ಈಗಿನ ಸುದ್ದಿ

ಶಶಿ ತರೂರ್ ದಾಂಪತ್ಯ ಜಗಳದಲ್ಲಿ ನನ್ನ ಪಾತ್ರವಿಲ್ಲ: ಮೆಹರ್ ತರಾರ್

ಶಶಿ ತರೂರ್ ದಾಂಪತ್ಯ ಜಗಳದಲ್ಲಿ ನನ್ನ ಪಾತ್ರವಿಲ್ಲ: ಮೆಹರ್ ತರಾರ್
Published On :

ಇಸ್ಲಾಮಾಬಾದ್: ಕೇಂದ್ರ ಸಚಿವ ಶಶಿ ತರೂರ್ ಮತ್ತು ಅವರ ಪತ್ನಿ ಸುನಂದಾ ಪುಷ್ಕರ್ ಅವರ ದಾಂಪತ್ಯ ಜಗಳದಲ್ಲಿ ನನ್ನ ಪಾತ್ರವಿಲ್ಲ ಎಂದು ಪಾಕಿಸ್ತಾನದ ಪರ್ತಕರ್ತೆ ಮೆಹರ್ ತರಾರ್ ಹೇಳಿದ್ದಾರೆ.

ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ಮೊನ್ನೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದ ಹಿಂದೆ ಮೆಹರ್ ತರಾರ್ ಹೆಸರು ಕೇಳಿಬಂದ ಹಿನ್ನಲೆಯಲ್ಲಿ, ಮೆಹರ್ ಅವರು ತರೂರ್ ಅವರ ದಾಂಪತ್ಯ ವೈಮನಸ್ಯದಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.

ನಾನು ಕೇವಲ ಎರಡು ಬಾರಿ ಮಾತ್ರ ಶಶಿ ತರೂರ್ ಭೇಟಿಯಾಗಿದ್ದೇನೆ. ಒಮ್ಮೆ ಭಾರತಕ್ಕೆ ಭೇಟಿ ನೀಡಿದಾಗ, ಮತ್ತೊಮ್ಮೆ ದುಬೈನಲ್ಲಿ ಎಂದು ಮೆಹರ್ ಹೇಳಿದ್ದಾರೆ.

ನಾನು ತರೂರ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮತ್ತು ಇಮೇಲ್ ಮುಖಾಂತರ ಸಹಜ ಮಾತುಕತೆ ನಡೆಸುತ್ತಿದ್ದೆ. ಇದರಿಂದ ಅವರ ಪತ್ನಿಗೆ ಏಕೆ ಬೇಸರವಾಗಿತ್ತೊ ಎಂದು ತಿಳಿಯದು ಎಂದು ಮೆಹರ್ ತಿಳಿಸಿದ್ದಾರೆ.

45 ವರ್ಷದ ಮೆಹರ್ ತರಾರ್ ಅವರಿಗೆ 13 ವರ್ಷದ ಮಗನಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.