ತಿಮ್ಮಾ: ಪಹಲೆ ಆಪ್... ಪಹಲೆ ಆಪ್
ತಮ್ಮಾ: ಇದೇನೋ ತಿಮ್ಮಾ ಆಪ್... ಆಪ್ ಅಂತ ಭಾಳ ಮರ್ಯಾದಿ ಕೊಡಾಕತ್ತಿ...?
ತಿಮ್ಮಾ: ಆಪ್ ಅಂದರ ಮರ್ಯಾದಿ ಹೌದ ಬಿಡು... ಆದರ, ಅದಕ್ಕ ಇನ್ನೊಂದ ಅರ್ಥ ಐತಿ.
ತಮ್ಮಾ: ಅದಾ... ಆ್ಯಪ್ ಆ್ಯಪ್ ಈ ಫೋನ್‌ನ್ಯಾಗ ಡೌನಲೋಡ್ ಮಾಡ್ತಾರಲ್ಲಾ ಮಂದಿಡಡ...
ತಿಮ್ಮಾ: ಆ ಆ್ಯಪ್ ಬ್ಯಾರೆ... ಇದು ಎ.ಎ.ಪಿ... ಆ್ಯಪ್...
ತಮ್ಮಾ: ಹಾಂ ಹೌದು ದಿಲ್ಲಿಯೊಳಗ ಸರ್ಕಾರ ಮಾಡಲ್ಯೋ ಬ್ಯಾಡೋ ಅನ್ನೋ ಕನಫ್ಯೂಸ್‌ನ್ಯಾಗ ಇದ್ರಲ್ಲ...
ತಿಮ್ಮಾ: ಅದಕ್ಕ ದಿಲ್ಲಿ ಮಂದಿಗೆಲ್ಲ ಎಸ್.ಎಂ.ಎಸ್. ಕಳಸರಿ ಅಂತ ರಿಕ್ವೆಸ್ಟ್ ಮಾಡಕೊಂಡ್ರಂತಲ್ಲ...
ತಮ್ಮಾ: ಆದರ ಅದರಿಂದ ಏನ್ ಫಾಯದೆ?
ತಿಮ್ಮಾ: ಯಾಕಿಲ್ಲ ಎಸ್.ಎಂ.ಎಸ್ ಅಂದರ ಏನಂತ ಗೊತ್ತಿಲ್ಲಾ ನಿನಗ??
ತಮ್ಮಾ: ಅದ ಫೋನ್‌ನ್ಯಾಗ ಬರ್ತಾವಲಾ... ಎನೆನಲೆ ಇಂಗ್ಲೀಷದಾಗ...
ತಿಮ್ಮಾ: ಅಲ್ಲ!! ಈ ಸಂದರ್ಭದಾಗ ಎಸ್.ಎಂ.ಎಸ್. ಅಂದರ ಸರದಾರ ಮನಮೋಹನ ಸಿಂಗ!!
ತಮ್ಮಾ: ಅಂದರ ದಿಲ್ಲಿ ಮಂದಿ ಎಲ್ಲ ಈ ಎಸ್.ಎಂ.ಎಸ್.ನ್ನ ಎ.ಎ.ಪಿ.ಗೆ ಕಳಿಸಿದರು..?
ತಿಮ್ಮಾ: ಯಸ್... ಅದಕ್ಕ ಅವರ ಗಠಬಂಧನದಾಗ ದಿಲ್ಯಾಗ ಆಪ್ ಸರ್ಕಾರ ಆಗೇತಿ.
ತಮ್ಮಾ: ಆದರ ನಮ್ಮ ಫ್ರೆಂಡ್ ಒಬ್ಬಾವ ಇಲ್ಲೊಂದು ಭಾರಿ ಡೈಲಾಗ್ ಹೊಡೆದಾನವಾ...
ತಿಮ್ಮಾ: ಎನಂತಾನ?
ತಮ್ಮಾ: 'ಕೈ' ಇಲ್ಲದೆ ಬರೆ 'ಕಸಬರಗಿ'ಯಿಂದ ಏನೂ ಕೆಲಸ ಆಗುದಿಲ್ಲ...
ತಿಮ್ಮಾ: ಬರೋಬ್ಬರಿ ಐತಿ. ಆದರ ಈ ದಿಲ್ಲಿ ಇಲೆಕ್ಷನ್ನನ್ಯಾಗ ಇನ್ನೊಂದ ಭಾರಿ ರೆಕಾರ್ಡ ಆಗೇತಿ ನೋಡ...
ತಮ್ಮಾ: ಏನದು? ಏನದು??
ತಿಮ್ಮಾ: ತಲತಲಾಂತರದಿಂದ ಹೆಣ್ಣು ಕಸಬರಗಿಯಿಂದ ಗಂಡನ್ನ ಜಾಡಿಸ್ತಿದ್ದಳ... ಆದರ ಇಲ್ಲೊಬ್ಬ ಗಂಡು ಕಸಬರಗೀಲೆ ಹೆಣ್ಣನ್ನ ಜಾಡಿಸಿದ್ನ ಬಿಡು.
ತಮ್ಮಾ: ಹೌದು ಅದಕ್ಕ ಕೇಜ್ರಿವಾಲ್ ಭಾಯಿ ಭಾರತೀಯ ರಾಜಕೀಯದಾಗ ಎರಡನೇ ಫಾಸ್ಟೆಸ್ಟ್ ಮುಖ್ಯಮಂತ್ರಿ ಅಂತ.
ತಿಮ್ಮಾ: ಅಂದರ!
ತಮ್ಮಾ: ಭಾರತೀಯ ರಾಜಕೀಯ ಸೇರಿದ ದಿನಾಂಕದಿಂದ ಅತ್ಯಂತ ವೇಗವಾಗಿ ಮುಖ್ಯಮಂತ್ರಿ ಆದವರೊಳಗ ಕೇಜ್ರಿವಾಲ್ ಭಾಯಿ ಸಕೆಂಡ್...
ತಿಮ್ಮಾ: ಫಸ್ಟ್ ಯಾರು?
ತಮ್ಮಾ: ಅನಿಲ್ ಕಪೂರ... 'ನಾಯಕ' ಸಿನಮಾದಾಗ!!ಟಿ
-ಯಶವಂತ ಸರದೇಶಪಾಂಡೆ
khullamkhullabevubella@gmail.com