ಈಗಿನ ಸುದ್ದಿ

ಎಎಪಿ ಸಚಿವರ ವಿರುದ್ಧ ಉಪರಾಜ್ಯಪಾಲರಿಗೆ ದೂರು

Published On :

ನವದೆಹಲಿ: ಆಮ್ ಆದ್ಮಿ ಪಕ್ಷದ ಸಚಿವರ ವಿರುದ್ಧ ಉಪರಾಜ್ಯಪಾಲರಿಗೆ ದೆಹಲಿ ಪೊಲೀಸರು ದೂರು ನೀಡಿದ್ದಾರೆ.

ಎಎಪಿ ಸಚಿವರು ಪೊಲೀಸರ ತನಿಖೆ ಅಡ್ಡಿ ಪಡಿಸುತ್ತಿದ್ದು, ಮಧ್ಯ ಪ್ರವೇಶಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಉಪರಾಜ್ಯಪಾಲರಾದ ನಜೀಬ್ ಜಂಗ್ ದೂರು ನೀಡಿದ್ದಾರೆ.

ಎಎಪಿ ಸಚಿವರಾದ ರಾಕಿ ಬಿರ್ಲಾ ಮತ್ತು ಸೋಮನಾಥ್ ಭಾರತಿ ಅವರು ಪೊಲೀಸರ ತನಿಖೆಯಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೆಹಲಿಯ ದಕ್ಷಿಣ ವಲಯದಲ್ಲಿರುವ ಒಂದು ಮನೆಯಲ್ಲಿ ವಿದೇಶಿಗಳು ಮಾದಕ ವಸ್ತುಗಳ ಮಾರಾಟ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಸೋಮನಾಥ್ ಭಾರತಿ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸರು ಯಾವುದೇ ವಾರೆಂಟ್ ಇಲ್ಲದೇ ಮನೆಯನ್ನು ಪರೀಶೀಲಿಸುವಂತಿಲ್ಲ ಎಂದು ಹೇಳಿ ಹಿಂದುರಿಗಿದ್ದಾರೆ. ಇದಕ್ಕೆ ಭಾರತಿ ಅಸಮಧಾನ ವ್ಯಕ್ತಪಡಿಸಿದ್ದರು.

ಬಿರ್ಲಾ ಅವರು ಬುಧವಾರ ರಾತ್ರಿ 24 ವರ್ಷದ ಮಹಿಳೆಯನ್ನು ಭೇಟಿ ಮಾಡಲು ತೆರಳಿದ್ದರು. ಸಫದಾರ್‌ಜಂಗ್ ಆಸ್ಪತ್ರೆಯಿಂದ ಕರೆ ಮಾಡಿದ ಆ ಮಹಿಳೆ ಅತ್ತೆ ಮಾವ ತನ್ನನ್ನು ಬೆಂಕಿ ಹಚ್ಚಿದ್ದಾರೆ ಎಂದು ದೂರು ನೀಡಲು ಬರುತ್ತೇನೆ ಎಂದು ಪೊಲೀಸ್ ಅಧಿಕಾರಿಗೆ ತಿಳಿಸಿದ್ದಳು. ಆದರೆ ಆ ಮಹಿಳೆ ಬರುವ ಮುನ್ನ ಪೊಲೀಸ್ ಅಧಿಕಾರಿ ಮನೆಗೆ ತೆರಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಬಿರ್ಲಾ ಮತ್ತು ಭಾರತಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ತಿಳಿಸಿದ್ದಾರೆ. ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.