ಸನಾವುಲ್ಲಾನನ್ನು ಭೇಟಿ ಮಾಡಿದ ಪಾಕ್ ರಾಯಭಾರಿಗಳು

ನವದೆಹಲಿ: ಜಮ್ಮು ಜೈಲಿನಲ್ಲಿ ಸಹ ಖೈದಿಗಳಿಂದ ಹಲ್ಲೆಗೊಳಾಗಿ ಆಸ್ಪತ್ರೆಗೆ ದಾಖಲಾಗಿರುವ ಪಾಕಿಸ್ತಾನ ಮೂಲದ ಖೈದಿ ಸನಾವುಲ್ಲಾ ರನ್ಜಯ್ ಅವರನ್ನು, ಶನಿವಾರ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಸನಾವುಲ್ಲಾ ಅವರನ್ನು ದಾಖಲಿಸಿರುವ ಚಂಡೀಗಡ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆಗೆ ಭೇಟಿ ನೀಡಿದ ಪಾಕಿಸ್ತಾನದ ಮೂವರು ಅಧಿಕಾರಿಗಳು, ವೈದ್ಯರೊಂದಿಗೆ ಚರ್ಚಿಸಿ ಸನಾವುಲ್ಲಾ ಅವರ ಆರೋಗ್ಯದ ಸ್ಥಿತಿಗತಿ ವರದಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಲ್ಲಿ ಸನಾವುಲ್ಲಾ ಎಂಬ ಖೈದಿಯ ಮೇಲೆ ಸಹ ಖೈದಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದರು. ತಕ್ಷಣವೇ ಆತನನ್ನು ಸಮೀಪದ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಿಲಾಯಿತಾದರೂ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ವಿಶೇಷ ವಿಮಾನದ ಮೂಲಕ ಚಂಡೀಗಡದ ವೈದ್ಯಕೀಯ ಶಿಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಪಾಕಿಸ್ತಾನದ ಸಿಯಾಲ್ಕೋಟ್ ನಿವಾಸಿಯಾಗಿರುವ ಸನಾವುಲ್ಲಾನನ್ನು 1999ರಲ್ಲಿ ಟಾಡಾ ಪ್ರಕರಣದಡಿ ಬಂಧಿಸಲಾಗಿತ್ತು. ಉಗ್ರರ ನಂಟು ಮತ್ತು ಸಮಾಜ ದ್ರೋಹ ಚಟುವಟಿಕೆಗಳಲ್ಲಿ ಆತ ತೊಡಗಿರುವುದು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಪಾಕಿಸ್ತಾನದ ಕೋಟ್ ಲಕಪತ್ ಜೈಲಿನಲ್ಲಿ ಸಹ ಖೈದಿಗಳಿಂದ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ಖೈದಿ ಸರಬ್ಜಿತ್ ಸಿಂಗ್ ಮೃತರಾದ ಒಂದು ದಿನ ಬಳಿಕ ಅಂತಹುದೇ ಘಟನೆ ಭಾರತದಲ್ಲಿ ನಡೆದಿದೆ. ಇದನ್ನು ಸರಬ್ಜಿತ್ ಸಿಂಗ್ ಸಾವಿಗೆ ಸೇಡಿನ ಪ್ರತೀಕವಾಗಿ ಭಾರತೀಯ ಖೈದಿಗಳು ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


