

ಆರೋಗ್ಯಕರ ಸೆಕ್ಸ್ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್ಯಕರ ಸಂಭೋಗ ಹೊಂದುವವರು ಕಾಯಿಲೆ ರಹಿತ ದಿನ ಕಳೆಯಬಹುದು ಎನ್ನುತ್ತಾರೆ ಲೈಂಗಿಕ ತಜ್ಞ ವ್ಯೂನ್ ಕೆ. ಫುಲ್ಬ್ರೈಟ್.
ಮಿಲನ ಹೊಂದುವವರಿಗೆ ಸೂಕ್ಷ್ಮಜೀವಿಗಳ, ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿರುತ್ತದೆ. ಪೆನ್ಸಿಲ್ವೇನಿಯಾದ ವಿಲ್ಕ್ಸ್ ಯುನಿವರ್ಸಿಟಿ ತನ್ನ ಸಂಶೋಧನೆಯಲ್ಲಿ ತಿಳಿಸಿದೆ.
ವಾರದಲ್ಲಿ 2-3 ಬಾರಿ ಮಿಲನ ಹೊಂದುವ ಮಂದಿ ಇತರರಿಗಿಂತ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ.
ಸೆಕ್ಸ್ನಲ್ಲಿ ನಿರಂತರತೆ ಕಾಯ್ದುಕೊಂಡರೆ ಕಾಮಾಸಕ್ತಿ ಹೆಚ್ಚಲು ಕಾರಣವಾಗುತ್ತದೆ. ಹೆಣ್ಣಿನ ಬ್ಲಾಡರ್ ನಿಯಂತ್ರಣ ಶಕ್ತಿ ಹೆಚ್ಚಿಸುತ್ತದೆ.
ಹೃದಯ ಸಂಕುಚನದ ರಕ್ತದೊತ್ತಡ ನಿಯಂತ್ರಿಸುವಲ್ಲಿ ಲೈಂಗಿಕ ಸಾಂಗತ್ಯ ಸಹಕಾರಿ ಆಗಿದೆ ಎಂಬುದು ಸಂಶೋಧನೆಯಿಂದ ಸ್ಪಷ್ಟಗೊಂಡಿದೆ. ಹಸ್ತಮೈಥುನದಿಂದ ಅಂತಹ ಯಾವುದೇ ಲಕ್ಷಣವಿಲ್ಲ.
ಸೆಕ್ಸ್ ಒಂದು ವ್ಯಾಯಾಮದಂತೆ. ಆ ಸಂದರ್ಭದಲ್ಲಿ ನಿಮಿಷಕ್ಕೆ 5 ಕ್ಯಾಲೋರಿ ವ್ಯಯವಾಗುತ್ತದೆ. ಆರೋಗ್ಯಕರ ಹೃದಯ ಬಡಿತ ನೀಡುವಲ್ಲು ಸೈ ಎನಿಸಿದೆ.
ಈಸ್ಟ್ರೋಜನ್ ಮತ್ತು ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುತ್ತದೆ. ಇದರಿಂದ ಹೃದಯಾಘಾತದಿಂದ ಮುಕ್ತಿ ಹೊಂದಬಹುದು. ಸೆಕ್ಸ್ನಿಂದ ದೂರ ಇರುವವರು ಹೆಚ್ಚಾಗಿ ಅಸ್ಥಿರಂಧ್ರತೆ, ಹೃದಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುತ್ತಾರೆ.
ಆಸ್ಪಿರಿನ್ಗೆ ತಲುಪುವ ಮುನ್ನ ಸಂಭೋಗೋದ್ರೇಕದ ಪರಾಕಾಷ್ಠೆಗೆ ಪ್ರಯತ್ನಿಸಿ. ನೋವು ತಡೆಹಿಡಿಯಲು ಸಾಧ್ಯ ಎನ್ನುತ್ತಾರೆ ಲೈಂಗಿಕ ತಜ್ಞ ಬೆರ್ರಿ ಆರ್. ಕೋಮೋಸೊರಕು.
ಸಂಭೋಗದ ಸಂದರ್ಭ ಉತ್ಪತ್ತಿಯಾಗುವ ಹಾರ್ಮೋನ್ಗಳು ನೋವು ನಿವಾರಕ ಶಕ್ತಿ ಹೊಂದಿರುತ್ತವೆ. ದೀರ್ಘಕಾಲದ ಬೆನ್ನು ನೋವು ಹಾಗೂ ಕಾಲು ನೋವು ನಿಯಂತ್ರಿಸುತ್ತದೆ.
ಮುಟ್ಟಿನ ಸೆಳೆತ, ಸಂಧಿವಾತ, ಕೆಲ ಸಂದರ್ಭಗಳಲ್ಲಿ ತಲೆ ನೋವು ನಿವಾರಿಸುತ್ತದೆ ಎನ್ನುತ್ತಾರೆ ಹೆಚ್ಚಿನ ಮಹಿಳೆಯರು.
ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ನ ಪತ್ರಿಕೆಯೊಂದು ಹೇಳಿರುವಂತೆ ತಿಂಗಳಲ್ಲಿ ಕನಿಷ್ಠ 21 ಬಾರಿ ಸ್ಖಲನ ಮಾಡುವ ಪುರುಷರು ಜನನಾಂಗದ ಕ್ಯಾನ್ಸರ್ಗೆ ತುತ್ತಾಗುವ ಸಂಖ್ಯೆ ಕಡಿಮೆ. ಲೈಂಗಿಕ ಕ್ರಿಯೆ, ಸ್ವಪ್ನಸ್ಖಲನ, ಹಸ್ತಮೈಥುನದ ಮೂಲಕ ಪುರುಷರು ಈ ಲಾಭಾಂಶ ಪಡೆಯಬಹುದು.