ತಾಲಿಬಾನ್ ಮುಖಂಡ ಅಸ್ಮತುಲ್ಲಾಹ್ ಶಾಹೀನ್ ಹತ್ಯೆ

ಮಿರಾನ್ಷಾ (ಪಾಕಿಸ್ತಾನ): ತಾಲಿಬಾನ್ ಉಗ್ರ ಸಂಘಟನೆಯ ಮುಖ್ಯಸ್ಥ ಅಸ್ಮತುಲ್ಲಾಹ್ ಶಾಹೀನ್ನನ್ನು ಗುರುತು ತಿಳಿಯದ ಶಸ್ತ್ರಧಾರಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.
ಕಾರಿನಲ್ಲಿ ಬಂದ ಶಸ್ತ್ರಜ್ಜಿತ ಬಂಧೂಕುದಾರಿಗಳು ಅಸ್ಮತುಲ್ಲಾಹ್ ಶಾಹೀನ್ ಮತ್ತು ಆತನ ಕಮಾಂಡರ್ಗಳ ಮೇಲೆ ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಅಸ್ಮತುಲ್ಲಾಹ್ ಶಾಹೀನ್ ಸೇರಿದಂತೆ ಆತನ ಇಬ್ಬರು ಭಂಟರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ನವೆಂಬರ್ನಲ್ಲಿ ವಜೀರಿಸ್ಥಾನದಲ್ಲಿ ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ದಾಳಿಯಲ್ಲಿ ಹತನಾದ ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್ ಸ್ಥಾನಕ್ಕೆ ಇದೇ ಅಸ್ಮತುಲ್ಲಾಹ್ ಶಾಹೀನ್ ನನ್ನು ನೇಮಕ ಮಾಡಲಾಗಿತ್ತು. ಶಾಹೀನ್ ಹತ್ಯೆಗೆ ನಿಗದಿತ ಕಾರಣ ತಿಳಿದುಬಂದಿಲ್ಲವಾದರೂ, ಹಕೀಮುಲ್ಲಾ ಮೆಹ್ಸೂದ್ ಹತ್ಯೆಯ ನಂತರ ಸಂಘಟನೆಯ ಮೇಲುಸ್ತುವಾರಿಗಾಗಿ ಕೆಲ ಮುಖಂಡರು ಪೈಪೋಟಿ ನಡೆಸಿದ್ದ ಅಂಶ ಬೆಳಕಿಗೆ ಬಂದಿತ್ತು. ಇದೇ ಕಾರಣಕ್ಕಾಗಿ ಅಸ್ಮತುಲ್ಲಾಹ್ ಶಾಹೀನ್ನ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗುತ್ತಿದೆ.
ಅಲ್ಲದೆ ಪಾಕಿಸ್ತಾನ ಪ್ರಧಾನಿಯಾಗಿ ನವಾಜ್ ಷರೀಫ್ ಅವರು ಆರಿಸಿ ಬಂದಾಗಿನಿಂದಲೂ ಪಾಕ್ ಸರ್ಕಾರ ಮತ್ತು ತಾಲಿಬಾನ್ ಸಂಘಟನೆಯ ನಡುವೆ ಶೀತಲ ಸಮರವೇರ್ಪಟ್ಟಿತ್ತು. ಪಾಕಿಸ್ತಾನದಲ್ಲಿ ಷರಿಯತ್ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದ ತಾಲಿಬಾನ್ ಸಂಘಟನೆ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿತ್ತು. ವೃತ್ತಿಪರ ಕ್ರಿಕೆಟ್ ನಿಂದ ಭಾರತದ ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿಯಾದಗಲೂ ಕೂಡ ಇದೇ ಶಾಹೀನ್ ಪಾಕ್ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದನು.
'ಶತ್ರು ರಾಷ್ಟ್ರ ಭಾರತದ ಸಚಿನ್ ಅವರನ್ನು ಹೊಗಳುವುದಕ್ಕಿಂತ ಪಾಕಿಸ್ತಾನ ಮಿಸ್ಬಾ ಉಲ್ ಹಕ್ ರಂತಹ ಆಟಗಾರರನ್ನು ಹೊಗಳಿ ಎಂದು ಹೇಳಿದ್ದನು'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


