿಡಿಯೋ ಎಂದು ಹೇಳಲಾದ ದೃಶ್ಯದಲ್ಲಿ, ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಮಚ್ಚಿನಂತೆ ಕಾಣಿಸುವ ಆಯುಧದಿಂದ ಹಲವು ಬಾರಿ ದಾಳಿ ಮಾಡುತ್ತಿರುವುದು ಕಂಡುಬರುತ್ತದೆ.

Representative Image
ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ; ಆರೋಪಿಗಾಗಿ ಪೊಲೀಸರ ಶೋಧ

ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ಘಟನೆಯನ್ನು ಸೆರೆಹಿಡಿಯುತ್ತಿರುವುದು ಕಂಡುಬಂದಿದೆ; ಅದೇ ವೇಳೆ, ಇನ್ನು ಕೆಲವರು ಮಧ್ಯಪ್ರವೇಶಿಸಿ ಆ ದಾಳಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ.

ಮಚ್ಚಿನಿಂದ ದಾಳಿ ನಡೆಸುತ್ತಿದ್ದ ವ್ಯಕ್ತಿಯನ್ನು ಕಂಡು ಜನರು ಬಹುಶಃ ಭಯಗೊಂಡಿರಬಹುದು ಮತ್ತು ಮಹಿಳೆಯನ್ನು ರಕ್ಷಿಸಲು ತಕ್ಷಣವೇ ಹತ್ತಿರಕ್ಕೆ ಹೋಗಲು ಹಿಂಜರಿದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಆ ದಂಪತಿ ಕಳೆದ ಕೆಲಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com