ಈಗಿನ ಸುದ್ದಿ

ರಣಜಿ: 2ನೇದಿನ ಬೌಲರ್‌ಗಳ ಪಾರಮ್ಯ, 305ಕ್ಕೆ 'ಮಹಾ' ಆಲೌಟ್

ರಣಜಿ: 2ನೇದಿನ ಬೌಲರ್‌ಗಳ ಪಾರಮ್ಯ, 305ಕ್ಕೆ 'ಮಹಾ' ಆಲೌಟ್
Published On :

ಹೈದರಾಬಾದ್: ರಣಜಿ ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯದ 2ನೇ ದಿನ ಕರ್ನಾಟಕ ಪಾರಮ್ಯ ಮೆರೆದಿದ್ದು, ಮಹಾರಾಷ್ಟ್ರ ತಂಡವನ್ನು 305ರನ್ ಗಳಿಗೆ ಆಲೌಟ್ ಮಾಡಿದ್ದಾರೆ.

ಮುತ್ತಿನನಗರಿ ಹೈದರಾಬಾದಿನಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದು, ಮಹಾರಾಷ್ಟ್ರವನ್ನು 305ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 272ರನ್ ಗಳನ್ನು ಗಳಿಸಿದ್ದ ಮಹಾರಾಷ್ಟ್ರ ತಂಡ ಇಂದು ಆ ಮೊತ್ತಕ್ಕೆ 33 ರನ್ ಗಳನ್ನು  ಸೇರಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಆಲ್‌ಔಟ್ ಆಯಿತು.

ನಿನ್ನೆ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಅಂಕಿತ್ ಭಾವ್ನೆ (89 ರನ್)ಅವರು ಇಂದು ಒಂದೂ ರನ್ ಗಳಿಸದೇ ಮಿಥುನ್ ಅವರಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ಮಹಾರಾಷ್ಟ್ರ ತಂಡದ ಪಥನ ಆರಂಭವಾಯಿತು. ಭಾವ್ನೆ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ಸಂಗ್ರಾಮ್ ಅತೀತ್‌ಕರ್ ಅವರು ಅರ್ಧ ಶತಕ ದಾಖಲಿಸಿ ಔಟ್ ಆದರು. ಅನಂತರ ಬಂದ ಮಹಾರಾಷ್ಟ್ರದ ಬಾಲಂಗೋಚಿಗಳು ಕರ್ನಾಟಕದ ಪ್ರಭಾವಿ ಬೌಲಿಂಗ್‌ನಿಂದಾಗಿ ಪೆವಿಲಿಯನ್ ಪರೇಡ್ ನಡೆಸಬೇಕಾಯಿತು.

ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮಹಾರಾಷ್ಟ್ರ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕಿದ ಅಭಿಮನ್ಯು ಮಿಥುನ್, ನಾಯಕ ಆರ್.ವಿನಯ್ ಕುಮಾರ್ ಮತ್ತು ಎಸ್.ಅರವಿಂದ್ ಅವರು ತಲಾ 3 ವಿಕೆಟ್ ಪಡೆದು ಸಂಭ್ರಮಿಸಿದರು.

ಇದೀಗ ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ತಂಡ ವಿಕೆಟ್ ನಷ್ಟವಿಲ್ಲದೆ 121ರನ್ ಗಳಿಸಿದೆ. 10 ರನ್ ಗಳಿಸಿದ್ದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರು ಗಾಯದ ಸಮಸ್ಯೆಯಿಂದಾಗಿ ಪೆವಿಲಿಯನ್‌ಗೆ ವಾಪಸಾದರು. ಅವರ ನಂತರ ಬಂದ ಗಣೇಶ್ ಸತೀಶ್ ಉತ್ತಮವಾಗಿ ಆಟವಾಡುತ್ತಿದ್ದು 58 ರನ್‌ಗಳಿಸಿದ್ದಾರೆ. ಗಣೇಶ್‌ಗೆ ಉತ್ತಮ ಸಾಥ್ ನೀಡುತ್ತಿರುವ ರಾಹುಲ್ ಅರ್ಧಶತಕ ದಾಖಲಿಸಿ ಆಟವಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.