

ಪಿ.ಜೆ. ರಾಘವೇಂದ್ರ, ಮೈಸೂರು
ವೈಫೈಗೂ ವೈಫ್ಗೂ ವ್ಯತ್ಯಾಸವೇನು?
ವೈಫೈದು ವ್ಯಾಪ್ತಿ ದೊಡ್ಡದು, ವೈಫ್ದು ಗಂಟಲು ದೊಡ್ಡದು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ನೀರಲ್ಲಿ ಬಿದ್ದರೆ ಮೈಯೆಲ್ಲಾ ಒದ್ದೆ, ಲವ್ವಲ್ಲಿ ಬಿದ್ದರೆ?
ಕೆಲವರಿಗೆ ಒದೆ!
ಶ್ರೀಕಾಂತ ಮುದಗಲ್ಲ, ಇಳಕಲ್ಲ
ಸದಾ ಜಾಣ ಕುರುಡು, ಜಾಣ ಕಿವುಡುತನದಿಂದ ವರ್ತಿಸುವವರಿಗೆ ಏನು ಮಾಡಬೇಕು?
ಅವರು ಬಂದಾಗ 'ಜಾಣ ಮೂಗ'ನಂತಿರಬೇಕು!
ವಿ. ಹೇಮಂತ ಕುಮಾರ್ ಬೆಂಗಳೂರು
ಈ ಲೋಕದಲ್ಲಿ ರಾತ್ರಿ ಎಂಬುದೇ ಇಲ್ಲದಿದ್ದರೆ ಏನಾಗುತ್ತಿತ್ತು?
ಹಗಲು ಗನಸು ಕಾಣುವವರು, ಹಗಲು ದರೋಡೆಕೋರರು ಜಾಸ್ತಿಯಾಗ್ತಿದ್ರು!
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಗಂಡನಿಗೆ ಪೂಜೆ ಮಾಡುವ ಹೆಣ್ಣು ದೇಗುಲದಲ್ಲೇಕೆ ಪೂಜಾರಿಯಾಗೋಲ್ಲ?
ಸಪೋರ್ಟ್ ಮಾಡೋಕೆ ಜನಾರ್ದನ ಪೂಜಾರಿಯಂತವರು ಇರೋಲ್ವಲ್ಲ!
ಸ್ವಾಮಿ ನಿರ್ಮಲಾ ಉಡಿಗಾಲ
ತಂದೆ ತಾಯಿಗಳು ಮಕ್ಕಳನ್ನು ಚಿನ್ನ ಬೆಳ್ಳಿ ಎಂದು ಕರೆಯುವುದೇಕೆ ಗುರು?
ಕಡೇ ಪಕ್ಷ ಅದಾಗದಿದ್ದರೆ 'ಕಬ್ಬಿಣ'ವಾದ್ರೂ ಆಗಲಿ ಅಂತ!
ಆರ್.ಸಿ. ಪರಶುರಾಮ್, ಶಿಕಾರಿಪುರ
ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕಲು ಏನು ಮಾಡಬೇಕು?
ದೊಡ್ಡ ದೊಡ್ಡ ಜೆಸಿಬಿ ಕಂಪನಿಗಳಿಗೆ ಲಂಚ ಕೊಡಬೇಕು!
- ಎಸ್.ವಿ. ಪದ್ಮನಾಭ