ಕೋಣೆಯಲ್ಲಿ 4 ಮೇಣದಬತ್ತಿಗಳು ಉರಿಯುತ್ತಿದ್ದವು.
ಒಂದನೆಯದ್ದು: ನಾನು ಶಾಂತಿ. ಯಾರೂ ಉಳಿಸಿಕೊಳ್ಳುವುದಿಲ್ಲ. ಹಾಗಾಗಿ ನಾನು ಬೇಗ ನಶಿಸುತ್ತೇನೆ.
ಹೇಳಿದ ಸ್ವಲ್ಪ ಸಮಯದಲ್ಲೇ ಆರಿಹೋಯಿತು.
ಎರಡನೆಯದ್ದು: ನಾನು ನಂಬಿಕೆ. ಹೆಚ್ಚಿನವರು ಉಳಿಸಿಕೊಳ್ಳುವುದಿಲ್ಲ. ಹೆಚ್ಚು ಸಮಯ ಉರಿಯಲು ಸಾಧ್ಯವಿಲ್ಲ.
ಹಾಗೆಂದ ತಕ್ಷಣ ಆರಿಹೋಯಿತು.
ಮೂರನೆಯದ್ದು: ನಾನು ಪ್ರೀತಿ. ನನ್ನನ್ನು ಯಾರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಹತ್ತಿರ ಇರುವವರ ಪ್ರೀತಿಯನ್ನೂ ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ ಎನ್ನುತ್ತ ಆರಿಹೋಯಿತು.
ಅಷ್ಟಾಗುವಾಗ ಒಬ್ಬ ಬಾಲಕ ಕೊಠಡಿಯ ಒಳಗೆ ಬಂದ. ಮೂರು ಮೇಣದ ಬತ್ತಿಗಳು ಪೂರ್ತಿಯಾಗಿ ಕರಗದೆ ಆರಿರುವುದನ್ನು ನೋಡಿ ಬೇಸರಿಸಿದ.
ನಾಲ್ಕನೆಯದ್ದು: ಬೇಸರಿಸಬೇಡ. ನಾನಿನ್ನೂ ಉರಿಯುತ್ತಿದ್ದೇನೆ. ಉಳಿದವುಗಳನ್ನು ನನ್ಮೂಲಕ ಹೊತ್ತಿಸು. ನಾನು ವಿಶ್ವಾಸ.
ಹುಡುಗ ಖುಷಿಯಿಂದ ಆರಿ ಹೋದ ಶಾಂತಿ, ನಂಬಿಕೆ ಹಾಗೂ ಪ್ರೀತಿಯನ್ನು ಬೆಳಗಿದ.