ರಣಜಿ ಹೀರೋಗಳಿಗೆ ಅದ್ಧೂರಿ ಸ್ವಾಗತ

ಬೆಂಗಳೂರು: ರಣಜಿ ಟ್ರೋಫಿ ಗೆದ್ದು ಬಂದ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರಿಗೆ ಕೆಎಸ್ಸಿಎ ವತಿಯಿಂದ ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಅವರ ಸಾರಥ್ಯದಲ್ಲಿ ಆಟಗಾರರನ್ನು ಅಭಿನಂಧಿಸಲಾಯಿತು. ಅಲ್ಲದೆ ಪ್ರಶಸ್ತಿ ವಿಜೇತ ತಂಡಕ್ಕೆ ಕೆಎಸ್ಸಿಎ ಒಂದು ಕೋಟಿ ರು. ಬಹುಮಾನವನ್ನು ಘೋಷಿಸಿತು. ವಿನಯ್ ಕುಮಾರ್ ನೇತೃತ್ವದ ರಣಜಿ ತಂಡಕ್ಕೆ, ಕೋಚ್ ಮತ್ತು ತಂಡದ ಫಿಸಿಯೋಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ನಂತರ ಮಾತನಾಡಿದ ತಂಡದ ನಾಯಕ ಆರ್.ವಿನಯ್ ಕುಮಾರ್ ಅವರು, 'ಸರಣಿಗೂ ಮೊದಲೇ ನಾವು ಕಪ್ ಗೆಲ್ಲುವುದಾಗಿ ನಿರ್ಧರಿಸಿದ್ದೆವು. ಆಟಗಾರರೂ ಕೂಡ ತಮ್ಮ ತಮ್ಮ ಜವಾಬ್ದಾರಿ ಅರಿತು ಅದಕ್ಕೆ ತಕ್ಕಂತೆ ಆಡಿದರು. ಬಹಳಷ್ಟು ಅಭ್ಯಾಸ ಕೂಡ ನಡೆಸಿದ್ದವು. ಇದೀಗ ಅದರ ಫಲ ದೊರೆತಿದೆ. ಕೋಚ್ ಮತ್ತು ಫಿಸಿಯೋ ಅವರು ತಮಗೆ ತುಂಬಾ ಬೆಂಬಲ ನೀಡಿದರು. ಕರ್ನಾಟಕ ತಂಡದಲ್ಲಿ ಬಹಳಷ್ಟು ಉತ್ತಮ ಆಟಗಾರರಿದ್ದು, ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ವಿನಯ್ ಕುಮಾರ್ ಹೇಳಿದರು.
ಇದಕ್ಕೂ ಮೊದಲು ಹೈದರಾಬಾದ್ನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ಕರ್ನಾಟಕ ತಂಡಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅದ್ಭುತ ಸ್ವಾಗತ ನೀಡಿದರು. ಎಲ್ಲ ಆಟಗಾರರಿಗೂ ಹೂ ಮಾಲೆಯನ್ನು ಹಾಕಿ, ಘೋಷಣೆಗಳನ್ನು ಕೂಗುತ್ತ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


