ಮಾರುಕೆಟ್ಟೆ!

ಇಳುವರಿ ಕಡಿಮೆ, ಬೆಲೆ ಹೆಚ್ಚು ಎಂಬ ಆಸೆಯೊಂದಿಗೆ ಮಾವಿನ ತೋಟದತ್ತ ನಡೆದಿದ್ದ ಮಹಾರಾಷ್ಟ್ರದ ರತಗಿರಿ ಜಿಲ್ಲೆಯ ...
ಮಾರುಕೆಟ್ಟೆ!
Updated on: 

ಇಳುವರಿ ಕಡಿಮೆ, ಬೆಲೆ ಹೆಚ್ಚು ಎಂಬ ಆಸೆಯೊಂದಿಗೆ ಮಾವಿನ ತೋಟದತ್ತ ನಡೆದಿದ್ದ ಮಹಾರಾಷ್ಟ್ರದ ರತಗಿರಿ ಜಿಲ್ಲೆಯ ಒಬ್ಬ ರೈತ. ಈ ಬಾರಿ ಆತನಲ್ಲಿ ಬಣ್ಣ ಬಣ್ಣದ ಕನಸುಗಳು. ಇಳುವರಿ ಹೆಚ್ಚಾದ ವರ್ಷದಲ್ಲಿ ವರಿಯೇ ಕಾಡುವ ಪರಿ ನೆನೆಯುವ ಆತನಲ್ಲಿ, ಈ ಬಾರಿಯಾದರೂ ತನ ಭಾಗ್ಯದ ಬಾಗಿಲು ತೆರೆಯಬಹುದಲ್ಲಾ ಎಂಬ ಖುಷಿ ಹೆಚ್ಚುತ್ತಿತ್ತು. ಜೊತೆಯಲ್ಲೇ ಇದ್ದ ಪುತ್ರನದ್ದೂ ಒಂದು ರೀತಿಯ ಸಂತಸ, ಅಪ್ಪಾ ಈ ಬಾರಿ ಮಾವಿನ ಹಣ್ಣು ಮಾರಿದ್ರೆ ಭಾರಿ ಹಣವೇ ಸಿಗುತ್ತಲ್ವಾ ಎಂಬ ಪ್ರಶೆ ಬೇರೆ. ಅದೇ ಮೂಡಿನಲ್ಲಿಯೇ ಇದ್ದ ಅವನಿಗೆ ಮಗನ ಮಾತು ಹಿತವೆನಿಸಿತ್ತು.
ಆದರೆ ಈ ಕನಸಿಗೆ ಏಟು ಬೀಳುವ ಎಲ್ಲಾ ಲಕ್ಷಣಗಳು ಈಗ ಎದುರಾಗಿವೆ. ಆಲ್ಫೊನ್ಸೋ ಮಾವಿಗೆ ಐರೋಪ್ಯ ಒಕ್ಕೂಟ ನಿಷೇಧ ಹೇರಿದೆ. ಕಷ್ಟಪಟ್ಟು ಮಾವು ಬೆಳೆದಿದ್ದ ರೈತ, ಇದನು ನಂಬಿಕೊಂಡಿರುವ ಉದ್ಯಮ ಕಂಗಾಲಾಗಿದೆ.
ಆಲ್ಫೊನ್ಸೋ ಮಾವು ಸಿಗುವುದು ತೀರಾ ಅಪರೂಪ. ಮಹಾರಾಷ್ಟ್ರ ಮತ್ತು ಗುಜರಾತ್‌ನ ಕೆಲ ಜಿಲ್ಲೆಗಳಲ್ಲಿ ಮಾತ್ರ ಇದನ ಬೆಳೆಯಲಾಗುತ್ತೆ. ಮಾರ್ಚ್‌ನಿಂದ ಮೇ ವರೆಗೆ ಮಾತ್ರ ಇದರ ಫಸಲು. ಮಹಾರಾಷ್ಟ್ರದ ರತಗಿರಿ ಮತ್ತು ಸಿಂಧುದುರ್ಗದಲ್ಲಿ ತುಸು ಹೆಚ್ಚಾಗಿಯೇ ಇದನ ಬೆಳೆಯಲಾಗುತ್ತದೆ.
