ಈಗಿನ ಸುದ್ದಿ

'ಸ್ಕೈಡೈವಿಂಗ್' ಮಹಿಳೆ ಸಾವು: ತರಬೇತಿ ಸಂಸ್ಥೆ ವಿರುದ್ಧ ಪತಿ ದೂರು

'ಸ್ಕೈಡೈವಿಂಗ್' ಮಹಿಳೆ ಸಾವು: ತರಬೇತಿ ಸಂಸ್ಥೆ ವಿರುದ್ಧ ಪತಿ ದೂರು
Published On :

ಚೆನ್ನೈ: ಸ್ಕೈಡೈವಿಂಗ್ ಸಾವಿಗೀಡಾದ ತಮ್ಮ ಪತ್ನಿ ರಮ್ಯಾ ಅವರ ಸಾವಿಗೆ ತರಬೇತಿ ಸಂಸ್ಥೆಯೇ ಕಾರಣ ಎಂದು ಆರೋಪಿಸಿ ಪತಿ ವಿನೋದ್ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.

ನಿನ್ನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಸ್ಕೈಡೈವಿಂಗ್ ವೇಳೆ ಮೃತಪಟ್ಟಿದ್ದ ಬೆಂಗಳೂರು ಮೂಲದ ರಮ್ಯಾ ಅವರ ಸಾವಿಗೆ ತರಬೇತಿ ಸಂಸ್ಥೆಯಾದ ಇಂಡಿಯನ್ ಸ್ಕೈಡೈವಿಂಗ್ ಪ್ಯಾರಾಚೂಟ್ ಸಂಸ್ಥೆ (ಐಎಸ್ಪಿಎ)ಯೇ ಕಾರಣ ಎಂದು ಪತಿ ವಿನೋದ್ ದೂರು ನೀಡಿದ್ದಾರೆ. ಈ ಬಗ್ಗೆ ಒಮ್ಲೂರು ಠಾಣೆಯಲ್ಲಿ ದೂರು ದಾಖಲಿಸಿರುವ ವಿನೋದ್ ಅವರು, ಸ್ಕೈಡೈವಿಂಗ್ ವೇಳೆ ಈ ಸಂಸ್ಥೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿಯೇ ತನ್ನ ಪತ್ನಿ ರಮ್ಯಾ ಸಾವಿಗೀಡಾಗಬೇಕಾಯಿತು ಎಂದು ಆರೋಪಿಸಿದ್ದಾರೆ.

'ಸ್ಕೈಡೈವಿಂಗ್ ವೇಳೆ ವಿಮಾನದಲ್ಲಿ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಮಾಡಲು ಯಾರೂ ಇರಲಿಲ್ಲ. ರನ್ ವೇಯಲ್ಲಿಯೂ ಸಹ ಯಾರೂ ಇರಲಿಲ್ಲ. ಆ ಸಂದರ್ಭದಲ್ಲಿ ನನ್ನ ಪತ್ನಿ ರಮ್ಯಾಗೆ ಯಾರಾದರೂ ಸೂಕ್ತ ತರಬೇತಿ ನೀಡಿ ಮಾರ್ಗದರ್ಶನ ಮಾಡಿದ್ದರೆ ಆಕೆ ಬದುಕಿರುತ್ತಿದ್ದಳು. ನನ್ನ ಪತ್ನಿ ಸಾವಿಗೆ ಐಎಸ್ಪಿಎ ಸಂಸ್ಥೆಯೇ ಕಾರಣ' ಎಂದು ವಿನೋದ್ ದೂರಿನಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.