ನಿನ್ನೆಯ ಡಾಕು ಇಂದಿನ ರಾಜಯೋಗಿ!

ಡಾಕು ಪಂಚಮ್ಸಿಂಗ್...
ಈತನೂ ಒಬ್ಬ ನರಹಂತಕ. ಚಂಬಲ್ ಕಣಿವೆಯಲ್ಲಿ 14 ವರ್ಷ 550 ಜನರ ಗುಂಪು ಕಟ್ಟಿಕೊಂಡಿದ್ದ ಡಕಾಯಿತ. 100ಕ್ಕೂ ಹೆಚ್ಚು ಜನರನ್ನು ನಿರ್ದಯವಾಗಿ ಕೊಂದವ. ಆದರೆ, ಇಂದು ಇವರು ರಾಜಯೋಗಿ! ಈಗಿವರ ಹೆಸರು ಬ್ರಹ್ಮಕುಮಾರ ಪಂಚಮ್ಸಿಂಗ್! ಅಪಹರಣ, ಡಕಾಯಿತಿ, ಕಳ್ಳತನ ಇದೆಲ್ಲವೂ ಅಂದು ಇವರ ನಿತ್ಯಕರ್ಮ. ಮಧ್ಯಪ್ರದೇಶದ ಭೀಂಡ್ ಜಿಲ್ಲೆ ಸಿಂಗ್ಪೂರ ಗ್ರಾಮದ ಪಂಚಮ್ಸಿಂಗ್ 1958ರಲ್ಲಿ ಮೋಹರ್ಸಿಂಗ್ ನೇತೃತ್ವದ ಡಕಾಯಿತರ ತಂಡ ಪ್ರವೇಶಿಸಿದರು.
ಸೇಡಿಗಾಗಿ ಡಕಾಯಿತಿ
ಇವರೇನು ಸುಮ್ಮನೆ ಡಕಾಯಿತಿ ಆಗಿದ್ದಲ್ಲ. ಪಂಚಾಯಿತಿ ಚುನಾವಣೆಗಳಲ್ಲಿ ಸತತವಾಗಿ ವಿರೋಧ ಪಕ್ಷದ ಸದಸ್ಯರಿಂದ ಶೋಷಣೆಗೊಳಗಾಗಿ, ಒಂದು ಹಂತದಲ್ಲಿ ಗಂಭೀರವಾಗಿ ಗಾಯಗೊಂಡು, 20 ದಿನ ಆಸ್ಪತ್ರೆಯಲ್ಲಿ ಕಳೆದರು. ಈ ಆಘಾತವೇ ಅವರೊಳಗೆ ಸೇಡಾಗಿ, ಡಕಾಯಿತರಾದರು. ವಿರೋಧಪಕ್ಷದ 12 ಜನ ಸದಸ್ಯರನ್ನು ನಿರ್ದಯವಾಗಿ ಕೊಂದುಬಿಟ್ಟರು. ಅಂದಿನಿಂದ ಇವರು ಯಾವ ದುಷ್ಕೃತ್ಯ ನಡೆಸಲೂ ಹಿಂಜರಿಯಲಿಲ್ಲ. 1972ರಲ್ಲಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಪ್ರಸ್ತಾವನೆಯನ್ನು ಕೇಂದ್ರ ಸಚಿವರಾಗಿದ್ದ ಜಯಪ್ರಕಾಶ ನಾರಾಯಣ್, ಸರ್ಕಾರದ ಪ್ರತಿನಿಧಿಯಾಗಿ ಮನವೊಲಿಸುವಲ್ಲಿ ಸಫಲರಾದರು. ಆಗ ಪಂಚಮಸಿಂಗ್ 550 ಸಂಗಡಿಗರೊಂದಿಗೆ ಶರಣಾದರು. ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗಿಳಿಸಲಾಯಿತು. ಜೈಲಿನಲ್ಲಿ ಇರುವಾಗಲೇ ಬ್ರಹ್ಮಕುಮಾರಿ ಸೋದರಿಯರು ನೀಡುವ ಈಶ್ವರೀಯ ಜ್ಞಾನ ಲಭಿಸಿತು. ಜೀವನವನ್ನು ಸಂಪೂರ್ಣ ಪರಿವರ್ತನೆ ಮಾಡಿಕೊಳ್ಳಲು ನಿರ್ಣಯಿಸಿದ ಪಂಚಮ್ಸಿಂಗ್, ಮತ್ತೆಂದೂ ಡಕಾಯಿತ ಆಗುವ ಬಗ್ಗೆ ಯೋಚಿಸಲಿಲ್ಲ.
-ಕ.ಮ. ರವಿಶಂಕರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


