ತತ್ವ ರತ್ನಗಳ ಭಂಡಾರ
ಒಟ್ಟು 13,000 ಶ್ಲೋಕಗಳನ್ನು ಹೊಂದಿರುವ ಶ್ರೀ ಶಿವತತ್ವರತ್ನಾಕರ ಕೃತಿಯು ಹತ್ತು ವಿದ್ವಾಂಸರನ್ನೊಳಗೊಂಡ ಮಂಡಳಿಯಿಂದ ಕೆಳದಿಯ ಅರಸ ಬಸವರಾಜ ಭೂಪಾಲನ ನೇತೃತ್ವದಲ್ಲಿ ಸಂಕಲನಗೊಂಡಿದೆ. ವಿವಿಧ ಶಾಸ್ತ್ರ ವಿಷಯಗಳು, ಖಗೋಳಾದಿ ವಿಜ್ಞಾನಗಳು, ಕುಕ್ಕುಟ ಶಾಸ್ತ್ರವೇ ಮೊದಲಾದ ಜೀವ ವಿಜ್ಞಾನ, ರಥ ನಿರ್ಮಾಣ, ನೃತ್ಯಶಾಲಾ ನಿರ್ಮಾಣ ಮುಂತಾದ ಇಂಜಿನಿಯರಿಂಗ್, ಸಂಗ್ರಾಮ, ಇತಿಹಾಸ, ಆಗಮ ಮುಂತಾದ ಸಂಕೀರ್ಣಗಳು ಹೀಗೆ ಒಟ್ಟು 213ಕ್ಕೂ ಹೆಚ್ಚು ಶಾಸ್ತ್ರಗಳ ವಿವರಣೆಗಳನ್ನೊಳಗೊಂಡ ಈ ಕೃತಿಯು ವಿಶ್ವದ ಪ್ರಾಚೀನ ವಿಶ್ವಕೋಶ ಎಂಬ ಹೆಗ್ಗಳಿಕೆ ಹೊಂದಿದೆ. ಶಿವಮೊಗ್ಗ ಜಿಲ್ಲೆಯ ಕೆಳದಿಯಲ್ಲಿ ರಚಿತವಾಗಿರುವ ಸಂಪುಟವು ಕನ್ನಡ ನೆಲದಿಂದ ಬಂದ ಮೊದಲ ಸಂಸ್ಕೃತ ವಿಶ್ವಕೋಶವಾಗಿದೆ. ಸವಿಗನ್ನಡದಲ್ಲಿ ಮೊದಲ ಬಾರಿಗೆ, ವಿಸ್ತೃತವಾದ ವಿವರಣೆಗಳೊಂದಿಗೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಸಂಪಾದಿಸಿದ್ದಾರೆ. ದರೇಸಾ ಪಬ್ಲಿಕೇಷನ್ನಿಂದ ಚೊಚ್ಚಲ ಕೃತಿಯಾಗಿ ಪ್ರಕಟಣೆಗೊಂಡಿದೆ.
ಮುನ್ನುಡಿಯಲ್ಲೇನಿದೆ?
ಶ್ರೀಶಿವತತ್ವರತ್ನಾಕರವು ಪುರಾಣ ಭಾಷೆಯಲ್ಲಿ ರಚಿತವಾಗಿದ್ದರೂ, ಇಲ್ಲಿ ಮುಳುಗಿದರೆ ಅದರ ಆಳದಲ್ಲಿ ಶಿವತತ್ತ್ವವೆಂಬ ರತ್ನವೊಂದು ಪ್ರಧಾನವಾಗಿ ದೊರೆಯುವುದಷ್ಟೇ ಅಲ್ಲ, ಸಿದ್ಧನಿಗೆ ಕೈವಶವಾಗಿರುವ ಅಣಿಮಾದಿಗಳಂತೆ ಅನೇಕ ಲೌಕಿಕಾಲೌಕಿಕ ರತ್ನಗಳೂ ದೊರೆಯುವುವು. ಈ ಗ್ರಂಥ ವಿಜ್ಞಾನಪೂರ್ವವರ್ತಿಯಾದ ಸಂಸ್ಕೃತಿಯನ್ನು ಅಭ್ಯಸಿಸುವವರಿಗೆ ಅದ್ಭುತವಾದ ರಸದೌತಣ. ಮಣಿ, ಮಂತ್ರ, ತಂತ್ರ, ಔಷಧ, ರಸ, ಸಾಹಿತ್ಯ, ಸಂಗೀತ, ಚಿತ್ರ, ವಾಸ್ತು, ನೃತ್ಯ, ಇತಿಹಾಸ, ಜ್ಯೋತಿಷ, ಆಗಮ, ಖಗೋಳ, ಭೂಗೋಳ, ರಥ, ತುರಗ, ಹಸ್ತಿ, ಸಂಗ್ರಾಮ, ಕೃಷಿ, ರಾಜನೀತಿ ಮುಂತಾದ ವಿಷಯ ವೈವಿಧ್ಯತೆಗಳನ್ನೊಳಗೊಂಡ ಅಪೂರ್ವಪಾಕವಿದು.
ಸಂಪಾದಕರು: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
ಪ್ರಕಾಶಕರು: ದರೇಸಾ ಪಬ್ಲಿಕೇಷನ್ಸ್
ನಂ.36, 3ನೇ ಮಹಡಿ, ರೇವೆ ಪೊಬ್ಬತ್ತಿ ಬಿಲ್ಡಿಂಗ್,
ಸೌತ್ ಎಂಡ್ ರಸ್ತೆ, ಬಸವನಗುಡಿ,
ಬೆಂಗಳೂರು - 560 004.
ಇ-ಅಂಚೆ: contactus@daresapublications.com, mailto:contactus@daresapublications.com
ವಿವರಗಳಿಗೆ: 9632294500, 9845284448
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

