ನಿಡೋ ತಾನಿಯಮ್ ಹತ್ಯೆ: ಸಿಬಿಐನಿಂದ ಚಾರ್ಜ್ಶೀಟ್ ಸಲ್ಲಿಕೆ

ನವದೆಹಲಿ: ದೆಹಲಿಯ ಲಜಪತ್ನಗರದಲ್ಲಿ ನಡೆದಿದ್ದ ಅರುಣಾಚಲ ಪ್ರದೇಶದ ವಿದ್ಯಾರ್ಥಿ ನಿಡೋ ತಾನಿಯಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶುಕ್ರವಾರ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
3 ಬಾಲಕರು ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಈ ಹಿಂದೆ ನಿಡೋ ತಾನಿಯಮ್ನದ್ದು ಜನಾಂಗೀಯ ಹತ್ಯೆ ಎಂಬ ಆರೋಪವೂ ಕೇಳಿಬರುತ್ತಿದೆ. ವೈದ್ಯಕೀಯ ವರದಿಯನ್ವಯ ನಿಡೋ ತಾನಿಯಮ್ನ ತಲೆಗೆ ಬಿದ್ದಿದ್ದ ಬಲವಾದ ಪೆಟ್ಟಿನಿಂದಲೇ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿತ್ತು.
ಕಳೆದ ಜನವರಿ 19ರಂದು ದೆಹಲಿಯ ತನ್ನ ಆಪಾರ್ಟ್ಮೆಂಟ್ನಲ್ಲಿ ನಿಡೋ ತಾನಿಯಮ್ ಮೃತದೇಹ ದೊರೆತಿತ್ತು. ತನ್ನ ಸ್ನೇಹಿತನನ್ನು ಹುಡುಕುತ್ತಾ ತನ್ನ ಅಪಾರ್ಟ್ಮೆಂಟ್ ಪಕ್ಕದ ಲಜಪತ್ ನಗರಕ್ಕೆ ಭೇಟಿ ನೀಡಿದ್ದ ನಿಡೋ ತಾನಿಯಮ್ ಮೇಲೆ ಅಲ್ಲಿನ ಸ್ಥಳೀಯ ಯುವಕರ ಗುಂಪು ದಾಳಿ ಮಾಡಿತ್ತು ಎಂಬ ಅಂಶ ಆತನ ಸ್ನೇಹಿತರಿಂದ ತಿಳಿದು ಬಂದಿತ್ತು.
ನಿಡೋ ತಾನಿಯಮ್ ಅರುಣಾಚಲಪ್ರದೇಶ ಕಾಂಗ್ರೆಸ್ ಶಾಸಕ ನಿಡೋ ಪಲ್ಲವಿ ಅವರ ಪುತ್ರನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಆಗಮಿಸಿದ್ದನು. ಜನವರಿ 19ರಂದು ತನ್ನ ಸ್ನೇಹಿತನನ್ನು ನೋಡಲು ಆಫ್ರಿಕಾ ಮತ್ತು ಈಶಾನ್ಯ ಭಾರತೀಯರೇ ಹೆಚ್ಚಾಗಿ ವಾಸಿಸುವ ಲಜಪತ್ ನಗರಕ್ಕೆ ತೆರಳಿದ್ದನು. ಲಜಪತ್ನಗರದ ಅಂಗಡಿಯೊಂದರ ಮುಂದೆ ಕುಳಿತಿದ್ದ ಕೆಲ ಯುವಕರ ಗುಂಪು ನಿಡೋ ತಾನಿಯಮ್ ನ ಸ್ಪೈಕ್ ಹೇರ್ ಸ್ಟೈಲ್ ಅನ್ನು ಕಂಡು ಹಾಸ್ಯ ಮಾಡಿದ್ದಾರೆ. ಈ ವೇಳೆ ನಿಡೋ ತಾನಿಯಮ್ ಮತ್ತು ಆ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಿಮಿಸಿದ ಪೊಲೀಸರೊಬ್ಬರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಗೊಳಿಸಿ ಮನೆಗೆ ಕಳುಹಿಸಿದ್ದಾರೆ.
ಜಗಳದ ವೇಳೆ ನಿಡೋ ತಾನಿಯಮ್ ತಲೆಗೆ ಬಲವಾದ ಪೆಟ್ಟುಬಿದ್ದಿತ್ತು. ಅದನ್ನು ಅರಿಯದೇ ಆತ ತನ್ನ ಫ್ಲಾಟ್ಗೆ ಹಿಂದುರಿಗಿದ್ದ ಆದರೆ ಬೆಳಗ್ಗೆ ಶವವಾಗಿದ್ದನು. ತಲೆಗೆ ಬಿದ್ದಿದ್ದ ಬಲವಾದ ಪೆಟ್ಟು ಆತನ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡಿತ್ತು.
ಪ್ರಕರಣ ಸಂಬಂಧ ಅಂದು ದೆಹಲಿ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ನಿಡೋ ತಾನಿಯಮ್ ಹತ್ಯೆ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕ್ರಮೇಣ ಇದೊಂದು ಜನಾಂಗೀಯ ಹತ್ಯೆ ಎಂಬ ವಾದಗಳು ಕೂಡ ಕೇಳಿ ಬಂದಿತ್ತು. ಈ ಬಗ್ಗೆ ಸ್ವತಃ ಅರುಣಾಚಲ ಪ್ರದೇಶದ ಕಾಂಗ್ರೆಸ್ ಮುಖಂಡರು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ನಿಡೋ ತಾನಿಯಮ್ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


