ನನ್ನ ಅತ್ಯಾಚಾರಿ ತಂದೆಯನ್ನು ಶಿಕ್ಷಿಸಿ: ಪುಟ್ಟ ಬಾಲಕಿಯ ಅಳಲು

ಸೋನ್ಪಥ್(ಹರ್ಯಾಣ): ನನ್ನ ತಂದೆಯೇ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾನೆ. ಆತನನ್ನು ಶಿಕ್ಷಿಸಿ ಎಂದು ಹರ್ಯಾಣದ ಪುಟ್ಟ ಬಾಲಕಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ನನ್ನ ತಂದೆ ಆತನ ದುಷ್ಟ ಸ್ನೇಹಿತರೊಂದಿಗೆ ಸೇರಿ ನನ್ನನ್ನು ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಸಾಮೂಹಿಕ ಆತ್ಯಾಚಾರ ಮಾಡಿದ್ದಾನೆ. ದಯವಿಟ್ಟು ಆತನನ್ನು ಶಿಕ್ಷಿಸಿ ಎಂದು ಹರ್ಯಾಣದ ಸೋನ್ಪಥ್ ಪ್ರಾಂತ್ಯದ ಪುಟ್ಟ ಬಾಲಕಿಯೊಬ್ಬಳು ಪೊಲೀಸರ ಮುಂದೆ ತನ್ನ ಅಳಲು ತೊಂಡಿಕೊಂಡಿದ್ದಾಳೆ.
ಮೂಲತಃ ಹರ್ಯಾಣದ ಸೋನ್ಪಥ್ ಪ್ರಾಂತ್ಯದ ನಿವಾಸಿಯಾಗಿರುವ ಈ ಬಾಲಕಿಯ ಮೇಲೆ ಕಳೆದ ನಾಲ್ಕು ತಿಂಗಳ ಹಿಂದೆ ಅದೇ ಗ್ರಾಮದ ಪುಂಡ ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿತ್ತು. ನಂತರ ಪ್ರಕರಣ ಪೊಲೀಸ್ ಠಾಣೆಯ ಮೇಟ್ಟಿಲೇರಿ ಆ ಎಲ್ಲಾ ಯುವಕರನ್ನು ಪೊಲೀಸರು ಬಂಧಿಸಿದ್ದರು. ಇದಾದ ಕೆಲವೇ ದಿನಗಳ ಬಳಿಕ ಆದೇ ಬಾಲಕಿ ಮತ್ತೆ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿದ್ದಾಳೆ. ಅದೂ ಕೂಡ ತನ್ನ ಸ್ವಂತ ತಂದೆಯಿಂದಲೇ ಎನ್ನುವುದು ವಿಪರ್ಯಾಸ.
'ನನ್ನ ತಂದೆ ಕಳೆದ ಸೆಪ್ಟೆಂಬರ್ ತಿಂಗಳಿನಿಂದಲೂ ತನ್ನ ಸ್ನೇಹಿತರೊಂದಿಗೆ ಸೇರಿ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ನನಗೆ ಓದಬೇಕು ಎಂಬ ಆಸೆ ಇದೆ. ಆದರೆ ನನ್ನ ತಂದೆ ನನನ್ನು ವೇಶ್ಯಾವಾಟಿಕೆಗೆ ದೂಡಲು ಯತ್ನಿಸುತ್ತಿದ್ದಾನೆ. ದಯವಿಟ್ಟು ತನನ್ನು ರಕ್ಷಿಸಿ, ಆತನನ್ನು ಶಿಕ್ಷಿಸಿ' ಎಂದು ಬಾಲಕಿ ಪೊಲೀಸರಿಗೆ ಪತ್ರ ಬರೆದಿದ್ದಾಳೆ.
ನಾಲ್ಕು ತಿಂಗಳಿಂದ ತನ್ನ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆದುಕೊಂಡಿದ್ದ ಈ ಪುಟ್ಟ ಬಾಲಕಿ ಇಂದು ತನ್ನ ತಂದೆಯ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಪೊಲೀಸರ ಆಶ್ರಯ ಪಡೆದಿದ್ದಾಳೆ. ಪ್ರಸ್ತುತ ಎನ್ಜಿಒ ಸಂಸ್ಥೆಯೊಂದರ ಆಶ್ರಯದಲ್ಲಿರುವ ಬಾಲಕಿಯನ್ನು ಸೂಕ್ತ ಭದ್ರತೆ ಇಡಲಾಗಿದೆ. ಅಲ್ಲದೆ ಬಾಲಕಿಯ ದುರುಳ ತಂದೆಯನ್ನು ಬಂಧಿಸಿರುವ ಪೊಲೀಸರು ಆತನ ಸ್ನೇಹಿತರಿಗಾಗಿ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


