ಕೇಜ್ರಿವಾಲ್ ಗೆ ಕಾನೂನಿನ ಕನಿಷ್ಟ ಜ್ಞಾನವೂ ಇಲ್ಲ: ವೀರಪ್ಪ ಮೊಯ್ಲಿ

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಾನೂನಿನ ಕನಿಷ್ಟ ಜ್ಞಾನವೂ ಇಲ್ಲ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ ಅವರು, ಗ್ಯಾಸ್ ದರ ಏರಿಕೆ ಕುರಿತಂತೆ ನನ್ನ ವಿರುದ್ಧ ಎಫ್ ಐಆರ್ ದಾಖಲಿಸಲು ಸೂಚಿಸಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಕಾನೂನಿನ ಕನಿಷ್ಟ ಜ್ಞಾನವೂ ಇಲ್ಲ. ಗ್ಯಾಸ್ ದರ ಏರಿಕೆ ವಿಚಾರ ಕೇವಲ ನನ್ನಿಂದ ಸಾಧ್ಯವಿಲ್ಲ. ಸಂಪು ಸಭೆಯಲ್ಲಿ ಕುಳಿತು ಚರ್ಚಿಸಬೇಕಿರುತ್ತದೆ. ಸಂಪುಟ ನಿರ್ಧರಿಸಿದಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸುವುದು ಎಂದರೆ ಕೇಂದ್ರ ಸಂಪುಟದ ವಿರುದ್ಧ ಎಫ್ ಐಆರ್ ದಾಖಲಿಸಿದಂತೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಕೇಜ್ರಿವಾಲ್ ಪವರ್ ಸಬ್ಸಿಡಿ ಕುರಿತು ಕಿಡಿ ಕಾರಿದ ಮೊಯ್ಲಿ
ಇದೇ ವೇಳೆ ದೆಹಲಿ ನಾಗರೀಕರ ವಿದ್ಯುತ್ ಬಿಲ್ ದರದಲ್ಲಿ ಶೇ.50 ರಷ್ಟು ರಿಯಾಯಿತಿ ಘೋಷಿಸಿದ ಕೇಜ್ರಿವಾಲ್ ನಿರ್ಧಾರವನ್ನು ಟೀಕಿಸಿದ ವೀರಪ್ಪ ಮೊಯ್ಲಿ ಅವರು, ಕೇಜ್ರಿವಾಲ್ ತಮ್ಮ ಅವೈಜ್ಞಾನಿಕ ಯೋಜನೆಗಳಿಂದಾಗಿ ಪ್ರಜಾಪ್ರಭುತ್ವವನ್ನು ಮತ್ತು ದೇಶದ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ಅವರು ತಾವೊಬ್ಬರೇ ಬುದ್ಧಿವಂತರೆಂದು ತಿಳಿದಂತಿದೆ. ಬೇರೆಲ್ಲರನ್ನು ಅವರು ಮೂರ್ಖರೆಂದು ತಿಳಿದಿದ್ದಾರೆ. ಜನರು ಹೇಗೆ ಇಂತಹವರನ್ನು ಆರಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಸಂಸತ್ ಕಲಾಪದ ಕುರಿತು ಮಾತನಾಡದ ಮೊಯ್ಲಿ, ಕಾಂಗ್ರೆಸ್ ಪಕ್ಷ ಕೆಲ ಮಹತ್ವದ ಮಸೂದೆಗಳ ಅಂಗೀಕಾರ ಪಡೆಯಲು ಸಿದ್ಧವಾಗಿತ್ತು. ಆದರೆ ವಿರೋಧ ಪಕ್ಷ ಬಿಜೆಪಿ ಅಸಹಾಕಾರದಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


