ಅವರು ಮೆಮೊರಿ ಕಾರ್ಡ್ ಕರಪ್ಟ್ ಆಗಿದೆ ಅನ್ನೋ ಕಾರಣಕ್ಕೆ ಮೆಮೊರಿಕಾರ್ಡನ್ನೇ ಜೈಲಿಗೆ ಕಳಿಸುತ್ತಾರೆ.
ಅವರು ನಿದ್ದೆಯಲ್ಲಿ ಸೊಳ್ಳೆಯನ್ನು ಸಾಯಿಸಿದ್ರೂ ಬೆಳಗ್ಗೆದ್ದು ಪೋಲಿಸರಿಗೆ ಶರಣಾಗ್ತಾರೆ.
ಅವರು ವಿವಾಹೇತರ ಸಂಬಂಧ ಇಟ್ಕೊಳೋ ಮೊದಲು ಹೆಂಡ್ತಿಯ ಪರ್ಮಿಷನ್ ತಗೋತಾರೆ.
ಅವರನ್ನು ಯಾವ ಹೆಂಗಸೂ 'ನಾ ಈ ಡ್ರೆಸ್ಸಲ್ಲಿ ದಪ್ಪ ಕಾಣ್ತೀನಾ?' ಅನ್ನೋ ಪ್ರಶ್ನೆ ಕೇಳೊಲ್ಲ.
ದಾರಿಯಲ್ಲೆಲ್ಲಾದರೂ ಬಾಂಬ್ ಸಿಕ್ಕರೆ ಅವರು ಅದನ್ನು ಸಂಬಂಧಪಟ್ಟ ಭಯೋತ್ಪಾದಕನಿಗೆ ತಲುಪಿಸ್ತಾರೆ.
ಅವರು ಮ್ಯಾಗಿ ಮಾಡೋಕೆ ಎರಡು ನಿಮಿಷಕ್ಕಿಂತ ಹೆಚ್ಚು ಅಥವಾ ಕಮ್ಮಿ ಸಮಯ ತೆಗೆದುಕೊಳ್ಳೋದಿಲ್ಲ.
ಇಂಟರ್ನೆಟ್ಟಲ್ಲಿ ಸಿನಿಮಾ ಡೌನ್ಲೋಡ್ ಮಾಡೋಲ್ಲ. ಟಿಕೆಟ್ ತಗೊಂಡೇ ನೋಡ್ತಾರೆ.
ಅವರು ಸಲ್ಮಾನ್ಖಾನ್ನ ಬಾಡಿಗಾರ್ಡ್ ಸಿನಿಮಾ ನೋಡೋಕೆ ಇಷ್ಟಪಡಲ್ಲ. ಅವರಿಗೆ ಬಾಡಿಗಾರ್ಡ್ಸ್ ಇಷ್ಟವಿಲ್ಲ.
ಕೇಜ್ರಿವಾಲ್ ಎಷ್ಟು ಪ್ರಾಮಾಣಿಕರು ಅಂದ್ರೆ ಅವರು ಕೋಲ್ಗೇಟ್ ಆ್ಯಕ್ಟೀವ್ ಸಾಲ್ಟ್ ಟೂತ್ ಪೇಸ್ಟಲ್ಲಿರೋ ಉಪ್ಪಿನ ಪ್ರಮಾಣವನ್ನು ಪರೀಕ್ಷಿಸುತ್ತಾರೆ.
ಅವರು ಯೂಟ್ಯೂಬಿನಲ್ಲಿ ಶುರುವಿಗೆ ಬರುವ ಜಾಹೀರಾತುಗಳನ್ನು ಸ್ಕಿಪ್ ಮಾಡೋದಿಲ್ಲ.