ಈ ಹಣ್ಣಿನ ಹೆಸರು ಕೇಳಿದರೆ ಬಾಯಲ್ಲಿ ನೀರೂರದೆ ಇರದು. ಇದರ ರುಚಿಯೇ ಅಂಥದ್ದು. ನೋಡಲೂ ಅಂದ, ತಿನಲೂ ಸ್ವಾದಿಷ್ಟ. ಈ ಮಾವಿಗೆ ದೇಶದ ಮಾರುಕಟ್ಟೆಗಳ ಜೊತೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಭಾರಿ ಬೇಡಿಕೆಯುಂಟು. ಇದಷ್ಟೇ ಅಲ್ಲ, ರುಚಿಯ ಜೊತೆಯಲ್ಲೇ, ತೀರಾ ತಿರಸ್ಕಾರದ ನೋಟ ಬೀರಿಸಿಕೊಂಡದ್ದೂ ಇದೇ ಹಣ್ಣು. ಅದೇಕೋ ಐರೋಪ್ಯ ದೇಶಗಳಿಗೂ ಈ ಮಾವಿಗೂ ಅಷ್ಟಕ್ಕಷ್ಟೇ. 1989ರಲ್ಲಿ ನಿಷೇಧಿಸಿದ್ದ ಈ ಒಕ್ಕೂಟ ಮತ್ತೆ 2007ರ ಏಪ್ರಿಲ್‌ನಲ್ಲಿ ವಾಪಸ್ ಪಡೆದಿತ್ತು. ಇದೀಗ ಮತ್ತೆ ಮೇ 1ರಿಂದ ತಾತ್ಕಾಲಿಕ ನಿಷೇಧ ಜಡಿದಿದೆ.
ನಿಷೇಧಕ್ಕೆ ಏನು ಕಾರಣ?
ಆಲ್ಫೊನ್ಸೋ ಮಾವಿನ ವಿಷೇಧಕ್ಕೆ ಬಹುದೊಡ್ಡ ಕಾರಣ ಇದು 28 ಐರೋಪ್ಯ ದೇಶಗಳ ಹಣ್ಣುಗಳ ಜಾತಿಗೆ ಸೇರಿಲ್ಲ ಎಂಬುದು. ಇದು ಮೊದಲ ಕಾರಣವಾದರೆ, ಬೇರೆಯವು ಇನೂ ಇವೆ. ಐರೋಪ್ಯ ಒಕ್ಕೂಟದ ಗುಣಮಟ್ಟವನು ಭಾರತ ಪಾಲನೆ ಮಾಡುತ್ತಿಲ್ಲ, ಹೆಚ್ಚಾಗಿ ರಾಸಾಯನಿಕ ಬಳಕೆ ಮಾಡುತ್ತಾರೆ, ಹೀಗೆಲ್ಲಾ ಏನೇನೋ ಕುಂಟು ನೆವಗಳು ಬೇರೆ. ಆದರೆ ನಿಜವಾದ ಕಾರಣ ಏನು ಎಂಬುದು ಮಾತ್ರ ತಿಳಿದಿಲ್ಲ. ವಿದೇಶಗಳ ಇತರೆ ಹಣ್ಣುಗಳ ಲಾಬಿಯೇ ಹೆಚ್ಚು ಕೆಲಸ ಮಾಡಿದಂತೆ ತೋರುತ್ತೆ.

ಭಾರತದ ಮಾವು ಕಳಪೆಯೆ?

