ಈಗಿನ ಸುದ್ದಿ

ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತಿದೆ: ಮೋದಿ

ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತಿದೆ: ಮೋದಿ
Published On :

ಲೂಧಿಯಾನ: ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನದ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಂಗ್ರೆಸ್ ಮರೆತಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಪಂಜಾಬ್ ರಾಜ್ಯದ ಲೂಧಿಯಾನದಲ್ಲಿ ನಡೆದ ಪ್ರಚಾರ ಕಾರ್ಯಕ್ರಮ ಫತೇಹ್ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಪಂಜಾಬ್ ವೀರರ ನಾಡು. ದೇಶಕ್ಕೆ ಸಿಖ್ಖರ ಕೊಡುಗೆ ಅಪಾರ. ಗುಜರಾತ್ ಮತ್ತು ಪಂಜಾಬ್ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯವಿದೆ. ಎರಡೂ ರಾಜ್ಯಗಳು ಉತ್ತಮ ಐತಿಹಾಸಿಕ ಹಿನ್ನಲೆ ಹೊಂದಿವೆ. ದೇಶಕ್ಕಾಗಿ ಸಿಖ್ಖರ ತ್ಯಾಗ ಮತ್ತು ಬಲಿದಾನ ಅಪಾರ. ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಸಿಖ್ಖ ಬಾಂಧವರಿದ್ದಾರೆ.

ಗುಜರಾತ್ ನಲ್ಲಿಯೂ ಸಹ ಅಪಾರ ಸಿಖ್ಖರಿದ್ದು, ನಾನು ಯಾವುದೇ ಕಾರಣಕ್ಕೂ ಅವರು ಗುಜರಾತ್ ತೊರೆಯಲು ಬಿಡುವುದಿಲ್ಲ. ಪಂಜಾಬ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಪಂಜಾಬ್‌ನಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ದೇಶದ ಅಭಿವೃದ್ದಿ 3 ಕ್ಷೇತ್ರಗಳ ಮೇಲೆ ನಿಂತಿದ್ದು, ಕೃಷಿ, ಉತ್ಪಾದನೆ ಮತ್ತು ಸೇವಾವಲಯಗಳು ಉತ್ತಮವಾಗಿ ಕಾರ್ಯ ನಿರ್ವಹಿಸದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಮೌಲ್ಯವರ್ಧನೆ ಮಾಡದಿದ್ದರೆ ದೇಶದ ಅನ್ನದಾತನಿಗೆ ನಷ್ಟವುಂಟಾಗುತ್ತದೆ.

ಕೃಷಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ದಿಯಾಗಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಕೃಷಿ ಮತ್ತು ಪ್ರವಾಸೋಧ್ಯಮಕ್ಕೆ ಪ್ರೋತ್ಸಾಹ ನೀಡುತ್ತೇವೆ. ನಾನೊಬ್ಬ ದೇಶದ ಕಾವಲು ಗಾರ. ನೀವು ಪ್ರಧಾನಿಯಾಗಲು ಅವಕಾಶ ನೀಡದಿರೆ ದೇಶವನ್ನು ಕಾಯುತ್ತೇನೆ. ಕಾಂಗ್ರೆಸ್ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿದ್ದು, ದೇಶದ ಅಭಿವೃದ್ದಿಯನ್ನು ಕಡೆಗಣಿಸಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರ ಎ-ಆದರ್ಶ,ಬಿ-ಬೋಫೋರ್ಸ್, ಸಿ-ಕೋಲ್ ಸ್ಕ್ಯಾಮ್ ಎಂದೇ ಪ್ರಖ್ಯಾತಿ ಗಳಿಸಿದೆ ಎಂದು ಮೋದಿ ಹೇಳಿದರು.

ಒಟ್ಟಾರೆ ಪಂಜಾಬಿನಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.