ಈಗಿನ ಸುದ್ದಿ

ದೇವಯಾನಿ ಪ್ರಕರಣ: ಪ್ರೀತಿ ಬರಾರಗೆ ಜನವರಿ 31ರವರೆಗೆ ಗಡುವು

ದೇವಯಾನಿ ಪ್ರಕರಣ: ಪ್ರೀತಿ ಬರಾರಗೆ ಜನವರಿ 31ರವರೆಗೆ ಗಡುವು
Published On :

ನ್ಯೂಯಾರ್ಕ್: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಕೋಬ್ರಾಗಡೆ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಭಾರತ ಮೂಲದ ಅಮೆರಿಕದ ಸರ್ಕಾರಿ ಪ್ರಾಸಿಕ್ಯೂಟರ್ ಪ್ರೀತ್ ಬರಾರ ಅವರಿಗೆ ಅಮೆರಿಕದ ನ್ಯಾಯಾಲಯ ಜನವರಿ 31ರವರೆಗೆ ಗಡುವು ನೀಡಿದೆ.

ದೇವಯಾನಿ ಅವರು ತಮ್ಮ ಮೇಲೆ ಹೊರಿಸಲಾಗಿರುವ ವೀಸಾ ವಂಚನೆ ಪ್ರಕರಣವನ್ನು ಕೈಬಿಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ವಕೀಲರಾದ ಪ್ರೀತ್ ಬರಾರ್ ಅವರಿಗೆ ಅಮೆರಿಕದ ನ್ಯಾಯಾಲಯದ ಇದೇ ತಿಂಗಳ 31ರಗೊಳಗೆ ಉತ್ತರಿಸುವಂತೆ ಸೂಚಿಸಿದೆ.

ಜನವರಿ 14ರಂದು ದೇವಯಾನಿ ಪರ ವಕೀಲರಾದ ಡ್ಯಾನಿಯಲ್ ಅರ್ಶಾಕ್ ಅವರು, ದೇವಯಾನಿ ಅವರ ಮೇಲೆ ಹೊರಿಸಲಾಗಿರುವ ಜಾಮೀನು ಷರತ್ತುಗಳು, ದೋಷಾರೋಪ, ಹಾಗೂ ಬಹಿರಂಗ ಬಂಧನ ವಾರೆಂಟ್‌ನ್ನು ಕೈಬಿಡುವಂತೆ ಕೋರಿ, ಅಲ್ಲದೇ ತಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿ 13 ಪುಟಗಳನ್ನೊಳಗೊಂಡ ಅರ್ಜಿಯನ್ನು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ದೇವಯಾನಿ ಅರ್ಜಿಗೆ ಅಮೆರಿಕದ ಸರ್ಕಾರ ಪ್ರತಿಕ್ರಿಯೆ ನೀಡಲು ಜನವರಿ 31ರವರೆಗೆ ಕಾಲವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಬರಾರ ಅವರು ಮನವಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.