ಹೀಗೊಂದು ರಕ್ಷಣೆ
ಲವ್ವರ್ನ ಕಾಯ್ತಾ ಹೊಳೆದಂಡೆ ಬಳಿ ಕಾಯ್ತಿದ್ದ ಕೋಲ್ಯ ಅಕಸ್ಮಾತ್ ಕಾಲು ಜಾರಿ ಹೊಳೇಲಿ ಬಿದ್ದುಬಿಡ್ತಾನೆ. ಅವನಿಗೆ ಈಜು ಬರುತ್ತಿರಲಿಲ್ಲ. ಜೀವದ ಆಸೆ ಬಿಟ್ಬಿಡ್ತಾನೆ. ಮುಳುಗ್ತಾ ಇರಬೇಕಾದ್ರೆ, ಹೊಳೇಲೊಂದು ಮೀನು ಕಾಣುತ್ತೆ. ಅದನ್ನ ಹಿಡಿದು ದಡದತ್ತ ಬಿಸಾಕಿ ಹೇಳ್ತಾನೆ... 'ನಾನಂತೂ ಬದುಕೊಲ್ಲ. ನೀನಾದ್ರೂ ಬದುಕ್ಕೋ ಹೋಗು...'
ಬ್ರೇಕ್ ಫೇಲ್
ಟ್ಯಾಕ್ಸಿ ಡ್ರೈವರ್: ಸಾರ್ ಬ್ರೇಕ್ ಫೇಲ್ ಆಗಿದೆ. ಗಾಡಿ ನಿಲ್ಸೋಕ್ ಆಗ್ತಾ ಇಲ್ಲ. ಏನ್ ಮಾಡ್ಲಿ?
ಕೋಲ್ಯ: ಗಾಡಿ ನಿಲ್ದೇ ಹೋದ್ರೆ ಹಾಳಾಗ್ ಹೋಗ್ಲಿ.. ಮೊದ್ಲು ಮೀಟ್ರು ನಿಲ್ಸೋ ಮಾರಾಯಾ!
ಅಪಘಾತ
ತಲೆಯಿಂದ ರಕ್ತ ಸೋರುತ್ತಿರುವ ಗಾಯಾಳುವನ್ನು ನರ್ಸ್ ಕೇಳ್ತಾಳೆ.
ನಿನ್ನ ಹೆಸರು?
ಕೋಲ್ಯ.
ವಯಸ್ಸು?
ಇಪ್ಪತ್ತೈದು.
ಮದ್ವೆ ಆಗಿದೆಯಾ?
ಅಯ್ಯೋ... ಇಲ್ಲ ಇದು ಕಾರ್ ಅಪಘಾತದಲ್ಲಿ ಪೆಟ್ಟಾಗಿರೋದು.
ದೇವ್ರು ಒಳ್ಳೇದ್ ಮಾಡ್ಲಿ...
ಕೋಲ್ಯ ಹೆಂಡ್ತೀನ ಆಸ್ಪತ್ರೆಗೆ ಸೇರಿಸಿ ಆಚೆ ಬಂದು ನಿಂತ.
ಕೋಲ್ಯನ ಗೆಳೆಯ: ಭಾಬೀಗೆ ಏನಾಯ್ತು ಭಾಯ್?
ಕೋಲ್ಯ: ಏನಿಲ್ಲ... ಸ್ನಾನ ಮಾಡುವಾಗ, ಬಾತ್ರೂಮಲ್ಲಿ ತಲೆಸುತ್ತಿ ಬಿದ್ದಳು.
ಗೆಳೆಯ: ಅಬ್ಬಾ ಒಂಥರಾ ಒಳ್ಳೇದೇ ಆಯ್ತು... ಎದ್ರು ಮನೆ ಪಪ್ಪು ಭಾಬಿ ಸ್ನಾನ ಮಾಡೋದನ್ನ ಕಿಟಕಿಯಿಂದ ನೋಡ್ತಾ ಇದ್ದ.
ಕೋಲ್ಯ: ದೇವ್ರು ಅವ್ನಿಗೆ ಒಳ್ಳೇದ್ ಮಾಡ್ಲಿ. ಅವ್ನು ನೋಡಿ ಹೇಳಿದ್ದಕ್ಕಾಯ್ತು. ಇಲ್ಲಾಂದ್ರೆ ಇವ್ಳು ಬಿದ್ದಿರೋದೇ ಗೊತ್ತಾಗ್ತಾ ಇರಲಿಲ್ಲ.
ನಾನು ಸ್ಕೂಲಲ್ಲಿರುವಾಗ ತುಂಬಾ ಹಾಟ್ ಹುಡುಗಿಯರಿದ್ದರು. ಅವರಿಗೆಲ್ಲ 90ನೇ ಇಸ್ವಿಯಲ್ಲೇ ಮದುವೆ ಆಗಿದೆ. ಊಫ್... ಈಗ ಅವರೆಲ್ಲರೂ ಅತ್ತೆಯರಾಗುವ ಅರ್ಹತೆ ಪಡೆಯುವ ಸ್ಥಿತಿಗೆ ಬಂದಿದ್ದಾರೆ!
- ಸೋನು ನಿಗಮ್
ಕಣ್ಣಿನ ನೋಟಗಳೋ...
ಗಂಡಿನ ಕಣ್ಣಿಗೂ ಹೆಣ್ಣಿನ ಕಣ್ಣಿಗೂ ಇರೋ ವ್ಯತ್ಯಾಸ
ಗಂಡಿನ ಕಣ್ಣು ಹೆಣ್ಣನ್ನು ನೋಡುತ್ತದೆ.
ಹೆಣ್ಣಿನ ಕಣ್ಣು... ಗಂಡಿನ ಕಣ್ಣು ಏನೇನನ್ನೆಲ್ಲ ನೋಡುತ್ತಿದೆ ಎಂಬುದನ್ನು ನೋಡುತ್ತದೆ.
ಸಾಲ್ ಪನಿಕ
ಸಾಧಕನೆಂದರೆ, ಹೆಂಡತಿ ಖರ್ಚು ಮಾಡುವುದಕ್ಕಿಂತ ಹೆಚ್ಚಿನ ಸಂಬಳ ತರುವವ. ಸಾಧಕಿಯೆಂದರೆ, ಅಂಥ ಗಂಡನನ್ನು ಪಡೆದವಳು.
ಗಂಡನನ್ನು ಖುಷಿ ಪಡಿಸಲು ಕಮ್ಮಿ ಪ್ರೀತಿಮಾಡಿ, ಹೆಚ್ಚಾಗಿ ಅರ್ಥಮಾಡಿಕೊಳ್ಳಬೇಕು. ಹೆಂಡತಿಗೆ ಖುಷಿ ನೀಡಲು ಹೆಚ್ಚು ಪ್ರೀತಿಸಬೇಕು. ಜೊತೆಗೆ ಆಕೆಯನ್ನು ಅರ್ಥಮಾಡಿಕೊಳ್ಳಲೆತ್ನಿಸಬಾರದು.
ಮದುವೆ ಆದಂತೆ ಅವರವರ ತಪ್ಪುಗಳನ್ನು ಮರೆತುಬಿಡಬಹುದು. ಒಂದೇ ಮನೆಯಲ್ಲಿ ಇಬ್ಬರು ನೆನಪಿಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಮಾತು ಶುರುಮಾಡುವುದು ಪುರುಷರೇ ಆದರೂ ಮುಗಿಸುವುದು ಮಾತ್ರ ಮಹಿಳೆಯರು.
'ಮಾತೆ'ಯರಿದ್ದಲ್ಲಿ ಬರೀ ಮಾತೇ!