ಈಗಿನ ಸುದ್ದಿ

ಉ.ಪ್ರದೇಶ ಗಲಭೆ: ಕಂಡಲ್ಲಿ ಗುಂಡು ಆದೇಶ, 26 ಬಲಿ

ಉ.ಪ್ರದೇಶ ಗಲಭೆ: ಕಂಡಲ್ಲಿ ಗುಂಡು ಆದೇಶ, 26 ಬಲಿ
Published On :

ಲಖನೌ: ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೇರಿದ್ದು, ಕಂಡಲ್ಲಿ ಗುಂಡಿಗೆ ಆದೇಶಿಸಲಾಗಿದೆ.

 2 ಸಮುದಾಯಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಜಿಲ್ಲೆಯ 3 ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿದಿದ್ದು, ಸೋಮವಾರ ಮತ್ತೆ ಐದು ಮೃತ ದೇಹಗಳು ಪತ್ತೆಯಾಗಿವೆ. ಘರ್ಷಣೆಯಲ್ಲಿ ಈವರೆಗೂ ಸುಮಾರು 45ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮುಫರ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಸುಮಾರು 200ಕ್ಕೂ ಆಧಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಸೇನಾ ತುಕಡಿ ಆಗಮಿಸಿದ್ದು, ಪಥಸಂಚಲನ ನಡೆಸಿದೆ. ಇದೇ ವೇಳೆ, ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಹುಕುಮ್ ಸಿಂಗ್ ಸೇರಿದಂತೆ ಶಾಸಕರಾದ ಸುರೇಶ್ ರಾಣಾ, ಸಂಗೀತ್ ಸೋಮ್, ಮಾಜಿ ಕಾಂಗ್ರೆಸ್ ಸಂಸದ ಹರೆಂದ್ರ ಮಲ್ಲಿಕ್ ಅವರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ.

ಹಿಂಸಾಚಾರ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿರುವ ಉತ್ತರಪ್ರದೇಶ ಸರ್ಕಾರ ಸೇನೆಯನ್ನು ಕಣಕ್ಕಿಳಿಸಿದ್ದು, 1300 ಸಿಆರ್ ಪಿಎಫ್ ಯೋಧರು, 1200 ಆರ್ ಎಎಫ್ ಯೋಧರು ಸೇರಿದಂತೆ 12000ಕ್ಕೂ ಅಧಿಕ ಸೇನಾ ಸಿಬ್ಬಂದಿಗಳು ಹಿಂಸಾಚಾರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಭದ್ರತಾ ದೃಷ್ಟಿಯಿಂದ ಸೇನಾ ಪಡೆಯ ಯೋಧರು ನಗರಾದ್ಯಂತ ಗಸ್ತು ತಿರುಗುತ್ತಿದ್ದಾರೆ.

ಕಳೆದ ಆಗಸ್ಟ್ 27ರಂದು ಯುವತಿಯೊಬ್ಬಳನ್ನು ಯುವಕರ ಗುಂಪೊಂದು ರೇಗಿಸಿದ ಪರಿಣಾಮ ಉಂಟಾದ ಘರ್ಷಣೆ ಇದೀಗ ಕೋಮು ಹಿಂಸಾಚಾರಕ್ಕೆ ತಿರುಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.