ಈಗಿನ ಸುದ್ದಿ

ಲೋಕಸಮರದತ್ತ ನಂದನ್ ಚಿತ್ತ, 'ಆಧಾರ್‌'ಗೆ ರಾಜಿನಾಮೆ..?

ಲೋಕಸಮರದತ್ತ ನಂದನ್ ಚಿತ್ತ, 'ಆಧಾರ್‌'ಗೆ ರಾಜಿನಾಮೆ..?
Published On :

ನವದೆಹಲಿ: ವಿಶಿಷ್ಟ ಗುರುತಿನ ಪತ್ರ ಪ್ರಾಧಿಕಾರ(ಆಧಾರ್)ದ ಅಧ್ಯಕ್ಷ ಸ್ಥಾನಕ್ಕೆ ಮಾರ್ಚ್ ಅಂತ್ಯದಲ್ಲಿ ರಾಜಿನಾಮೆ ನೀಡುತ್ತೇನೆ ಎಂದು ನಂದನ್ ನಿಲೇಕಣಿ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದ ನಂದನ್ ನಿಲೇಕಣಿ ಅವರು ಯುಐಡಿಐ (ಆಧಾರ್) ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ಸಂಸ್ಥೆ ಸಹ ಸಂಸ್ಥಾಪಕರಾಗಿದ್ದ ನಂದನ್ ನಿಲೇಕಣಿ ಅವರನ್ನು 2009ರಲ್ಲಿ ಕೇಂದ್ರದ ಯುಪಿಎ ಸರ್ಕಾರ 'ಆಧಾರ್‌' ಯೋಜನೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ನಂತರ ಅವರು ತಮ್ಮ ಇನ್ಫೋಸಿಸ್ ಸಂಸ್ಥೆಯನ್ನು ತೊರೆದಿದ್ದರು.

ದೇಶದ ಅತಿದೋಡ್ಡ ಗುರುತಿನ ಚೀಟಿ ಯೋಜನೆಯಾಗಿರುವ 'ಆಧಾರ್‌' ಯೋಜನೆ, ನಂದನ್ ನಿಲೇಕಣಿ ಅವರಿಗೆ ಖ್ಯಾತಿ ಗಳಿಸುವಂತೆ ಮಾಡಿತ್ತು. ಇದೀಗ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ.

ಲೋಕಸಭೆಗಾಗಿ 'ಆಧಾರ್‌' ತೊರೆಯಲಿರುವ ನಿಲೇಕಣಿ
ಅಧಾರ್ ಯೋಜನೆಯ ಯಶಸ್ಸಿನಿಂದಾಗಿ ಬೀಗುತ್ತಿರುವ ಯುಪಿಎ ಸರ್ಕಾರ ಯೋಜನೆ ರೂವಾರಿ ನಂದನ್ ನಿಲೇಕಣಿ ಅವರನ್ನು ರಾಜಕೀಯಕ್ಕೆ ಬರ ಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಸಿಕೊಂಡಿದೆ. ಬಿಜೆಪಿ ಪಕ್ಷದ ಬಲಿಷ್ಠ ಕೋಟೆ ಎಂದೇ ಬಿಂಬಿತವಾಗಿರುವ ಪ್ರತಿಷ್ಟಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಂದನ್ ನಿಲೇಕಣಿ ಅವರಿಗೆ ಟಿಕೆಟ್ ನೀಡಿ, ಚುನಾವಣಾ ಕಣಕ್ಕಿಳಿಸಲಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ನಂದನ್ ನಿಲೇಕಣಿ ಅವರಿಗೆ ಟಿಕೆಟ್ ಖಾತರಿಯಾಗಿದ್ದು, ಇನ್ನು 2-3 ದಿನಗಳಲ್ಲಿ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರ ಮಾಡಿಕೊಳ್ಳುವ ಸಾಧ್ಯತೆ ಇದೆ. ನಂದನ್ ನಿಲೇಕಣಿ ಅವರು ಕೂಡ ಈ ಮೊದಲ ರಾಜಕೀಯಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರು. ಹೀಗಾಗಿಯೇ ಅವರು ಸಾಮಾಜಿಕ ತಾಣಗಳಲ್ಲಿ ತಮ್ಮದೇ ಆತ ಶೈಲಿಯಲ್ಲಿ ಯುವಕರನ್ನು ಉತ್ತೇಜಿಸುವಂತಹ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.