3ಇಡಿಯಟ್ಸ್ ಅನ್ನು ಹಿಂದಿಕ್ಕಿದ 'ಚೆನ್ನೈ ಎಕ್ಸ್ ಪ್ರೆಸ್'

ನವದೆಹಲಿ: ಇತ್ತೀಚೆಗೆ ತೆರೆಕಂಡ ಶಾರುಖ್ ಖಾನ್ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಚಲನಚಿತ್ರ ಹಣ ಗಳಿಕೆಯಲ್ಲಿ ಅಮೀರ್ ಖಾನ್ ಅಭಿನಯದ 3ಇಡಿಯಟ್ಸ್ ಚಿತ್ರದ ದಾಖಲೆಯನ್ನು ಅಳಿಸಿ ಹಾಕಿದೆ.
ಕಳೆದ ವಾರವಷ್ಟೇ ತೆರೆಕಂಡ ' ಚೆನ್ನೈ ಎಕ್ಸ್ ಪ್ರೆಸ್ ' ಗಳಿಕೆಯಲ್ಲಿ ವೇಗವಾಗಿ 100 ಕೋಟಿ ಗಳಿಸಿದ ಬಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನಗಳಿಸಿತ್ತು. ಇದೀಗ ಇದೇ ಚಿತ್ರ ಗಳಿಕೆಯಲ್ಲಿ ಮತ್ತೊಂದು ನೂತನ ದಾಖಲೆ ನಿರ್ಮಿಸಿದೆ. ಗಳಿಕೆಯಲ್ಲಿ 200ಕೋಟಿ ರು.ಗಳನ್ನು ಗಳಿಸಿದ್ದ 3ಇಡಿಯಟ್ಸ್ ಚಿತ್ರದಾಖಲೆಯನ್ನು 200ಕೋಟಿಗೂ ಅಧಿಕ ಗಳಿಕೆ ಕಂಡಿರುವ ಚೆನ್ನೈ ಎಕ್ಸ್ ಪ್ರೆಸ್ ಹಿಂದಿಕ್ಕಿದೆ.
ಈ ಹಿಂದೆ ತೆರೆಕಂಡ 2ನೇ ವಾರದ ಅಂತ್ಯಕ್ಕೆ ' ಚೆನ್ನೈ ಎಕ್ಸ್ ಪ್ರೆಸ್ ' ಚಿತ್ರ ಸುಮಾರು 171.71 ಕೋಟಿ ರು.ಗಳನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿಗಳು ಹರಿದಾಡುತ್ತಿದ್ದು, ಮೊದಲ ವಾರ ' ಚೆನ್ನೈ ಎಕ್ಸ್ ಪ್ರೆಸ್ ' ಚಿತ್ರ ವಿಶ್ವಾದ್ಯಂತ ಸುಮಾರು 156.70 ಕೋಟಿ ರು.ಗಳನ್ನು ಗಳಿಸಿದೆ. ಅಂತೆಯೇ ಎರಡನೇ ವಾರ 6.5 ಕೋಟಿ ಮತ್ತು ಅದೇ ವಾರದ ಅಂತ್ಯದಲ್ಲಿ 8.51 ಕೋಟಿ ರು.ಗಳನ್ನು ಗಳಿಸಿತ್ತು.
ಮೂರನೇ ವಾರದಲ್ಲಿಯೂ ಗಳಿಕೆಯಲ್ಲಿ ' ಚೆನ್ನೈ ಎಕ್ಸ್ ಪ್ರೆಸ್ ' ಮುಂದಿದ್ದು, 200 ಕೋಟಿ ರು.ಗಳನ್ನು ಗಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ತೆರೆಕಂಡ ಮೂರು ವಾರಗಳಲ್ಲಿ ಅತ್ಯಧಿಕ ಹಣ ಗಳಿಕೆ ಮಾಡಿದ ಚಿತ್ರವೆಂಬ ಖ್ಯಾತಿ ಗಳಿಸಿದೆ. ಶಾರುಖ್ ಖಾನ್ ನಟಿಸಿದ್ದ ಈ ಹಿಂದಿನ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಶಾರುಖ್ ಖಾನ್ ನಿರ್ಮಾಣದ ರಾಒನ್ ಮತ್ತು ಯಶ್ ಚೋಪ್ರಾ ನಿರ್ದೇಶನದ ಜಬ್ ತಕ್ ಹೈ ಜಾನ್ ಚಿತ್ರಗಳು ನೂರು ಕೋಟಿಗಳಿಸುವಲ್ಲಿ ವಿಫಲವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


