ಈಗಿನ ಸುದ್ದಿ

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ 'ವಂಜಾರಾ ಪತ್ರ ಪ್ರಕರಣ'

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ 'ವಂಜಾರಾ ಪತ್ರ ಪ್ರಕರಣ'
Published On :

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿ ಡಿಜಿ ವಂಜಾರಾ ಬರೆದಿದ್ದ ಪತ್ರ ಪ್ರಕರಣ ಗುರುವಾರ ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

ಇಂದು ಸಭೆ ಆರಂಭವಾಗುತ್ತಿದ್ದಂತೆಯೇ ರಾಜ್ಯಸಭೆಯಲ್ಲಿ ಮಾಜಿ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರಿಗೆ ಗೌರವ ಸೂಚಿಸಲಾಯಿತು. ನಂತರ ಜೆಡಿ-ಯು ಅಧ್ಯಕ್ಷ ಶರದ್ ಯಾದವ್ ಅವರು ರಾಜ್ಯಸಭೆಯಲ್ಲಿ ವಂಜಾರಾ ಪತ್ರ ಪ್ರಕರಣವನ್ನು ಪ್ರಸ್ಥಾಪಿಸಿದಾಗ ಬಿಜೆಪಿ ಸದಸ್ಯ ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಜೆಡಿಯು ಸದಸ್ಯರು ಬಿಜೆಪಿ ಸದಸ್ಯರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಯು ಸದಸ್ಯರೊಂದಿಗೆ ಸಮಾಜವಾದಿ ಪಕ್ಷದ ಸದಸ್ಯರು ಕೈಜೋಡಿಸುವುದರೊಂದಿಗೆ ಗದ್ದಲ ತಾರಕಕ್ಕೇರಿ, ಸದಸ್ಯರು ತಮ್ಮ ಸ್ಥಾನಗಳಿಂದಲೇ ನಿಂತು ಪರಸ್ಪರ ಘೋಷಣೆಗಳನ್ನು ಕೂಗುತ್ತಿದ್ದರು.

ರಾಜ್ಯಸಭಾ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಅವರು ಸದಸ್ಯರನ್ನು ಸಂತೈಸಲು ಪ್ರಯತ್ನಿಸಿದರಾದರೂ ಎಸ್‌ಪಿ ಮತ್ತು ಜೆಡಿಯು ಸದಸ್ಯರು ವಂಜಾರಾ ವಂಜಾರಾ ಎಂದು ಕೂಗುತ್ತಲಿದ್ದರು. ಕೊನೆಗೆ ಕುರಿಯನ್ ಅವರು ಕಲಾಪವನ್ನು 15 ನಿಮಿಷಗಳಿಗೆ ಮುಂದೂಡಿದರು.

ಗುಜರಾತ್ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಡಿ.ಜಿ.ವಂಜಾರಾ ಅವರು ಪ್ರಸ್ತುತ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ವಂಜಾರಾ ಅವರು ಮೊನ್ನೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರವೆ ಇದೀಗ ಮೋದಿ ನೇತೃತ್ವತದ ಗುಜರಾತ್ ಸರ್ಕಾರಕ್ಕೆ ಮತ್ತು ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸ ಬೇಕೆಂದಿದ್ದ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.