ಹಾಗೇನಿಲ್ಲ, ಇಲ್ಲಿನ ಕೃಷಿ ಇಲಾಖೆಯ ಗುಣಮಟ್ಟ ಪರೀಕ್ಷಾ ಘಟಕ ಇಲ್ಲಿನ ತರಕಾರಿ ಮತ್ತು ಹಣ್ಣುಗಳನು ಪರೀಕ್ಷಿಸಿಯೇ ಹೊರದೇಶಗಳಿಗೆ ರಫ್ತು ಮಾಡುತ್ತದೆ. ಇದಕ್ಕಾಗಿ ಐರೋಪ್ಯ ಒಕ್ಕೂಟ ಸೇರಿದಂತೆ ಎಲ್ಲಿಗೆಲ್ಲಾ ರಫ್ತು ಮಾಡಲಾಗುತ್ತದೆಯೋ ಆ ದೇಶಗಳ ಗುಣಮಟ್ಟದ ನಿಯಮಾವಳಿಗಳನೂ ಪಾಲಿಸಲಾಗುತ್ತದೆ. ಆದರೂ ಐರೋಪ್ಯ ಒಕ್ಕೂಟ ರಾಸಾಯನಿಕ ಗೊಬ್ಬರ ಅಥವಾ ಔಷಧದ ಪ್ರಮಾಣ ಹೆಚ್ಚಾಗಿದೆ ಎಂಬ ಕಾರಣಕ್ಕಾಗಿ ತರಕಾರಿ ಮತ್ತು ಹಣ್ಣುಗಳನು ನಿಷೇಧಿಸಿರುವುದು ಸರಿಯಲ್ಲ ಎಂಬುದು ಕೃಷಿ ತಜ್ಞರ ವಾದ. ಇದೊಂದು ರೀತಿ ಬೇಕಾಬಿಟ್ಟಿಯಾಗಿ ನೀಡಿದ ವರದಿಯಂತಿದೆ ಎಂದೂ ಅವರು ಹೇಳುತ್ತಾರೆ.

ಅಮೆರಿಕದ್ದು ಸರಿ ಇದೆಯೆ?
ವಿಚಿತ್ರವೆಂದರೆ, ವಿದೇಶಿ ವಸ್ತುಗಳ ಮೇಲಿನ ನಮ್ಮ ದೇಶಿಗರ ವ್ಯಾಮೋಹ ಆ ದೇಶದ ಎಂಥಾ ವಸ್ತುಗಳನಾದರೂ ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ಪರಿಪಾಠ ಸೃಷ್ಟಿಸಿದೆ. ನಿಮಗೆ ಗೊತ್ತಿರಲಿ, ಕಳೆದ ತಿಂಗಳಷ್ಟೇ ಸುಪ್ರೀಂ ಕೋರ್ಟ್ ವಿದೇಶಿ ಹಣ್ಣು ಮತ್ತು ತರಕಾರಿಗಳ ಮೇಲೆ ಎಚ್ಚರವಿರಲಿ ಎಂಬ ಸೂಚನೆ ನೀಡಿದೆ. ತುಂಬಾ ಚೆನಾಗಿ ಹಣ್ಣು, ತರಕಾರಿ ಪ್ಯಾಕ್ ಮಾಡಿದ್ದಾರೆ ಎಂದೋ, ನೋಡಲು ಚೆನಾಗಿದೆ ಎಂದೋ ವಿದೇಶಿ ವಸ್ತುಗಳನು ಖರೀದಿಸಬೇಡಿ. ಇವು ತುಂಬಾ ವಿಷಯುಕ್ತವಾಗಿವೆ. ಇವುಗಳನು ಭಾರತೀಯ ಗುಣಮಟ್ಟದಲ್ಲಿ ಪರೀಕ್ಷಿಸಿ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಬೇಕು. ಅಲ್ಲದೆ ಇವನು ಮಾರಾಟ ಮಾಡುವ ಪ್ರತಿ ಅಂಗಡಿಗೂ ಹೋಗಿ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ.
ಹೀಗೆ ಕೋರ್ಟ್ ನೇಮಕ ಮಾಡಿದ್ದ ಸಮಿತಿಯೊಂದು ಕೆಲವು ಶಿಫಾರಸು ನೀಡಿದೆ. ಅವುಗಳೆಂದರೆ,
    ಆಮದು ಹಣ್ಣು ತರಕಾರಿಗಳ ಕಡ್ಡಾಯ ಪರಿಶೀಲನೆ
    ಯಾವುದೇ ಪರೀಕ್ಷೆ ಇಲ್ಲದೇ ಹಣ್ಣು, ತರಕಾರಿ ಭಾರತ ಪ್ರವೇಶಿಸುವಂತಿಲ್ಲ
- ರಫ್ತುದಾರರಿಂದಲೇ ಔಷಧಗಳ ಪ್ರಮಾಣದ ಬಗ್ಗೆ ಮಾಹಿತಿ ಪಡೆಯಬೇಕು
- ಅಂತಾರಾಷ್ಟ್ರೀಯ ಸ್ವೀಕೃತ ಸ್ಥಳಗಳಲ್ಲಿನ ಕ್ವಾರಂಟೈನ್ ಸ್ಟೇಷನ್‌ನಲ್ಲಿ ಮಾದರಿಗಳ ಪರೀಕ್ಷೆ
ಆದರೆ ಈ ಶಿಫಾರಸುಗಳಿನೂ ಭಾರತದಲ್ಲಿ ಜಾರಿಗೆ ಬಂದಿಲ್ಲ. ಇವು ಬಂದು ಐರೋಪ್ಯ ಒಕ್ಕೂಟ ರೀತಿಯಲ್ಲಿ ಯಾವಾಗ ಕ್ರಮ ತೆಗೆದುಕೊಳ್ಳುತ್ತೋ ಗೊತ್ತಿಲ್ಲ.

