ನ್ಯಾಟೋ ದಾಳಿ: ಆಫ್ಘಾನಿಸ್ತಾನದಲ್ಲಿ 42 ಉಗ್ರರ ಹತ್ಯೆ

ಕಾಬುಲ್: ತಾಲಿಬಾನಿ ಉಗ್ರರ ವಿರುದ್ಧ ನ್ಯಾಟೋ ಪಡೆಗಳು ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಸುಮಾರು 42 ತಾಲಿಬಾನಿ ಉಗ್ರರು ಹತರಾಗಿದ್ದಾರೆ.
ತಾಲಿಬಾನಿ ಉಗ್ರರ ವಿರುದ್ಧ ಭಾನುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಕೈಗೊಂಡಿರುವ ನ್ಯಾಟೋ ಪಡೆಗಳು ಇಲ್ಲಿಯವರೆಗೂ ಸುಮಾರು 42 ಉಗ್ರರನ್ನು ಕೊಂದುಹಾಕಿವೆ. ಅಲ್ಲದೆ ನ್ಯಾಟೋ ಪಡೆಗಳ ಈ ಕಾರ್ಯಾಚರಣೆಗೆ ಆಫ್ಘಾನಿಸ್ತಾನ ಸರ್ಕಾರ ಬೆಂಬಲ ಸೂಚಿಸಿದ್ದು, ತನ್ನ ಪೊಲೀಸ್ ಮತ್ತು ಸೈನಿಕ ಪಡೆಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುತ್ತದೆ ಎಂದು ನ್ಯಾಟೋ ಅಧಿಕಾರಿಗಳು ಹೇಳಿದ್ದಾರೆ.
ಕಾರ್ಯಾಚರಣೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿರುವ ಆಫ್ಘಾನಿಸ್ತಾನ ಗೃಹ ಸಚಿವಾಲಯ, ತಾಲಿಬಾನ್ ಉಗ್ರರ ವಿರುದ್ಧ ನ್ಯಾಟೋ ಮತ್ತು ಆಫ್ಘಾನಿಸ್ತಾನ ಸರ್ಕಾರ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ವರೆಗೂ ಸುಮಾರು 42 ಉಗ್ರರು ಹತರಾಗಿದ್ದು, 8 ಮಂದಿ ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ 11 ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಗಾಯಾಳು ಉಗ್ರರನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದೆ.
ಅಲ್ಲದೆ ದಾಳಿ ವೇಳೆ ಉಗ್ರರಿಗೆ ಸೇರಿದ್ದು ಎನ್ನಲಾಗುತ್ತಿರುವ ತೈಲ ಟ್ಯಾಂಕರ್ ಮತ್ತು ಹಲವು ಸರಕು ಸಾಗಣೆ ಟ್ರಕ್ಗಳನ್ನು ಉಡಾಯಿಸಲಾಗಿದೆ ಎಂದು ತಿಳಿದು ಬಂದಿದೆ. ತಾಲಿಬಾನಿ ಉಗ್ರರ ವಿರುದ್ಧ ನ್ಯಾಟೋ ಪಡೆಗಳು ಹಿಂದಿನಿದಂಲೂ ಕಾರ್ಯಾಚರಣೆ ನಡೆಸುತ್ತಿದಾರು, ಪ್ರಸಕ್ತ ಕಾರ್ಯಾಚರಣೆ ಬೃಹತ್ ಪ್ರಮಾಣದ್ದು ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


