'ಭಟ್ಕಳ್' ಎನ್ಐಎ ಕಸ್ಟಡಿ 4 ದಿನ ವಿಸ್ತರಣೆ
ನವದೆಹಲಿ: ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಷಾನನ್ನು ದೆಹಲಿ ಕೋರ್ಟ್ ಮಂಗಳವಾರ ಮತ್ತೆ 4 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ವಶಕ್ಕೆ ಒಪ್ಪಿಸಿದೆ.
ದೇಶಾದ್ಯಂತ ನಡೆದ ಸ್ಫೋಟಗಳಲ್ಲಿ ಯಾಸಿನ್ ಭಟ್ಕಳ್ನ ಕೈವಾಡವಿರುವುದಾಗಿ ಶಂಕೆ ವ್ಯಕ್ತಪಡಿಸಿರುವ ಎನ್ಐಎ, ಹೈದರಾಬಾದ್ನ ದಿಲ್ಖುಶ್ನಗರದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ವಿಚಾರಣೆಗಾಗಿ ಯಾಸಿನ್ ಭಟ್ಕಳ್ನನ್ನು ಹೈದರಾಬಾದ್ಗೆ ಕರೆದೊಯ್ಯಬೇಕು ಎಂದು ಕೋರ್ಟ್ಗೆ ತಿಳಿಸಿತ್ತು. ಎನ್ಐಎ ಮನವಿಯನ್ನು ಪುರಸ್ಕಿರಿಸಿದ ಕೋರ್ಟ್ ಯಾಸಿನ್ ಭಟ್ಕಳ್ನ ಪೊಲೀಸ್ ಕಸ್ಟಡಿ ದಿನಗಳನ್ನು 4 ದಿನಕ್ಕೆ ವಿಸ್ತರಿಸಿದೆ.
ಹೈದರಾಬಾದ್ನ ದಿಲ್ಖುಷ್ನಗರದಲ್ಲಿ ಫೆ 22ರಂದು 2 ಪ್ರಬಲ ಸ್ಫೋಟಗಳು ಸಂಭವಿಸಿದ್ದು, ಈ ದಾಳಿಯಲ್ಲಿ ಸುಮಾರು 16 ಮಂದಿ ಮೃತಪಟ್ಟಿದ್ದರು. ಈ ದಾಳಿಯಲ್ಲಿ ತನ್ನ ಕೈವಾಡವಿರುದಾಗಿ ಎನ್ಐಎ ವಿಚಾರಣೆ ವೇಳೆ ಯಾಸಿನ್ ಬಾಯಿಬಿಟ್ಟಿದ್ದು, ಈ ಸಂಬಂಧ ಪರಿಶೀಲನೆ ನಡೆಸಲು ಯಾಸಿನ್ನನ್ನು ಹೈದರಾಬಾದ್ಗೆ ಕರೆದೊಯ್ಯಲಿದ್ದಾರೆ.
ಭಾರತದ ಹಲವು ಭಾಗಗಳಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳನ್ನು ಎಸಗಿರುವ ಯಾಸಿನ್ ಭಟ್ಕಳ್ ಭಾರತಕ್ಕೆ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ. ದೆಹಲಿ, ಹೈದರಾಬಾದ್, ಪುಣೆ ಮತ್ತು ಬೆಂಗಳೂರಿನಲ್ಲಿ ನಡೆದ ಬಾಂಬ್ ದಾಳಿಗಳನ್ನು ನಡೆಸಿರುವ ಗುರುತರ ಆರೋಪ ಭಟ್ಕಳ್ ಮೇಲಿದೆ. ಈ ಆರೋಪಗಳಿಂದ 5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಯಾಸಿನ್ನನ್ನು ಬಿಹಾರ-ನೇಪಾಳ ಗಡಿಯಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

