ಉಪಕಾರದ ಬಿಲ್ಲು

ಕೂಲಿ ಮಾಡುತ್ತಿದ್ದ ಆ ಹುಡುಗ ತುಂಬಾ ಬಳಲಿದ್ದ. ಇನ್ನೊಂದು ಮೂಟೆ ಹೊತ್ತರೂ ಸತ್ತುಬಿಡುತ್ತೇನೆ ಎನಿಸಿತ್ತು...
Updated on: 

ಕೂಲಿ ಮಾಡುತ್ತಿದ್ದ ಆ ಹುಡುಗ ತುಂಬಾ ಬಳಲಿದ್ದ. ಇನ್ನೊಂದು ಮೂಟೆ ಹೊತ್ತರೂ ಸತ್ತುಬಿಡುತ್ತೇನೆ ಎನಿಸಿತ್ತು. 2 ದಿನದಿಂದ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಜೇಬಲ್ಲಿ ಹಣವಿರಲಿಲ್ಲ. ಸ್ವಾಭಿಮಾನ ಬದಿಗಿಟ್ಟು ಒಂದು ಮನೆಯ ಬಾಗಿಲು ತಟ್ಟಿದ. ಆ ಮನೆಯೊಡತಿ ಬಾಗಿಲು ತೆಗೆದಾಗ ಊಟ ಬೇಡಲು ಬಾಯಿ ಬರದೆ ಒಂದು ಲೋಟ ನೀರು ಕೊಡುವಿರೇ ಎಂದ. ಈತ ಬಳಲಿದ್ದನ್ನು ಗಮನಿಸಿದ ಆಕೆ ಒಂದು ಪೂರ್ತಿ ದೊಡ್ಡ ಲೋಟದ ತುಂಬ ಹಾಲನ್ನು ನೀಡಿದಳು. ಹಣ ಕೇಳಬಹುದೇನೋ, ಇಲ್ಲವೇನಾದರೂ ಕೆಲಸ ಮಾಡಬಹುದೇನೋ ಎಂಬ ಯೋಚನೆಯಲ್ಲೇ ಹಾಲನ್ನು ಕುಡಿದ. ಆದರೆ ಆಕೆ, ಸುಸ್ತು ಪರಿಹಾರವಾಯಿತೇ? ಎಂದು ಅಮ್ಮನಂತೆ ವಿಚಾರಿಸಿ ಕಾಳಜಿ ತೋರಿ ಕಳುಹಿಸಿದಳು.  ಒಂದಿಷ್ಟು ವರ್ಷಗಳ ನಂತರ ಕಷ್ಟಪಟ್ಟು ಓದಿದ ಹುಡುಗ ದೊಡ್ಡ ಆಸ್ಪತ್ರೆಯೊಂದರಲ್ಲಿ ಡಾಕ್ಟರ್ ಆದ. ಒಂದು ದಿನ ತನ್ನೂರಿನ ಹೆಂಗಸೊಬ್ಬಳು ದೊಡ್ಡ ಕಾಯಿಲೆಯೊಂದಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿರುವುದಾಗಿ ತಿಳಿದು ಓಡಿಬಂದ. ನೋಡಿದರೆ ಅದೇ ಹಾಲು ನೀಡಿದ ಹೆಂಗಸು. ಈತ ಎಡೆಬಿಡದೆ ಆಕೆಗೆ ಚಿಕಿತ್ಸೆ ನೀಡಿದ. ಕೊನೆಗೊಂದು ದಿನ ಆಕೆ ಪ್ರಾಣಾಪಾಯದಿಂದ ಪಾರಾದಳು. ಆಸ್ಪತ್ರೆ ಸಿಬ್ಬಂದಿ ಬಿಲ್ ಕೈಗೆ ನೀಡಿದಾಗ ಇದನ್ನು ಜನ್ಮದಲ್ಲಿ ತೀರಿಸಲಾರೆನಂದು ಬಗೆದು ನಡಗುತ್ತಲೇ ತೆರೆದು ನೋಡಿದಳು. ಅದರಲ್ಲಿ, 'ಒಂದು ಲೋಟ ಹಾಲಿನ ರೂಪದಲ್ಲಿ ನಿಮ್ಮ ಚಿಕಿತ್ಸೆಯ ಬಿಲ್ಲನ್ನು ಪಾವತಿಸಲಾಗಿದೆ' ಎಂದು ಬರೆದಿತ್ತು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com