ಭಾರತದಲ್ಲಿ ವಿದೇಶಿ ಲಾಬಿ
ನಮ್ಮ ದೇಶದ ಹಣ್ಣು ಮತ್ತು ತರಕಾರಿಗಳನು ಐರೋಪ್ಯ ಒಕ್ಕೂಟಗಳು ನಿಷೇಧಿಸಿಬಿಡಬಹುದು. ಆದರೆ ಭಾರತದ ಮಾರುಕಟ್ಟೆ ಮರೆಯಲು ಅವುಗಳಿಗೆ ಸಾಧ್ಯವೆ?
ಇಲ್ಲವೇ ಇಲ್ಲ, ಏಕೆಂದರೆ ಈ ದೇಶಗಳಿಗೆ ಪ್ರಮುಖವಾಗಿ ಬೇಕಿರುವುದು ಭಾರತದ ಮಾರುಕಟ್ಟೆಯೇ. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕೊಳ್ಳುಬಾಕ ಸಂಸ್ಕೃತಿ ಅಳವಡಿಸಿಕೊಂಡಿರುವ ದೇಶವೆಂದರೆ ಅದು ಭಾರತವೇ. ಹೀಗಾಗಿಯೇ ವಿದೇಶಿ ಕಂಪನಿಗಳಿಗೆ ಭಾರತದ ಮೇಲೆ ಅತೀವ ಪ್ರೀತಿ. ಹೀಗಾಗಿಯೇ ಅವು ತಮ್ಮ ವಸ್ತುಗಳನು ಮಾರಾಟ ಮಾಡಲು ಹಲವಾರು ಗಿಮಿಕ್‌ಗಳನು ಮಾಡುತ್ತಲೇ ಇರುತ್ತವೆ. ಅದರಲ್ಲೂ ಮುಖ್ಯವಾಗಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವಾಗ ಅವು ಬಳಸುವ ವಿಧಾನ ಮಾತ್ರ ಸೂಪರ್.
ಒಂದು ಕಂಪನಿ ನಮ್ಮಲ್ಲಿಯ ಹಣ್ಣು ತಿನಿ, ಅದು ಬಿಪಿಯನು ನಿಯಂತ್ರಿಸುತ್ತದೆ ಎಂದು ಹೇಳುತ್ತೆ. ಮತ್ತೊಂದು ಕಂಪನಿ ಶುಗರ್ ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಮಾಡುತ್ತೆ ಎನುತ್ತೆ. ಸೋಯಾ ತಿಂದರೆ ನಾನ್‌ವೆಜ್ ತಿನೋದೇ ಬೇಡ ಎಂಬ ಸ್ಲೋಗನ್ ಕೂಡ ಇದೆ. ದೊಡ್ಡ ಹೊಟೇಲ್‌ಗಳ ಭಾರಿ ಬಾಣಸಿಗರನು ಬುಟ್ಟಿಗೆ ಹಾಕಿಕೊಂಡು ವಿದೇಶಿ ವಸ್ತುಗಳಿಂದಲೇ ಆಹಾರ ಪದಾರ್ಥ ಸಿದ್ಧಪಡಿಸುವಂತೆ ಮಾಡುವುದು. ಇದಕ್ಕಾಗಿ ವಿದೇಶಿ ಕಂಪನಿಗಳು ಇಲ್ಲಿ ದೊಡ್ಡ ಸಮೀಕ್ಷೆಯನೇ ನಡೆಸುತ್ತವೆ. ಕೆಲವು ವರ್ಷಗಳ ಹಿಂದೆ ಕೇವಲ ಜಾಹೀರಾತುಗಳ ಮೂಲಕವಷ್ಟೇ ಅಲ್ಲಿನ ಆಹಾರ ಅಥವಾ ಹಣ್ಣು, ತರಕಾರಿ ಪ್ರಚಾರ ಮಾಡಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಹಣ್ಣು, ತರಕಾರಿಗಳಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಹೇಳಲಾಗುತ್ತಿದೆ. ಈ ಪದಾರ್ಥ ತಿಂದರೆ ಹೆಲ್ದಿಯಾಗಿರಬಹುದು ಎಂಬ ಬಗ್ಗೆ ಆಮಿಷ ಒಡ್ಡಲಾಗುತ್ತಿದೆ. ಇದಕ್ಕಾಗಿಯೇ ಅಮೆರಿಕದ ಹಲವಾರು ಕಂಪನಿಗಳು ಭಾರತದಲ್ಲಿ ಹುಟ್ಟಿಕೊಂಡಿವೆ. ಇವುಗಳ ಕೆಲಸ ಕೇವಲ ಉತ್ತೇಜನವಷ್ಟೇ.
ಇದಕ್ಕಾಗಿ ಕೃಷಿ ವಿವಿಗಳನು ಬಳಸಿಕೊಳ್ಳುತ್ತಿರುವ ಕಂಪನಿಗಳು, ಭಾರತದ ಆಹಾರ ಪದ್ಧತಿಯಲ್ಲಿ ಇವುಗಳ ಸೇರ್ಪಡೆ ಹೇಗೆ ಎಂಬ ಬಗ್ಗೆ ಬೋಧನೆ ಮಾಡುತ್ತಿವೆ. ಉದಾಹರಣೆಯೆಂದರೆ ಭಾರತದ ಆಹಾರ ಪದ್ಧತಿಗೆ ಆಲಿವ್ ಎಣ್ಣೆ ಸೇರಿಸಿದ ಹಾಗೆ.


