

ಮನುಷ್ಯರಲ್ಲೇ ಕೆಲವರು ಗಂಡಸರಾಗಿದ್ದರೂ 'ಹೆಂಗಸು' ಅಂತಂದುಕೊಳ್ಳೋರಿದ್ದಾರೆ. ಇಂಥ ಸೈಕಾಲಜಿಕಲ್ ಏರುಪೇರು ಪ್ರಾಣಿಗಳಲ್ಲೂ ಇರುತ್ತದೆ. ಆದರೀ ಪ್ರಕರಣ ಕೊಂಚ ಭಿನ್ನ. ಕ್ಯಾಲಿಫೋರ್ನಿಯಾದಲ್ಲಿ ಮಿಲ್ಕ್ಶೇಕ್ ಎಂಬ ಹಸುವಿದೆ. ಅದು ತನ್ನಷ್ಟಕ್ಕೆ ತಾನು 'ನಾಯಿ' ಎಂದುಕೊಂಡಿದೆ. ಗೋವಿನ ರೀತಿ 'ಅಂಬಾ' ಎನ್ನದೆ, 'ಬೌ ಬೌ' ಅಂತ ಬೊಗಳುತ್ತದೆ. ನಿಂತಲ್ಲೇ ಶಿಸ್ತಾಗಿ ಸುಸ್ಸೂ ಮಾಡದೆ, ಒಂದು ಕಾಲನ್ನು ಎತ್ತಿಕೊಂಡು ಮೂತ್ರ ವಿಸರ್ಜಿಸುತ್ತದೆ. ಇದಕ್ಕೂ ಕಾರಣವಿದೆಯಂತೆ, ಈ ಮಿಲ್ಕ್ಶೇಕ್ ಹಸು ಹುಟ್ಟಿದ ಕೆಲವೇ ದಿನಗಳಲ್ಲಿ ಅದರ ತಾಯಿ ತೀರಿ ಹೋಯಿತು. ನಂತರ ಅದು ನಾಯಿಗಳ ಹಿಂಡಿನ ನಡುವೆ ಬೆಳೆದಿದೆ. ನಾಯಿಗಳು ಹೇಗೆ ವರ್ತಿಸುತ್ತವೋ ಅದನ್ನೆಲ್ಲ ರೂಢಿಸಿಕೊಂಡಿದೆ. ಹಸುಗಳ ಹಿಂಡಿನ ನಡುವೆ ಹುಲಿಯ ಮರಿಯನ್ನು ಸಾಕಿದರೂ, ಅದಕ್ಕೆ ನಾವು ಸಾತ್ವಿಕ ರೂಪ ಕೊಡಬಹುದು. ಈ ಪ್ರಕರಣವೂ ಹಾಗೆಯೇ.