ಈಗಿನ ಸುದ್ದಿ

ಮಂಡ್ಯ: ರಾಹುಲ್ ಜೊತೆ ಕೃಷ್ಣಾ ಪ್ರಚಾರ

Published On :

ಮಂಡ್ಯ: ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷ ರಾಹುಲ್‌ಗಾಂಧಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರು ಪಾಲ್ಗೊಂಡ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಭಿನ್ನಮತದಿಂದಾಗಿ ಪರಸ್ಪರ ದೂರವಾಗಿದ್ದ ನಟ ಅಂಬರೀಶ್ ಮತ್ತು ಎಸ್.ಎಂ.ಕೃಷ್ಣಾ ಅವರು ಇಂದಿನ ಪ್ರಚಾರ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾರ್ಯಕರ್ತರಿಗೆ ಹೊಸ ಹುರುಪು ನೀಡಿದರು. ಆದರೆ ಇಬ್ಬರು ನಾಯಕರು ಕೂಡ ಪರಸ್ಪರ ಮುಖಾಮುಖಿ ಮಾತನಾಡಲಿಲ್ಲ. ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಅಂಬರೀಶ್ ಅವರು ತಮ್ಮ ಭಾಷಣದ ಪ್ರತಿಯನ್ನು ಪತ್ನಿ ಸುಮಲತಾ ಅವರಿಗೆ ನೀಡಿ ವೇದಿಕೆಯಿಂದ ಕೆಳಗೆ ಇಳಿದರು.

ಭಾಷಣದ ಪ್ರತಿ ಪಡೆದ ಸುಮಲತಾ ಅವರು ನೆರೆದಿದ್ದ ಅಪಾರ ಜನರನ್ನುದ್ದೇಶಿಸಿ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಿದ್ದು, ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯ ಚುನಾವಣಾ ವೆಚ್ಚ 18 ಲಕ್ಷರು.ಗಳನ್ನು ಮೀರುವಂತಿಲ್ಲ. ಪಕ್ಷದ ತಾರಾ ಪ್ರಚಾರಕರು ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ಅದರ ಸಂಪೂರ್ಣ ಖರ್ಚುವೆಚ್ಚಗಳು ಪಕ್ಷಕ್ಕೆ ಸೇರುತ್ತವೆ. ಆದರೆ ಇಲ್ಲಿ ಅಭ್ಯರ್ಥಿ ವೇದಿಕೆಯನ್ನು ಹಂಚಿಕೊಳ್ಳುವಂತಿಲ್ಲ ಮತ್ತು ಭಾಷಣ ಮಾಡುವಂತಿಲ್ಲ.

ಕಣದಲ್ಲಿರುವ ಅಭ್ಯರ್ಥಿ ವೇದಿಕೆ ಹಂಚಿಕೊಂಡು ಭಾಷಣ ಮಾಡಿದರೆ ಕಾರ್ಯಕ್ರಮದ ಸಂಪೂರ್ಣ ಖರ್ಚು-ವೆಚ್ಚ ಅಭ್ಯರ್ಥಿಯ ಖಾತೆಗೆ ದಾಖಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಅನರ್ಹ ಎಂದು ಪರಿಗಣಿಸಿ, ಆತನನ್ನು ಕಣದಿಂದ ಹಿಂದೆ ಸರಿಸುವ ಎಲ್ಲ ಹಕ್ಕುಗಳು ಚುನಾವಣಾ ಆಯೋಗಕ್ಕೆ ಇರುತ್ತದೆ.

ಹೀಗಾಗಿಯೇ ನಟ ಅಂಬರೀಶ್ ಅವರು ವೇದಿಯಲ್ಲಿ ಕುಳಿತುಕೊಳ್ಳದೇ ವೇದಿಕೆಯನ್ನು ಬಿಟ್ಟು ಹೊರ ನಡೆದರು. ಆದರೆ ಅಲ್ಲಿ ನೆರೆದಿದ್ದ ಬೆಂಬಲಿಗರಲ್ಲಿ ಇದು ಕೊಂಚ ಇರುಸು ಮುರುಸು ಮೂಡಿಸಿದಂತೆ ಕಂಡುಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.