

ಲೇಡಿಸ್ಸೆಲ್ಲ ಹುಡುಗರಂತೆ ಡ್ರೆಸ್ ಮಾಡಿಕೊಳ್ತಿರೋವಾಗ ಪುರುಷ ಮಂದಿಗೆ ಕೋಪ ಬರದೇ ಇರುತ್ತಾ? ಅವರೀಗ ನಾವೂ ಉಡುಗೆತೊಡುಗೆಯಲ್ಲಿ ಲೇಡಿಸ್ಸಾಗ್ತೀವಿ ಅಂತ ಹಠ ಹಿಡಿದಿದ್ದಾರೆ. ಈ ಕೂಗು ಕೇಳಿಬರ್ತಿರೋದು ಜಪಾನಿನಿಂದ. ಇದಕ್ಕೆ ಪೂರಕವಾಗಿ ಅಲ್ಲಿನ ಜವಳಿ ಉದ್ಯಮವೀಗ 'ಪುರುಷರ ಬ್ರಾ' ಹುಟ್ಟುಹಾಕಿದೆ. ಜೊತೆಗೆ ನಿಕ್ಕರ್ ಅನ್ನೂ ಪರಿಚಯಿಸಿದೆ.
ಹೂವಿನ ಚಿತ್ರಗಳಿರುವ ಪುರುಷರ ಬ್ರಾ ಮತ್ತು ನಿಕ್ಕರ್ಗಳ ವಿನ್ಯಾಸ ನೋಡಲು ಅತ್ಯಾಕರ್ಷಕ. ಮುಂದಿನ ತಿಂಗಳಲ್ಲೇ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಮಹಿಳೆಯರ ಒಳ ಉಡುಪಿನಂತೆ ಇವೂ ಮೃದುವಾಗಿದೆ. ಧರಿಸಿಕೊಂಡ ಕೆಲವರು 'ಒಳ್ಳೆ ಸುಖ ಸಿಗುತ್ತಿದೆ' ಅಂತಲೂ ಉದ್ಗರಿಸಿದ್ದಾರೆ. ಮಹಿಳೆಯರಂತೆ ಪುರುಷರು ಸುಖ ಪಡಬೇಕು ಎಂಬುದು ಪುರುಷರ ಒಳ ಉಡುಪಿನ ಹಿಂದಿರುವ ಸದುದ್ದೇಶ. ಅದು ಈ ಬಿಡುಗಡೆಗೂ ಮುನ್ನವೇ ಈಡೇರಿದೆ.
ದೇಹಕ್ಕೆ ಒಪ್ಪುವಂಥ ಆರಾಮ ಎನಿಸುವ ವಸ್ತ್ರಗಳು ಇವಾಗಿದ್ದು, ಮಹಿಳೆಯರ ಬ್ರಾದಂತೆ ಉಬ್ಬಿರುವುದಿಲ್ಲ. ಉಬ್ಬುಗಳಿಲ್ಲದ ಪುರುಷರ ಬ್ರಾ ಅನೈಸರ್ಗಿಕ ಎನಿಸುವುದಿಲ್ಲ. 'ಪುರುಷರ ಗುಪ್ತಾಂಗಗಳಿಗೆ ಆರಾಮ ಎನಿಸುವಂತೆ ರಚಿಸಲಾಗಿದೆ' ಎನ್ನುತ್ತಾರೆ ವಿಶ್ರೂಮ್ನ ಪ್ರತಿನಿಧಿ ಮಸಾಯುಕಿ ತ್ಸುಚಿಯಾ. 'ನಾನು ಬ್ರಾ ಮತ್ತು ನಿಕ್ಕರ್ ಧರಿಸಿದೆ. ತುಂಬಾ ಥ್ರಿಲ್ಲಾದೆ' ಅಂತಲೂ ಹಿಗ್ಗಿ ಹೇಳಿದ್ದಾನೆ ಆತ.