ಈಗಿನ ಸುದ್ದಿ

ಕರ್ನಾಟಕ ರಣಜಿ ಚಾಂಪಿಯನ್

ಕರ್ನಾಟಕ ರಣಜಿ ಚಾಂಪಿಯನ್
Published On :

ಹೈದರಾಬಾದ್: ರಣಜಿ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಣಜಿ ಟ್ರೋಫಿಗೆ ಮುತ್ತಿಕ್ಕಿದೆ.

ಸತತ 15 ವರ್ಷಗಳ ಕನ್ನಡಿಗರ ಕನಸು ನನಸಾಗಿದ್ದು, ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡ ಪ್ರಸಕ್ತ ಸಾಲಿನ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಅಮೋಘ ಪ್ರದರ್ಶನ ತೋರಿದ ವಿನಯ್ ಕುಮಾರ್ ಬಳಗ ಅರ್ಹವಾಗಿಯೇ ರಣಜಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇಂದು 2ನೇ ಇನ್ನಿಂಗ್ಸ್ ಮುಂದುವರೆಸಿದ ಮಹಾರಾಷ್ಟ್ರ ತಂಡ 366 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಕರ್ನಾಟಕಕ್ಕೆ ಗೆಲ್ಲಲು 157ರನ್ ಗಳ ಸಾಧಾರಣ ಮೊತ್ತವನ್ನು ಗುರಿ ನೀಡಿತು.

157ರನ್ ಗಳ ಗುರಿಪಡೆದ ಕರ್ನಾಟಕ ತಂಡ ಚಹಾ ವಿರಾಮಕ್ಕೂ ಮೊದಲೇ 3 ವಿಕೆಟ್ ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು. ಆ ಮೂಲಕ ಸತತ 17 ವರ್ಷಗಳ ಕನ್ನಡಿಗರ ಆಸೆಯನ್ನು ನನಸು ಮಾಡಿತು. ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕರ್ನಾಟಕದ ರಾಹುಲ್ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಟ ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕ ತಂಡಕ್ಕೆ ಬಿಸಿಸಿಐನಿಂದ 2 ಕೋಟಿ ರು ಬಹುಮಾನ
ಇದೇ ವೇಳೆ ರಣಜಿ ಚಾಂಪಿಯನ್ ತಂಡಕ್ಕೆ ನೀಡುವ 2 ಕೋಟಿ ರು. ಬಹುಮಾನದ ಮೊತ್ತ ಕೂಡ ಕರ್ನಾಟಕ ತಂಡಕ್ಕೆ ದೊರೆಯಲಿದೆ. ರನ್ನರ್ ಅಪ್ ತಂಡ ಮಹಾರಾಷ್ಟ್ರಕ್ಕೆ 1 ಕೋಟಿ. ಬಹುಮಾನ ಮೊತ್ತ ದೊರೆಯಲಿದೆ. ಸೆಮಿ ಫೈನಲ್ಸ್ ತಂಡಗಳಿಗೆ ತಲಾ 50 ಲಕ್ಷ ರು. ದೊರೆಯಲಿದೆ.

ವಿನಯ್ ಬಳಗಕ್ಕೆ ಅಭಿನಂದನೆಗಳ ಮಹಾಪೂರ
ಸತತ 15 ವರ್ಷಗಳ ಬಳಿಕ ರಣಜಿ ಟ್ರೋಫಿಯನ್ನು ಎತ್ತಿಹಿಡಿದಿರುವ ಕರ್ನಾಟಕ ತಂಡಕ್ಕೆ ಅಭಿನಂದನೆ ಮಹಾಪೂರವೇ ಹರಿದು ಬರುತ್ತಿದ್ದು, ಹೈದರಾಬಾದ್ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿದ್ದಾರೆ. ಅಂತೆಯೇ ಇತ್ತ ಕರ್ನಾಟಕದ ಮಾಜಿ ಕ್ರಿಕೆಟಿಗರು ಕೂಡ ವಿನಯ್ ಬಳಗಕ್ಕೆ ಶುಭಾಶಯ ಕೋರಿದ್ದಾರೆ.

