ಈಗಿನ ಸುದ್ದಿ

ಬಂಡೆ ಸಾವು ತನಿಖೆಗೆ ಬ್ಯಾಲಿಸ್ಟಿಕ್ ತಜ್ಞರ ನೇಮಕ: ಕೆ.ಜೆ.ಜಾರ್ಜ್

ಬಂಡೆ ಸಾವು ತನಿಖೆಗೆ ಬ್ಯಾಲಿಸ್ಟಿಕ್ ತಜ್ಞರ ನೇಮಕ: ಕೆ.ಜೆ.ಜಾರ್ಜ್
Published On :

ಬೆಂಗಳೂರು: ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಕುರಿತು ತನಿಖೆ ನಡೆಸಲು ಬ್ಯಾಲಿಸ್ಟಿಕ್ ತಜ್ಞರನ್ನು ನೇಮಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವಿನ ಕುರಿತು ಸಿಐಡಿ ತಯಾರಿಸಿರುವ ವರದಿಯ ವಿವರವನ್ನು ವಿಧಾನಸಭೆಗೆ ವಿವರಿಸಿದ ಗೃಹ ಸಚಿವ ಜಾರ್ಜ್ ಅವರು, ನಂತರ ತನಿಖಾ ಯೋಜನೆಯನ್ನು ವಿವರಿಸಿದರು. 'ಬಂಡೆ ಸಾವಿನ ಪ್ರಕರಣವನ್ನು 3 ಹಂತಗಳಲ್ಲಿ 3 ವಿಭಾಗಗಳಾಗಿ ತನಿಖೆ ನಡೆಸಲಾಗುವುದು. ಇದಕ್ಕಾಗಿ ವಿಧಿ ವಿಜ್ಞಾನ ತಜ್ಞರನ್ನು ಬಳಸಿಕೊಳ್ಳಲಾಗುವುದು. ವಿಶೇಷವಾಗಿ ಬ್ಯಾಲಿಸ್ಟಿಕ್ ತಜ್ಞರನ್ನು ಬಳಸಿಕೊಂಡು ಪ್ರಕರಣದ ಎಲ್ಲ ಘಟನೆಗಳ ಸಮಗ್ರ ತನಿಖೆ ನಡೆಸಲಾಗುತ್ತದೆ' ಎಂದು ಅವರು ತಿಳಿಸಿದರು.

'ಸಿಐಡಿ ವರದಿಯನ್ವಯ ತನಿಖಾಧಿಕಾರಿಗಳಿಗೆ ವೈಜ್ಞಾನಿಕ, ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಸಲಹೆ ನೀಡಿದ್ದು, ಘಟನೆಯ ಪ್ರತಿಯೊಂದು ಸೂಕ್ಷ್ಮ ಅಂಶಗಳನ್ನು ದಾಖಲಿಸುವಂತೆ ಸೂಚಿಸಲಾಗಿದೆ. ರೌಡಿ ಮುನ್ನ ಬಂಧನಕ್ಕಾಗಿ ತಂಡ ಹೊರಡುವ ಮುನ್ನ ನಡೆದ ಘಟನೆಗಳಿಂದ ಹಿಡಿದು ಮುನ್ನಾ ಮನೆಯಲ್ಲಿ ನಡೆದ ಪ್ರತಿಯೊಂದು ಘಟನೆ ವಿವರ ಮತ್ತು ಘಟನೆ ಸಂದರ್ಭದಲ್ಲಿ ಬಂಡೆ ಅವರಿಗೆ ಎಷ್ಟು ಅಡಿಯಿಂದ ಗುಂಡು ಹಾರಿದೆ. ಗುಂಡು ಹಾರಿರುವ ಅಂತರ ಮತ್ತು ಆ ಸಂದರ್ಭದಲ್ಲಿ ಬಂಡೆ ಅವರಿದ್ದ ಅಂತರದಂತಹ ಸೂಕ್ಷ್ಮ ಅಂಶಗಳನ್ನು ದಾಖಲಿಸುವಂತೆ ಸಲಹೆ ನೀಡಲಾಗಿದೆ' ಎಂದು ಜಾರ್ಜ್ ಹೇಳಿದರು.

ಒಟ್ಟಾರೆ ಇಡೀ ರಾಜ್ಯದ ಗಮನ ಸೆಳೆದಿರುವ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವು ಪ್ರಕರಣ ಇದೀಗ ಹೊಸ ದಿಕ್ಕಿನತ್ತ ಸಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.