ಪಿಳ್ಳಪ್ಪನ ಪಿಜ್ಜಾ
ಪಿಜ್ಜಾ ಅಂಗಡಿ ಪಿಳ್ಳಪ್ಪ
ಅದರಲ್ಲೇನಿದೆ ಹೇಳಪ್ಪ?
ಪಿಜ್ಜಾದಲ್ಲಿದೆ ಹಾಳೂಮೂಳು
ಅದನ್ನು ತಿಂದರೆ ಆರೋಗ್ಯಹಾಳು
ಆದರೂ ಅದನ್ನು ಮಾಡುವುದೇಕೆ?
ಎಲ್ಲರ ಆರೋಗ್ಯ ಕೆಡಿಸುವುದೇಕೆ?
ಪಿಜ್ಜಾ ಅಂಗಡಿಯ ಪಿಳ್ಳಪ್ಪ
ಅದನ್ನು ಮಾಡಲೇ ಬೇಡಪ್ಪ
ಇಡ್ಲೀ ದೋಸೆ ಚಪಾತಿ ಮಾಡು
ಸಾಂಬರ್ ಚಟ್ನಿ ಜೊತೆ ನೀಡು
ಚಪಾತಿ ರೊಟ್ಟಿ ಪೂರಿಗಳ ಮಾಡು
ಕೂರ್ಮಾ ಸಾಗು ಜೊತೆಗಿಟ್ಟು ನೀಡು
ತರಕಾರಿಗಳನು ತೊಳೆದೂ ಹೆಚ್ಚಿ
ಕೋಸಂಬರಿ ರಾಯತ ಸಾಸಿವೆ ಮಾಡು
ಪಿಜ್ಜಾ ಅಂಗಡಿಯ ಪಿಳ್ಳಪ್ಪ
ಪಿಜ್ಜಾ ನೀ ಮಾಡಬೇಡಪ್ಪ
ವಾಂಗೀಬಾತು ಟಮೋಟಬಾತು
ಬಿಸಿಬೇಳೆಬಾತು ಕೋಸಿನಬಾತು
ಪುಳಿಯೋಗರೆ ಚಿತ್ರಾನ್ನ ಕಾರಾಬಾತು
ಸಿಹಿಯಾ ಪೊಂಗಲ್ ಕೇಸರಿಬಾತು
ಉಪ್ಪಿಟ್ಟು ಶಾವಿಗೆ ಗೊಜ್ಜವಲಕ್ಕಿ
ರುಚಿ ಶುಚಿಯಾಗಿ ಮೊಸರನ್ನ ಮಾಡು
ಪಿಜ್ಜಾ ಅಂಗಡಿ ಪಿಳ್ಳಪ್ಪ
ಪಿಜ್ಜಾ ನೀ ಮಾಡಬೇಡಪ್ಪ
ದೇಸೀ ಅಡಿಗೆ ನೀ ಮಾಡಪ್ಪ
ದೇಶದ ಏಳಿಗೆ ನೀ ಕಾಣಪ್ಪ
ಮಕ್ಕಳ ಆರೋಗ್ಯ ಕಾಪಾಡಪ್ಪ
ಮುದುಕರ ಕಾಳಜಿ ನೀ ವಹಿಸಪ್ಪ
ವಿದೇಶಿ ಸಂಸ್ಕೃತಿ ಬಿಡಪ್ಪ
ನಮ್ಮ ಸಂಸ್ಕೃತಿ ಬೆಳೆಸಪ್ಪ
ಪಿಜ್ಜಾ ಅಂಗಡಿ ಪಿಳ್ಳಪ್ಪ
ನಮ್ಮ ದೇಶವ ನೀನು ಉಳಿಸಪ್ಪ
- ತುಳಸಿ. ಸಿ. ವಿಜಯಕುಮಾರಿ