'ಮೋದಿ ಚಾಯ್' v/s 'ರಾಹುಲ್ ಮಿಲ್ಕ್'

ಗೋರಖ್ಪುರ (ಉತ್ತರ ಪ್ರದೇಶ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಚಾಯ್ ಪೇ ಚರ್ಚಾ' ಕಾರ್ಯಕ್ರಮಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕಾರ್ಯಕರ್ತರು 'ರಾಹುಲ್ ಮಿಲ್ಕ್' ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.
ಉತ್ತರ ಪ್ರದೇಶದ ಗೋರಖ್ಪುರದ ಕಾಂಗ್ರೆಸ್ ಕಾರ್ಯಕರ್ತರು 'ರಾಹುಲ್ ಮಿಲ್ಕ್' ಎಂಬ ಬರಹದಡಿಯಲ್ಲಿ 20ಕ್ಕೂ ಹೆಚ್ಚು ಹಾಲಿನ ಬೂತ್ಗಳನ್ನು ತೆರೆದಿದ್ದಾರೆ. ಇದಕ್ಕಾಗಿ ರಾಹುಲ್ ಗಾಂಧಿ ಅವರ ಭಾವಚಿತ್ರವಿರುವ ಪ್ಲಾಸ್ಟಿಕ್ ಲೋಟಗಳನ್ನು ತಯಾರಿಸಿರುವ ಕಾರ್ಯಕರ್ತರು, ಅದೇ ಲೋಟದಲ್ಲಿ ರಾಜ್ಯಾದ್ಯಂತ ಹಾಲು ಹಂಚಿಕೆ ಮಾಡುತ್ತಿದ್ದಾರೆ.
ಪ್ರತಿಯೊಂದು ಹಾಲಿನ ಕೇಂದ್ರದಲ್ಲಿ ಕನಿಷ್ಟ 50 ಲೀಟರ್ ಹಾಲನ್ನು ಹಂಚಲಾಗುತ್ತಿದ್ದು, ಲೋಟದ ಮೇಲೆ 'ವಿಷಕಾರಿ ಚಹಾ ಅಲ್ಲ, ಸಿಹಿಯಾದ ಹಾಲು ಕುಡಿಯುತ್ತೇವೆ. ದೇಶದ ಯುವಕರನ್ನು ಬಲಿಷ್ಟರಾಗಿಸುತ್ತೇವೆ' (Zehreele chai nahi, meetha doodh pilayenge, desh ke naujawano ko pehelwan banayenge') ಎಂಬ ಸಂದೇಶವನ್ನು ಬರೆಯಲಾಗಿದೆ. ಆ ಮೂಲಕ ನರೇಂದ್ರ ಮೋದಿ ಅವರ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಟಾಂಗ್ ನೀಡಿದೆ.
ಒಂದು ವೇಳೆ ಕಾಂಗ್ರೆಸ್ ಪಕ್ಷದ ಈ ಕಾರ್ಯಕ್ರಮ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿದ್ದೇ ಆದರೆ ಇದನ್ನು ದೇಶಾದ್ಯಂತ ವಿಸ್ತರಿಸಲು ಕಾಂಗ್ರೆಸ್ ಹವಣಿಸುತ್ತಿದೆ. ಆದರೆ 'ರಾಹುಲ್ ಮಿಲ್ಕ್' ಕಾರ್ಯಕ್ರಮಕ್ಕೆ ಆರಂಭದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 'ಮೋದಿ ಚಾಯ್' ಕಾರ್ಯಕ್ರಮಕ್ಕೆ ಹೋಲಿಕೆ ಮಾಡಿದರೆ ಇದು ಸಪ್ಪೆಯಾಗಿದೆ. ಏಕೆಂದರೆ 'ಚಾಯ್ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಸ್ವತಃ ನರೇಂದ್ರ ಮೋದಿ ಅವರು ಚಹಾ ಮಾರಾಟಗಾರರೊಂದಿಗೆ ನೇರವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಳೆದ ವಾರ ಅಹ್ಮದಾಬಾದಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 1 ಸಾವಿರ ಟೀ ಮಾರಾಟಗಾರರು ಪಾಲ್ಗೊಂಡಿದ್ದರು. ಚರ್ಚೆಯಲ್ಲಿ ಚಹಾ ಮಾರಾಟಗಾರರ ಸಮಸ್ಯೆಗಳಿಗೆ ಮೋದಿ ಸ್ಪಂಧಿಸಿದ್ದರು. ಹೀಗಾಗಿ ಇದು ದೇಶಾದ್ಯಂತ ಚಹಾ ಮಾರಾಟಗಾರರ ಪ್ರಶಂಸೆ ಗಳಿಸಿದೆ.
ಆದರೆ ರಾಹುಲ್ ಮಿಲ್ಕ್ ಕಾರ್ಯಕ್ರಮದಲ್ಲಿ ಇಂತಹ ಯಾವುದೇ ಅಂಶಗಳಿಲ್ಲ. ಹೀಗಾಗಿ 'ರಾಹುಲ್ ಮಿಲ್ಕ್' ವಿಫಲ ಕಾರ್ಯಕ್ರಮ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