ನಷ್ಟ ಎಷ್ಟು?


50ರಿಂದ 60 ಕೋಟಿ (ಮಹಾರಾಷ್ಟ್ರದ ರೈತರಿಗೆ ಆಗುವ ನಷ್ಟ)


ಆಲ್ಫೋನ್ಸೋ ಮಾವಿನ ಹಣ್ಣಿನ ಬೆಲೆ
800ರಿಂದ 1200 (ಡಜನ್‌ಗೆ)


ಭಾರತದಿಂದ ರಫ್ತು
55,000 ಟನ್ (ಪ್ರತಿ ವರ್ಷ)
2.75 ಶತಕೋಟಿ ಮೌಲ್ಯ


ಸ್ಥಾನ ಮಾನ

    ಹಣ್ಣು ತರಕಾರಿ ಬೆಳೆಯುವ ರಾಷ್ಟ್ರಗಳಲ್ಲಿ ಭಾರತಕ್ಕೆ 2ನೇ ಸ್ಥಾನ (ಶೇ.10). ಮೊದಲನೇ ಸ್ಥಾನದಲ್ಲಿ ಅಮೆರಿಕ ಇದೆ.
    ಜಾಗತಿಕವಾಗಿ ಹಣ್ಣುಗಳ ಉತ್ಪಾದನೆ- 370 ದಶಲಕ್ಷ ಟನ್. ಭಾರತದ ಪಾಲು- 30 ದಶಲಕ್ಷ ಟನ್
    ಜಾಗತಿಕವಾಗಿ ತರಕಾರಿ ಉತ್ಪಾದನೆ- 456 ದಶಲಕ್ಷ ಟನ್. ಭಾರತದ ಪಾಲು- 59 ದಶಲಕ್ಷ ಟನ್(ಶೇ.17)
    ಫ್ರೆಶ್ ತರಕಾರಿ ಬೆಳೆಯುವಲ್ಲಿ ಭಾರತಕ್ಕೆ 2ನೇ ಸ್ಥಾನ, ಚೀನಾಕ್ಕೆ ಮೊದಲ ಸ್ಥಾನ



ಆಮದಾಗುವ ಹಣ್ಣು, ತರಕಾರಿಗಳು
ಸೇಬು, ಬಾದಾಮಿ, ಖರ್ಜೂರ, ದ್ರಾಕ್ಷಿ, ಸಂರಕ್ಷಿಸಲ್ಪಟ್ಟ ಹಣ್ಣುಗಳು, ಜ್ಯೂಸ್ ಮತ್ತು ತರಕಾರಿಗಳು.

ರಫ್ತಾಗುವ ಹಣ್ಣು, ತರಕಾರಿ
ಮಾವು, ಅಣಬೆ, ದ್ರಾಕ್ಷಿ, ಈರುಳ್ಳಿ, ಆಲೂಗಡ್ಡೆ, ಓಕ್ರಾ, ಬಿಟ್ಟರ್‌ಗಾರ್ಡ್, ಹಸಿರು ಮೆಣಸಿನಕಾಯಿ, ಮೆಕ್ಕೆಜೋಳ, ಲೈವ್‌ಬೀನ್ಸ್, ಬೆಲ್‌ಪೆಪ್ಪರ್.


