ಎಸಿಸಿ ಎಮರ್ಜಿಂಗ್ ಟ್ರೋಫಿ: ಭಾರತಕ್ಕೆ ಭರ್ಜರಿ ಜಯ

ಸಿಂಗಾಪುರ: ಎಸಿಸಿ ಉದಯೋನ್ಮುಖ ತಂಡಗಳ ಕಪ್ ಪಂದ್ಯಾವಳಿಯ ಫೈನಲ್ನಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯಗಳಿಸಿದೆ.
ಸಿಂಗಾಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ 9 ವಿಕೆಟ್ಗಳ ಜಯ ದಾಖಲಿಸುವುದರೊಂದಿಗೆ ಎಸಿಸಿ ಉದಯೋನ್ಮುಖ ತಂಡಗಳ ಕಪ್ ಅನ್ನು ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ್ ಪಾಕಿಸ್ತಾನ ತಂಡ ಕೇವಲ 47 ಓವರ್ಗಳಲ್ಲಿ 159 ರನ್ಗಳಿಗೆ ಮುಗ್ಗರಿಸಿತು. ಸುಲಭದ ಮೊತ್ತವನ್ನು ಬೆನ್ನತ್ತಿದ ಭಾರತ ಕೇವಲ 33.4 ಓವರ್ಗಳಲ್ಲಿ 160ರನ್ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಭಾರತ ತಂಡದ ಪರ ನಾಯಕ ಉನ್ಮುಕ್ತ್ ಚಾಂದ್ 15 ರನ್ಗಳಿಸಿ ಔಟಾದರು. ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಅವರನ್ನು ಜೊತೆಗೂಡಿದ ಮನ್ಪ್ರೀತ್ ಜುನೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕ ಆಟಗಾರ ಲೋಕೇಶ್ ರಾಹುಲ್ 93 ರನ್ ಮತ್ತು ಮನ್ಪ್ರೀತ್ ಜುನೇಜಾ 51 ರನ್ಗಳಿಸಿ ಅಜೇಯರಾಗಿ ಉಳಿಸಿದರು. ಇದಕ್ಕೂ ಮೊದಲು ಪಾಕ್ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಬಾಬಾ ಅಪರಜೀತ್ 28 ರನ್ಗಳಿಗೆ 3 ವಿಕೆಟ್, ಸಂದೀಪ್ ಶರ್ಮಾ 20 ರನ್ಗೆ 2 ವಿಕೆಟ್ ಗಳಿಸುವ ಮೂಲಕ ಪಾಕಿಸ್ತಾನಕ್ಕೆ ಭಾರಿ ಪೆಟ್ಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


