ಏನ್ ನಾಟಕ ಮಾಡ್ತಾರಲೇ...

Updated on: 

ತಮ್ಮಾ: ಅದೇನು ತಿಮ್ಮಾ ಅವಾಗಡ 50 ರುಪಾಯಿ ಕೊಟ್ಟಿಡಡ!!
ತಿಮ್ಮಾ: ದೇಣಿಗೆ ಅಲ್ಲ... ನಾಟಕ ಟಿಕಿಟು ತಗೊಂಡೆ ನೋಡಿಲ್ಲೆ...
ತಮ್ಮಾ: ಅರೆ ಹೌದಲಾಡಡ... ಯಾವ ನಾಟಕ...?
ತಿಮ್ಮಾ: ಅದಡ ಹಳೇ ನಾಟಕ...
ತಮ್ಮಾ: ಯಾರ ಮಾಡ್ತಾರ??
ತಿಮ್ಮಾ: ಅದಡ ಹಳೇ ತಂಡ, ಆದರ ಅದರಾಗಿನ ಕಲಾವಿದರ ಹೊಸಬರು...
ತಮ್ಮಾ: ಯಾಕ...!!
ತಿಮ್ಮಾ: ಯಾಕಂದರ ಅದರಾಗಿನ ಒರಿಜಿನಲ್ ಕಲಾವಿದರು ಈಗ ಟಿವಿ ಧಾರಾವಾಹಿಯೊಳಗ ಬಿಸಿ ಅದಾರ... ಇಲ್ಲ ವಯಸ್ಸಾಗಿ ಮಾತು ಮರಿತಾರ, ಅದಕ್ಕ!
ತಮ್ಮಾ: ಛೊಲೋ ಬಿಡ್, ಹಳೇ ನೀರು ಹೋಗಬೇಕು ಹೊಸ ನೀರು ಬರಬೇಕು. ಆದರ ಒಂದು ವಿಷಯ ತಿಳಿವಲ್ಲದು, ಇವರ್ಯಾಕ ತಮ್ಮ 'ಹವ್ಯಾಸ'ಕ್ಕ ಪ್ರೇಕ್ಷಕರಿಂದ ರೊಕ್ಕಾ ಇಸಗೋತಾರು?
ತಿಮ್ಮಾ: ಅಂದರ?
ತಮ್ಮಾ: ಅಂದರ ನೋಡಿಲ್ಲೇ ಈ ಟಿಕೇಟು, ತಂಡದ ಹೆಸರಿನ ಕೆಳಗ 'ಹವ್ಯಾಸ ಕಲಾವಿದರು' ಅಂತ ಬರದಾರ ಇಲ್ಲೋ...
ತಿಮ್ಮಾ: ಹೌದ ಬರದಾರ...
ತಮ್ಮಾ: ಅಂದರ ಇವರ ' ಹವ್ಯಾಸ' ಅಂತ ನಾಟಕ ಮಾಡ್ತಾರ ಇಲ್ಲೋ?
ತಿಮ್ಮಾ: ಹೌದು...
ತಮ್ಮಾ: ಮತ್ತಡ ಇವರ ಹವ್ಯಾಸಕ್ಕ ನಾವ್ಯಾಕ್ ರೊಕ್ಕ ಕೊಡಬೇಕರಿ? ಆಗ ನೋಡ್ರಿ ಒಬ್ಬ ಸಂಗೀತಗಾರ ನಾ ಹವ್ಯಾಸಕ್ಕ ಹಾಡ್ತೇನಿ 50 ರುಪಾಯಿ ಟಿಕೇಟು ತಗೋರಿ ಅಂದರ ತಗೋತಿಯೇನು?
ತಿಮ್ಮಾ: ಇಲ್ಲ... ಹಾಡ ಹಾಡೋದನ್ನ ಪೂರ್ಣ ಕಲಿತು ಕಛೇರಿ ಮಾಡು ಆಗ ಟಿಕೇಟ ತಗೊಳ್ಳೋಣಂತ ಅಂತೇನಿ...
ತಮ್ಮಾ: ಕರೆಕ್ಟು... ಹಂಗ, ಚಿತ್ರ ತೆಗೆಯುವಾಗ, ಕಥಿ, ಕವನ ಬರೆಯವರಿಗೆ, ಕುಣಿಯವರಿಗೆ, ಬಾರಿಸವರಿಗೆ...?
ತಿಮ್ಮಾ: ಆದರ ಕನ್ನಡ ಹವ್ಯಾಸಿ ನಾಟಕದವರ ಯಾಕ್ ಹಿಂಗಡಡ..??
ತಿಮ್ಮಾ: ನನಗನಿಸತೈತಿ ಇದು ಅವರ ಹಳೇ ಚಟ... ಹಿಂದಿನಿಂದ ಬಂದದ್ದು... ಅವರ ಕಡೆ ರೊಕ್ಕ ಇರುದಿಲ್ಲೋ ಏನೋ?
ತಮ್ಮಾ: ಯಾಕ್ ಇರುದಿಲ್ಲೋ? ಸರ್ಕಾರಿ ದೊಡ್ಡ ಹುದ್ದೆದಾಗ ಇರತಾರ ಇವರು- ಕೈತುಂಬ ಪಗಾರ, ಬ್ಯಾಂಕನಾಗ ದುಡಿತಾರ, ಪೇಪರ್‌ನ್ಯಾಗ ಬರಿತಾರ, ಕಾಲೇಜು ಕೆಲಸದಾಗ ಇರತಾರ, ಸಾವಿರ-ಲಕ್ಷಗಟ್ಟಲೆ ಪಗಾರ ತಗೋತಾರ, ಮ್ಯಾಲ ಸರ್ಕಾರಿ ಉತ್ಸವ, ಜಾನಪದ ಜಾತ್ರೆ, ಏಡ್ಸ್ ತಿಳಿವಳಿಕೆ ನಾಟಕ ಅಂತೆಲ್ಲ ಕಾಂಟ್ರೆಕ್ಟ್ ಮಾಡತಾರ...
ತಿಮ್ಮಾ: ಇವುಗಳನ್ನೆಲ್ಲ 'ಪ್ರೊಫೆಷನಲ್‌' ಆಗಿ ಮಾಡ್ತಿರಬೇಕಲಾ!
ತಮ್ಮಾ: ಛಂದ ಆದರ 'ಪ್ರೊಫೆಷನಲ್ ಆಗಿ ಮಾಡಿದಿವಿ' ಅಂತಾರ, ಅದಡ ಹದಗೆಟ್ಟ ಹೋದರ 'ಹವ್ಯಾಸಗಳಪ್ಪ... ಒಂದು ಪ್ರಯತ್ನ ಮಾಡಿದಿವಿ' ಅನಕೋತ ವಸೂಲಿಗೆ ಓಡ್ಯಾಡತಾರ...
ತಿಮ್ಮಾ: ಮತ್ತು ನಾಟಕ ಸಾಲ್ಯಾಗ 'ಡಿಗ್ರಿ' ಓದಿ ಬಂದಿರತಾರಲಾ ಅವರೇನು ಮಾಡ್ತಾರ..?
ತಮ್ಮಾ: ಅವರ ಪ್ರೊಫೆಷನಲ್ ಆಗಿ ನಾಟಕ ನಿರ್ದೇಶಿಸಲಿ ಬಿಡಲಿ... ಸರ್ಕಾರಿ ನಾಟಕ ಕಂಪನಿ ನಿರ್ದೇಶಕರಾಗತ್ತಾರ!


- ಯಶವಂತ ಸರದೇಶಪಾಂಡೆ
khullamkhullabevubella@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com