ಜೊತೆಗೆ ಸೇಬು, ದ್ರಾಕ್ಷಿ, ಪೇರಳೆ ಹಣ್ಣುಗಳನ್ನು ಇಲ್ಲಿನ ಅವಿಭಾಜ್ಯ ಅಂಗವಾಗಿ ಮಾಡಲಾಗಿದೆ. ಸಮೀಕ್ಷೆಗಳಷ್ಟೇ ಅಲ್ಲ, ಭಾರತದಲ್ಲಿರುವ ದೊಡ್ಡ ಬಾಣಸಿಗರ ಬಳಿಯಲ್ಲಿ ವಿದೇಶಿ ವಸ್ತುಗಳಿಂದ ಆಹಾರ ಮಾಡಿಸಿಯೂ ಪ್ರಚಾರ ಮಾಡಲಾಗುತ್ತಿದೆ. ಟಿವಿ ಮೂಲಕ ತೋರಿಸಿ, ಆ ವಸ್ತುಗಳು ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವಂತೆಯೂ ವ್ಯವಸ್ಥೆಗೊಳಿಸಲಾಗುತ್ತಿದೆ. ಇದರಿಂದಾಗಿಯೇ ವರ್ಷದಿಂದ ವರ್ಷಕ್ಕೆ ಅಮೆರಿಕದಿಂದ ಭಾರತಕ್ಕೆ ಆಮದಾಗುವ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯಕರ ಹಣ್ಣು ತರಕಾರಿ
ವಿದೇಶಿ ಕಂಪನಿಗಳ ಮಾರುಕಟ್ಟೆ ಗಿಮಿಕ್‌ನ ಇನ್ನೊಂದು ರೂಪ ಇದು. ಜಾಗತೀಕರಣಕ್ಕೂ ಮುನ್ನ ಹಣ್ಣು ಮತ್ತು ತರಕಾರಿಗಳಿಂದ ಇಷ್ಟೊಂದು ಪ್ರಯೋಜನವಿದೆ ಎಂಬುದು ಹೆಚ್ಚಾಗಿ ಯಾರಿಗೂ ಗೊತ್ತಿರಲಿಲ್ಲ ಅನ್ನಿಸುತ್ತದೆ. ಆದರೆ ಬರಬರುತ್ತಾ ಯಾವ ಹಣ್ಣು ತಿನ್ನಬೇಕು, ಯಾವುದನ್ನು ತಿನ್ನಬಾರದು, ಹೆಚ್ಚಾಗಿ ಯಾವ ತರಕಾರಿ ಬಳಕೆ ಮಾಡಬೇಕು ಎಂಬಿತ್ಯಾದಿಯಾಗಿ ಟಿವಿಯಲ್ಲಿ, ಪೇಪರ್‌ಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳು, ಸ್ಟೋರಿಗಳೇ ಹುಟ್ಟಿಕೊಂಡವು. ಇವು ಹೇಳುವುದೆಲ್ಲ ಸತ್ಯವಲ್ಲ ಎಂಬುದು ಗೊತ್ತಿದ್ದದ್ದೇ.

ಯಾವುದು ಎಷ್ಟೆಷ್ಟು?
ಯಾವ ಹಣ್ಣು, ತರಕಾರಿಗಳಲ್ಲಿ ಎಷ್ಟು ಕ್ಯಾಲೊರಿ ಇದೆ, ವಿಟಮಿನ್ ಇದೆ ಎಂಬುದನ್ನೂ ಕಂಪನಿಗಳು ಚೆನ್ನಾಗಿಯೇ ಬಣ್ಣಿಸುತ್ತವೆ. ಉದಾಹರಣೆಗೆ ಕೆಲವನ್ನು ನೋಡಬಹುದು.



