ಈಗಿನ ಸುದ್ದಿ

ರಾಹುಲ್ ಗಾಂಧಿ ಎಮ್.ಫಿಲ್. ಪಡೆದದ್ದು ಯಾವಾಗ?

ರಾಹುಲ್ ಗಾಂಧಿ ಎಮ್.ಫಿಲ್. ಪಡೆದದ್ದು ಯಾವಾಗ?
Published On :

ರಾಹುಲ್ ಗಾಂಧಿ ಸತ್ಯವನ್ನೇ ಹೇಳುತ್ತಿದ್ದಾರೆ !
ಅಮೇಥಿಯಲ್ಲಿ ಕಣಕ್ಕಿಳಿಯಲು ವಾರಾಂತ್ಯದಲ್ಲಿ ನಾಮಪತ್ರ ಸಲ್ಲಿಸಬೇಕಿರುವ ರಾಹುಲ್ ತಮ್ಮ ಪ್ರಮಾಣಪತ್ರದಲ್ಲಿ 'ಸತ್ಯವನ್ನೇ' ಹೇಳಲಿದ್ದಾರೆ.

ಯು.ಕೆ.ಯಲ್ಲಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜ್ ನಿಂದ ೧೯೯೫ರಲ್ಲಿ  ಎಮ್. ಫಿಲ್. ಪಡೆದಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.
ಅವರ ವಿಷಯ: developmental ಎಕನಾಮಿಕ್ಸ್.  ಆದರೆ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಪ್ರಕಾರ - ರಾಹುಲ್ ತಪ್ಪು ದಿನಾಂಕ ಕೊಟ್ಟಿದ್ದಾರೆ - ಅಷ್ಟೇ ಅಲ್ಲ! ತಾವು ಓದಿದ ಕೋರ್ಸ್ ನ ಹೆಸರನ್ನೂ ತಪ್ಪಾಗಿ ಹೇಳಿದ್ದಾರೆ.

ಅದಕ್ಕಿಂತ ಕೆಟ್ಟ ಸುದ್ದಿ ಅಂದರೆ, ರಾಷ್ಟ್ರದ ಮುಂದಿನ ಪ್ರಧಾನಿ ಎಂದು ಬಿಂಬಿತವಾಗಿರುವ ರಾಹುಲ್ ನಾಲ್ಕು ವಿಷಯಗಳಲ್ಲಿ ಒಂದರಲ್ಲಿ ಫೇಲ್ ಆಗಿದ್ದಾರೆ.

National Economic Planning and Policy ಎಂಬ ವಿಷಯದಲ್ಲಿ ರಾಹುಲ್ ೫೮ ಅಂಕ ಮಾತ್ರ ಗಳಿಸಿದ್ದು, ಪಾಸ್ ಆಗಲು ಈ ವಿಷಯದಲ್ಲಿ ಕನಿಷ್ಠ  ೬೦ ಅಂಕಗಳು ಬರಬೇಕಿತ್ತು.
ಇಲ್ಲಿ ತೋರಿರುವ ಸರ್ಟಿಫಿಕೇಟ್ ನಲ್ಲಿ - ೧ ವರ್ಷದ ಕೆಳಗೆ ಡಯಾನ ಕಜೇಮಿ developmental studies (ರಾಹುಲ್ ಹೇಳಿದಂತೆ developmental ಎಕನಾಮಿಕ್ಸ್ ಅಲ್ಲ )  ವಿಭಾಗದ ಕಾರ್ಯದರ್ಶಿ ಸಹಿ ಮಾಡಿದ್ದಾರೆ . ‘Raul Vinci’ ಎಂಬ ಅಜ್ಞಾತ ಹೆಸರಿನಲ್ಲಿ ರಾಹುಲ್ ದಾಖಲಾಗಿದ್ದರು , ಅದರಲ್ಲಿ ತಪ್ಪಿಲ್ಲ, ಕಾರಣ ಏನೆಂದರೆ - ವಿವಿಐಪಿ ಗಳ ಮಕ್ಕಳೆಲ್ಲ ಬ್ರಿಟಿಷ್ ಶಿಕ್ಷಣ ಶಾಲೆಗಳಲ್ಲಿ ಹೀಗೆಯೇ ಅಜ್ಞಾತ ಹೆಸರಿನಲ್ಲಿ ದಾಖಲಾಗಿದ್ದಿದೆ. ಈ ಹೆಸರು ೨೦೦೪ ರಲ್ಲಿ telegraph ಮತ್ತು The hindu ಪತ್ರಿಕೆಗಳಿಂದ ಬಹಿರಂಗವಾಗಿತ್ತು .
ವಿಶ್ವವಿದ್ಯಾಲಯದ ಪ್ರಕಾರ ರಾಹುಲ್ ಎಮ್. ಫಿಲ್.ಪಡೆದದ್ದು ೨೦೦೪-೫ ರ ಅವಧಿಯಲ್ಲಿ, ಪ್ರಮಾಣಪತ್ರದಲ್ಲಿ ಹೇಳಿದಂತೆ ೧೯೯೪-೯೫ ರಲ್ಲಿ ಅಲ್ಲ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.