

ಬಸ್‌ಸ್ಟಾಪಲ್ಲಿ ರಾಶಿರಾಶಿ ಜನ ಬಸ್ಸಿಗಾಗಿ ಕಾಯ್ತಾ ಇದಾರೆ... ಮಳೆ ನಿಲ್ತಿಲ್ಲ... ಬಸ್ ಬರ್ತಾ ಇಲ್ಲ.
ಅಷ್ಟೊತ್ತಿಗೊಬ್ಬ ಭಿಕ್ಷುಕ ಬಂದ.
ಮಳೇಲಿ ಸ್ವಲ್ಪ ತೊಯ್ದಿದ್ದ.
ಅಲ್ಲಿದ್ದ ಜನರೆದುರು ಕೈಯ್ಯೊಡ್ಡಿದ.
ಜನರಿಗೆ ಪಾಪ ಅನ್ನಿಸಿ ಚಿಲ್ಲರೆ ಹಾಕಿದರು.
ಒಂದಿಪ್ಪತ್‌ಮೂವತ್ ರುಪಾಯ್ ಆಯ್ತೋ ಏನೋ.. ಸಾಕು ಅನ್ನಿಸಿರಬೇಕು.
ಬೇಡುವುದ ನಿಲ್ಲಿಸಿದ.
ಒಂದು ಆಟೋ ಹತ್ಕೊಂಡ್ ಹೋಗೇಬಿಟ್ಟ.
ಕೊಟ್ಟ ಕೋಡಂಗಿಗಳು ಮುಂದುವರಿಸಿದರು ಕಾಯೋ ಕಾಯಕವನ್ನ... ಮಳೆ ನಿಲ್ಲೋದನ್ನ... ಇನ್ನೂ ಬಾರದಿರೋ ಬಸ್ಸನ್ನ... ಇನ್ನೊಬ್ಬ ಭಿಕ್ಷುಕನನ್ನ (!?).
- ನವೀನ್ ಸಾಗರ್