ಸೇಬು
ಪೌಷ್ಟಿಕಾಂಶ ಪ್ರಮಾಣ 75 ಕ್ಯಾಲೊರಿ, 3 ಜಿ ನಾರಿನ ಅಂಶ. ಅಸ್ತಮಾ ಮತ್ತು ಸಕ್ಕರೆ ಕಾಯಿಲೆಯಿಂದ ದೂರ ಇಡುತ್ತೆ. ಸ್ವಾಭಾವಿಕವಾಗಿ ಬಾಯಿ ಮತ್ತು ಹಲ್ಲುಗಳನ್ನು ಸ್ವಚ್ಛ ಮಾಡುತ್ತೆ.
ಬೆಣ್ಣೆಹಣ್ಣು
ಪೌಷ್ಟಿಕಾಂಶ ಪ್ರಮಾಣ 114 ಕ್ಯಾಲೊರಿ, 4.5 ಜಿ ನಾರಿನ ಅಂಶ, ವಿಟಮಿನ್ ಇ. ದೇಹದಲ್ಲಿ ಕೊಬ್ಬು ಬೆಳೆಯದಿರುವಂತೆ ನೋಡಿಕೊಳ್ಳುತ್ತೆ, ಹೃದಯ ಆರೋಗ್ಯಯುತವಾಗಿರುವಂತೆ ಮಾಡುತ್ತದೆ.
ಬಾಳೆಹಣ್ಣು
ಪೌಷ್ಟಿಕಾಂಶ ಪ್ರಮಾಣ 105 ಕ್ಯಾಲೊರಿ, 3 ಜಿ ನಾರಿನ ಅಂಶ, ವಿಟಮಿನ್ ಬಿ 6. ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.
ಬ್ಲಾಕ್‌ಬೆರ್ರಿ
ಪೌಷ್ಟಿಕಾಂಶ ಪ್ರಮಾಣ 31 ಕ್ಯಾಲೊರಿ, 4 ಜಿ ನಾರಿನ ಅಂಶ. ಸ್ಟ್ರೋಕ್ ಮತ್ತು ಕ್ಯಾನ್ಸರ್ ತಡೆಯುತ್ತೆ. ಶ್ವಾಸಕೋಶ ಕ್ಯಾನ್ಸರ್ ಕಣಗಳನ್ನು ತಡೆಯುತ್ತದೆ.
ಬ್ಲೂಬೆರ್ರಿ
ಪೌಷ್ಟಿಕಾಂಶ ಪ್ರಮಾಣ 41 ಕ್ಯಾಲೊರಿ, 1.5 ಜಿ ನಾರಿನ ಅಂಶ. ಪಾರ್ಕಿನ್ಸನ್ ಮತ್ತು ಆಲ್ಜೈಮರ್ ತಡೆಯುತ್ತೆ.
ದ್ರಾಕ್ಷಿ
ಪೌಷ್ಟಿಕಾಂಶ ಪ್ರಮಾಣ 53 ಕ್ಯಾಲೊರಿ, 1 ಜಿ ನಾರಿನ ಅಂಶ, ಮ್ಯಾಂಗನೀಸ್ ಅಂಶ. ಹೃದಯ ಸಂಬಂಧಿ ರೋಗ ತಡೆಯುತ್ತೆ.
ಮಾವು
ಪೌಷ್ಟಿಕಾಂಶ ಪ್ರಮಾಣ 54 ಕ್ಯಾಲೊರಿ, 1.5 ಜಿ ನಾರಿನ ಅಂಶ, ಅಂಧತ್ವ ನಿವಾರಣೆ ಮಾಡುತ್ತದೆ.
ಕಿತ್ತಳೆ
ಪೌಷ್ಟಿಕಾಂಶ ಪ್ರಮಾಣ 62 ಕ್ಯಾಲೊರಿ, 3 ಜಿ ನಾರಿನ ಅಂಶ, ವಿಟಮಿನ್ ಸಿ, ಪೋಟಾಶಿಯಂ, ಗರ್ಭಿಣಿಯರಿಗೆ ಉಪಯುಕ್ತ.
ಪಪ್ಪಾಯಿ
ಪೌಷ್ಟಿಕಾಂಶ ಪ್ರಮಾಣ 59 ಕ್ಯಾಲೊರಿ, 3 ಜಿ ನಾರಿನ ಅಂಶ, ವಿಟಮಿನ್ ಸಿ ಮತ್ತು ಎ, ಚರ್ಮವನ್ನು ಚೆನ್ನಾಗಿ ಇಡುತ್ತದೆ.
ಪೈನಾಪಲ್
ಪೌಷ್ಟಿಕಾಂಶ ಪ್ರಮಾಣ 40 ಕ್ಯಾಲೊರಿ, 1 ಜಿ ನಾರಿನ ಅಂಶ, ಜೀರ್ಣಶಕ್ತಿ ಹೆಚ್ಚಿಸುತ್ತದೆ. ರಕ್ತ ಸರಾಗವಾಗಿ ಹರಿಯುವಂತೆ ಮಾಡುತ್ತದೆ.


- ಸೋಮಶೇಖರ್ ಸಿ.ಜೆ.  
somapreethi@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com