ಹೀಗೊಂದು ವಿಮರ್ಶೆ
ಶ್ರೀಯುತ ಶಂಕರಪ್ಪನವರ 'ಕಾಫಿ ಕಪ್ಪಿನಲ್ಲಿ ಕಾಲ್ಚೆಂಡಾಟ' ಕವನ ಸಂಕಲನವು ಹೊರನೋಟಕ್ಕೆ ಮರಡೋನನಂತೆ ಸ್ವಲ್ಪ ಹಳೇ ಲುಕ್ ಹೊಂದಿದೆ. ಆದರೆ ಕವನಗಳನ್ನು ಓದಲು ಹೊರಟರೆ ಅವು ಒಂದೊಂದೂ ಲಯೋನೆಲ್ ಮೆಸ್ಸಿಯಂತೆ, ನೇಮಾರ್ನಂತೆ ಎಗರೆಗರಿ ಗೋಲ್ ಹೊಡೆಯುತ್ತವೆ. ಕೆಲವು ಕವನಗಳು ಬ್ರೆಝಿಲ್ ತಂಡದಂತೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡು ಹೊರಡುತ್ತವೆ. ಆದರೆ ಅರ್ಧದಲ್ಲೇ ಇವುಗಳಲ್ಲಿ ಯಾವ ಕಸುವೂ ಇಲ್ಲ ಎಂದು ಗೊತ್ತಾಗುತ್ತದೆ. ಕೆಲವು ಕವನಗಳು ಮೊದಲ ಓದಿಗೇ ಮುದ್ದಾಗಿವೆ- ಅರ್ಜೆಂಟೀನಾ ತಂಡದ ಆಟಗಾರರ ಪ್ರೇಯಸಿಯರಂತೆ. ಇನ್ನು ಕೆಲವು ಘಾನಾ ತಂಡದ ಆಟಗಾರರ ಯುನಿಫಾರ್ಮ್ನಂತೆ ಕಳಪೆಯಾಗಿವೆ. ಲೆಕ್ಕಕ್ಕೇನೋ ಇಲ್ಲಿ ನಾಲ್ಕು ಫುಟ್ಬಾಲ್ ತಂಡಗಳ ಸದಸ್ಯರ ಸಂಖ್ಯೆಯಷ್ಟು ಕವನಗಳಿವೆ. ಆದರೆ ಎಷ್ಟೇ ಮಂದಿ ಆಡಿದರೂ ಪಂದ್ಯದಲ್ಲಿ ಆಗುವ ಗೋಲ್ಗಳ ಸಂಖ್ಯೆ ಎರಡಕ್ಕಿಂತ ಹೆಚ್ಚಿಲ್ಲ. ಇಲ್ಲಿ ಕ್ರಿಕೆಟ್ನಂತೆ ನೂರಾರು ರನ್ನುಗಳು ಆಗುವುದಿಲ್ಲ ಎಂಬುದನ್ನು ಕವಿ ಅರ್ಥ ಮಾಡಿಕೊಳ್ಳಬೇಕಿದೆ. ರಾಹುಲ್ ದ್ರಾವಿಡ್ನಂತೆ ಇಡೀ ದಿನ ನಿಂತು ಹತ್ತು ರನ್ನುಗಳನ್ನು ಕುಟ್ಟುವುದಕ್ಕಿಂತಲೂ ಜರ್ಮನಿಯ ಥಾಮಸ್ ಮುಲ್ಲರ್ನಂತೆ ಆಡಿ ಹ್ಯಾಟ್ರಿಕ್ ಗೋಲ್ ಬಾರಿಸುವುದು ಒಳ್ಳೆಯದೆಂದು ಅರ್ಥ ಮಾಡಿಕೊಳ್ಳಬೇಕಿದೆ. ಇನ್ನುಳಿದಂತೆ, ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಅವರು ಪುಸ್ತಕಕ್ಕೆ ಸಚಿನ್ ಬ್ಯಾಟ್ಗಿಂತಲೂ ಭಾರದ ಮುನ್ನುಡಿ ಬರೆದಿದ್ದಾರಾದರೂ ಆದು ಆರ್ಸಿಬಿ ಐಪಿಎಲ್ ತಂಡದಂತೆ ಕಳಪೆಯಾಗಿದೆ. ಇನ್ನು ಓದುಗರು, ಬಾಲನ್ನು ಒಳಹೋಗಲು ಬಿಡದ ಗೋಲ್ಕೀಪರ್ಗಳಂತೆ ಅಡ್ಡನಿಂತು ಕವಿತೆಯನ್ನು ಎದುರಿಸುವ ಬದಲು, ಸಹೃದಯರಾಗಿ ಕವಿತೆಗಳನ್ನು ಓದಿದರೆ ಒಳ್ಳೆಯದು.
(ಕ್ಷಮಿಸಿ, ನಮ್ಮ ರೆಗ್ಯುಲರ್ ಪುಸ್ತಕ ವಿಮರ್ಶಕರು ರಜೆಯ ಮೇಲೆ ಹೋಗಿರುವುದರಿಂದ ಇವತ್ತು ಕ್ರೀಡಾ ವರದಿಗಾರರಿಂದ ಪುಸ್ತಕ ವಿಮರ್ಶೆ ಬರೆಸಲಾಗಿದೆ- ಸಂ)
-ಹರೀಶ್ ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

