ಈಗಿನ ಸುದ್ದಿ

ಲೋಕಾ ಸಮರ: ಕೈ ಮೊದಲ ಪಟ್ಟಿ ಬಿಡುಗಡೆ

ಲೋಕಾ ಸಮರ: ಕೈ ಮೊದಲ ಪಟ್ಟಿ ಬಿಡುಗಡೆ
Published On :

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಬಹುತೇಕ ಹಾಲಿ ಸಂಸದರಿಗೆ ಮಣೆಹಾಕಿದೆ.

ಒಟ್ಟು 194 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ರಾಯ್ ಬರೇಲಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ ಇಂದು ಒಟ್ಟು 14 ಮಂದಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗ ಕ್ಷೇತ್ರದಿಂದ, ಧರಂ ಸಿಂಗ್ ಅವರು ಬೀದರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಹುನಿರೀಕ್ಷಿತ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಧಾರ್ ಖ್ಯಾತಿಯ ನಂದನ್ ನಿಲೇಕಣಿ ಅವರಿಗೆ ಟಿಕೆಟ್ ನೀಡಲಾಗಿದೆ.

ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಇಂತಿದೆ.
ಬೆಂಗಳೂರು ದಕ್ಷಿಣ-ನಂದನ್ ನಿಲೇಕಣಿ
ಮಂಡ್ಯ-ರಮ್ಯಾ
ಮೈಸೂರು-ಹೆಚ್.ವಿಶ್ವನಾಥ್
ಉಡುಪಿ ಮತ್ತು ಚಿಕ್ಕಮಗಳೂರು-ಜಯಪ್ರಕಾಶ್ ಹೆಗ್ಡೆ
ಚಾಮರಾಜನಗರ-ದ್ರುವ ನಾರಾಯಣ
ಹಾಸನ-ಎ.ಮಂಜು
ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್
ಗುಲ್ಬರ್ಗ-ಮಲ್ಲಿಕಾರ್ಜುನ ಖರ್ಗೆ
ಬೀದರ್-ಧರಂ ಸಿಂಗ್
ಬಳ್ಳಾರಿ-ಎನ್,ವೈ ಹನುಮಂತಪ್ಪ
ತುಮಕೂರು-ಮುದ್ದ ಹನುಮಗೌಡ
ಕೋಲಾರ ಕೆಎಚ್ ಮುನಿಯಪ್ಪ
ಬಿಜಾಪುರ-ಪ್ರಕಾಶ್ ರಾಥೋಡ್
ದಾವಣಗೆರೆ- ಎಸ್‌ಎಸ್ ಮಲ್ಲಿಕಾರ್ಜುನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.