ಸಂಕ್ಷಿಪ್ತ ಸ್ಕೋರ್ ವಿವರ
ಮೊದಲ ಇನ್ನಿಂಗ್ಸ್
ಮಹಾರಾಷ್ಟ್ರ-305/10

ಖುರಾನಾ-64 ರನ್, 145 ಎಸೆತ
ಜಾಧವ್-37 ರನ್, 44 ಎಸೆತ
ಭಾವ್ನೆ-89 ರನ್, 173 ಎಸೆತ
ಅತೀತ್ ಕರ್-50 ರನ್, 97 ಎಸೆತ

ಬೌಲಿಂಗ್
ಆರ್.ವಿನಯ್ ಕುಮಾರ್-30.1 ಓವರ್, 3 ವಿಕೆಟ್
ಎ.ಮಿಥುನ್-23 ಓವರ್, 3 ವಿಕೆಟ್
ಎಸ್.ಅರವಿಂದ್-26 ಓವರ್, 3 ವಿಕೆಟ್
ಕೆ.ನಾಯರ್-5 ಓವರ್, 1 ವಿಕೆಟ್

ಕರ್ನಾಟಕ-515/10
ರಾಬಿನ್ ಉತ್ತಪ್ಪ-72 ರನ್, 108 ಎಸೆತ
ರಾಹುಲ್-131 ರನ್, 273 ಎಸೆತ
ಗಣೇಶ್-117 ರನ್,212 ಎಸೆತ

ಬೌಲಿಂಗ್
ಎಸ್.ಫಲ್ಹಾ-37 ಓವರ್, 3 ವಿಕೆಟ್
ಸಂಕ್ಲೇಚ-30 ಓವರ್, 1 ವಿಕೆಟ್
ಎಸ್ ಮುಂಡೆ-31.1 ಓವರ್, 3 ವಿಕೆಟ್
ಸಿ.ಖುರಾನಾ-39.1 ಓವರ್, 2 ವಿಕೆಟ್

ಎರಡನೇ ಇನ್ನಿಂಗ್ಸ್
ಮಹಾರಾಷ್ಟ್ರ-366/10

ಭಾವ್ನೆ-61 ರನ್, 115 ಎಸೆತ
ಜಾಧವ್-112 ರನ್, 135 ಎಸೆತ
ಖುರಾನಾ-37 ರನ್, 70 ಎಸೆತ
ಮುಂಡೆ-42 ರನ್, 75 ಎಸೆತ

ಬೌಲಿಂಗ್

ಆರ್.ವಿನಯ್ ಕುಮಾರ್-29 ಓವರ್, 4 ವಿಕೆಟ್
ಎ.ಮಿಥುನ್-22 ಓವರ್, 2 ವಿಕೆಟ್
ಎಸ್.ಅರವಿಂದ್-21 ಓವರ್, 0 ವಿಕೆಟ್
ಎಸ್.ಗೋಪಾಲ್-13.2 ಓವರ್, 4 ವಿಕೆಟ್

ಕರ್ನಾಟಕ-157/3
ರಾಬಿನ್ ಉತ್ತಪ್ಪ-36 ರನ್, 47 ಎಸೆತ
ರಾಹುಲ್-29 ರನ್, 66 ಎಸೆತ
ಎ.ವರ್ಮಾ-38 ರನ್, 49 ಎಸೆತ
ಎಂ.ಪಾಂಡೆ-28 ರನ್ (ಅಜೇಯ),43 ಎಸೆತ
ಕೆ.ನಾಯರ್- 20 ರನ್ (ಅಜೇಯ),43 ಎಸೆತ

ಬೌಲಿಂಗ್
ಎಸ್.ಫಲ್ಹಾ-11 ಓವರ್, 0 ವಿಕೆಟ್
ಸಂಕ್ಲೇಚ-3 ಓವರ್, 0 ವಿಕೆಟ್
ಎಸ್ ಮುಂಡೆ-8 ಓವರ್, 1 ವಿಕೆಟ್
ಸಿ.ಖುರಾನಾ-8.5 ಓವರ್, 1 ವಿಕೆಟ್
ಎ.ಧರೇಕರ್-10 ಓವರ್, 1 ವಿಕೆಟ್

ಪಂದ್ಯ ಶ್ರೇಷ್ಟ-ಕೆ.ರಾಹುಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.