ಮ. ಶಿವಸ್ವಾಮಿ , ಬೆಂಗಳೂರು.
ಮುಂದಿನ ಚುನಾವಣೆಯಲ್ಲಿ 'ಕೈ' ಪಾಳಯದ ರಾಹುಲ್ ಗಾಂಧಿ ಗೆಲ್ಲುವರೆ?
-'ಕೈ'ಗೆ ಬಂದದ್ದು ಬಾಯಿಗೆ ಬರದೇ ಹೋಗಬಹುದು!
ರವೀಂದ್ರನಾಥ ಶಿ. ಯಡಹಳ್ಳಿ, ಬೀಳಗಿ
ಫೇಸ್‌ಬುಕ್‌ಗೂ, ಪಾಸ್‌ಬುಕ್‌ಗೂ ವ್ಯತ್ಯಾಸವೇನು?
ಫೇಸ್‌ಬುಕ್‌ನಲ್ಲಿ 'ಬ್ಯಾಲೆನ್ಸ್' ತಪ್ಪುತ್ತೆ. ಪಾಸ್‌ಬುಕ್‌ನಲ್ಲಿ ಬ್ಯಾಲೆನ್ಸ್ ತಪ್ಪೋಲ್ಲ!
ವೆಂಕಟೇಶ್‌ಭಟ್, ಮಂಗಳೂರು
ಇತ್ತೀಚೆಗೆ ರಾಜಕಾರಣಿಗಳದ್ದು ವೇದಾಂತ, ಸ್ವಾಮೀಜಿಗಳದ್ದು ರಾದ್ಧಾಂತ ಆಗುತ್ತಿದೆಯಲ್ಲ?
- ಅವರದ್ದು ರಾಜಕೀಯ ಸನ್ಯಾಸ, ಇವರದ್ದು 'ಸನ್ಯಾಸ ರಾಜಕೀಯ'!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಎಲ್ಲರ ಬುರುಡೆಯಲ್ಲೂ ಒಂದೇ ಮೆದುಳು, ಆದರೂ ಬುದ್ಧಿ ಯಾಕೆ ಬೇರೆ ಬೇರೆ?
-ಬುದ್ಧಿನ ಬೇರೆ ಬೇರೆ ಕಡೆ ಓಡಿಸ್ತಾರಲ್ಲ ಅದಕ್ಕೆ!
ಆರ್.ಸಿ. ಪರಶುರಾಮ್, ಶಿಕಾರಿಪುರ.
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ, ಅತ್ತೆ ಸೊಸೆ ಜಗಳ?
-ಇಬ್ಬರೂ ಊಟ ಮಾಡದೇ ಮಲಗುವ ತನಕ!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
ಜೀವಕ್ಕಿಂತ ಪ್ರೀತಿ ಯಾವುದು?
-ಕೆಲವರು ನಿನ್ನನ್ನು 'ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ' ಅಂತ ಯಾರ ಬಗ್ಗೆಯೋ ಹೇಳ್ತಿರ್ತಾರೆ!
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಎರಡು ಜಡೆ ಸೇರಿದರೆ ಜಗಳ, ಎರಡು ಮೀಸೆ ಸೇರಿದರೆ?
-ಜಡೆ ಬಗ್ಗೆ ಜಗಳ!
ಪೇಂಟರ್ ಪಾಪು, ಸಂತೇಮರಹಳ್ಳಿ
ನಾವು ಒಳ್ಳೇ ದಾರಿಯನ್ನೇ ಯಾಕೆ ಆರಿಸಿಕೊಳ್ಳಬೇಕಾಗುತ್ತೆ?
-'ಅಡ್ಡದಾರಿ'ಯಲ್ಲಿ ಜನ ಜಾಸ್ತಿ ಹೋಗ್ತಿರ್ತಾರೆ!
ಅಣಜಿ ಮಂಜುನಾಥ್, ಮಾಧನಬಾವಿ
ಕೆಲವು ವಿದ್ವಾಂಸರೇಕೆ ವಿಧ್ವಂಸಕಾರಿ ಹೇಳಿಕೆಗಳನ್ನು ಕೊಡುತ್ತಾರೆ?
-ಅವರು ಲೇಖನಿಗಿಂತ ನಾಲಿಗೆಯೇ ಹರಿತ ಅಂತ ನಂಬಿದವರು!
ಚಿಲ್ಲಿ ಕ್ವೆಶ್ಚನ್
ಮಕ್ಕಳು ಗೈರುಹಾಜರಾದ್ರೆ 'ಕ್ಷೀರಭಾಗ್ಯ'ದ ಹಾಲನ್ನು ಶಿಕ್ಷಕರು ಏನು ಮಾಡಬೇಕು?
ಈ ಪ್ರಶ್ನೆಗೆ ಪರಿಣಾಮಕಾರಿ ತಮಾಷೆ ಉತ್ತರವನ್ನು ನೀವೇ ಕಳುಹಿಸಿ: ಆಯ್ದ ಉತ್ತರಗಳು ಮುಂದಿನ ಸಂಚಿಕೆಯಲ್ಲಿ... ಝಞ್ಡಝ್ಝಟಛ್ಜಅ್ಜಟಛ್ಝಟ.್ಛ್ಟಟ
ಕಳೆದವಾರದ ಉತ್ತರಗಳು
ರಾಹುಲ್‌ಗಾಂಧಿ ಬಳ್ಳಾರಿಯಲ್ಲಿ ಎಲೆಕ್ಷನ್‌ಗೆ ನಿಲ್ತಾರಂತೆ ಹೌದಾ?
ಉ: ಅಮ್ಮನಿಗೆ ತಕ್ಕ ಮಗ ಎಂದು ಕರೆಯಲು ಅಡ್ಡಿ ಇಲ್ಲ ಬಿಡಿ.
- ವೀರಭದ್ರಪ್ಪ ಉಳ್ಳಾಗಡ್ಡಿ, ಯಾದಗಿರಿ
ಅಮೇಥಿಯಲ್ಲಿ 'ಆಮ್ ಆದ್ಮಿ' ಸರಿಯಾಗಿ ಚಳಿ ಬಿಡಿಸ್ತಿದ್ದಾರೆ ಅಂತಾಯ್ತು.
- ಮಾದೇಶ, ಮಂಡ್ಯ
-ಎಸ್.ವಿ. ಪದ್ಮನಾಭ